ಸಾರಾಂಶ
ದೇಶದ ಹಣೆಬರಹ ಬದಲಾಯಿಸಿದ ಈ ದೇಶದ ಸಂವಿಧಾನಕ್ಕೆ ಬದ್ಧರಾಗೋಣ ಎಂದು ನಗರದ ಕಸಾಪ ಆವರಣದಲ್ಲಿ ೭೫ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ವಿಜಯಪುರ: ದೇಶದ ಹಣೆಬರಹ ಬದಲಾಯಿಸಿದ ಈ ದೇಶದ ಸಂವಿಧಾನಕ್ಕೆ ಬದ್ಧರಾಗೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ನಗರದ ಕಸಾಪ ಆವರಣದಲ್ಲಿ ೭೫ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢ ಮಾಡಬೇಕಿದೆ. ಭಾರತ ಪ್ರಗತಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಕೆಲವು ವಷ೯ಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿಯ ಹೊಂದಿದ ರಾಷ್ಟ್ರವಾಗುವಲ್ಲಿ ಸಂಶಯವಿಲ್ಲ ಎಂದರು.ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿ, ದೇಶ ಲಿಖಿತ ಸಂವಿಧಾನ ಹೊಂದಿರುವುದರಿಂದ ಪ್ರತಿಯೊಬ್ಬ ನಾಗರಿಕರು ಘನತೆ ಗೌರವದಿಂದ ಬದುಕುವ ಹಕ್ಕುಗಳನ್ನು ಸಂವಿಧಾನ ನೀಡಿದೆ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕಸಾಪ ಪದಾಧಿಕಾರಿ ಎಸ್.ಎಲ್ ಇಂಗಳೇಶ್ವರ ಮಾತನಾಡಿದರು. ಅನ್ನಪೂರ್ಣ ಬೆಳ್ಳನವರ, ಮಹಮ್ಮದ ಗೌಸ ಹವಾಲ್ದಾರ, ಅರ್ಜುನ ಶಿರೂರ, ರಾಜೇಸಾಬ ಶಿವನಗುತ್ತಿ, ಖಾಜಾಮೈನುದ್ದೀನ ಪಟೇಲ, ಎಸ್.ಎಸ್.ಕಟ್ಟಿ. ಎ.ಡಿ ಮುಲ್ಲಾ, ಐ.ಟಿ ಪಡಗಣ್ಣವರ. ಎ.ಡಿ ಎಲ್ಲಾಪೂರ, ಮೌಲಾಲಿ ಬಸಂತಪೂರ, ಶಾಂತಾ ವಿಭೂತಿ, ಆರ್.ಬಿ ಬಿರಾದಾರ, ಶಿವಕುಮಾರ ಕುದರಗೊಂಡ, ಮಹಮ್ಮದ ವಾಲೀಕಾರ, ವಿಜಯಲಕ್ಷ್ಮಿ ಹಳಕಟ್ಟಿ, ರುಕ್ಮಿಣಿ ಚವ್ಹಾಣ, ಎಲ್.ಎಲ್ ಚವ್ಹಾಣ, ಯುವರಾಜ ಚೊಳಕೆ, ಎ.ಎಲ್ ಹಳ್ಳೂರ, ಶಶಿಕಲಾ ಬುಯ್ಯಾರ, ಸುನಂದಾ ಕೋರಿ, ಆಶಾಗೌಡತಿ ಬಿರಾದಾರ, ಸುಹಾಸಿನಿ ಹೊಕ್ಕುಂಡಿ, ಡಿ.ಎಚ್ ಕೊಲ್ಹಾರ. ಎಂಎ ಬಳಗಾನೂರ, ಕುಶುಭು ಪಾಲ್, ಪ್ರೀತಿ ಪಾಲ್ ಮುಂತಾದವರು ಉಪಸ್ಥಿತರಿದ್ದರು.