ಸುಂದರ ಸಮಾಜ ನಿರ್ಮಿಸುವಲ್ಲಿ ಕಾರ್ಯರೂಪ ಕೈಗೊಳ್ಳೋಣ

| Published : Aug 31 2024, 01:35 AM IST

ಸಾರಾಂಶ

ಲಯನ್ಸ್ ಕ್ಲಬ್ ಬಿಜಾಪುರ ಪರಿವಾರ ಈಗಾಗಲೇ ಸಾಕಷ್ಟು ಸಾಮಾಜಿಕ ಕಳಕಳಿ ಮೆರೆಯುವುದರ ಮೂಲಕ ಪರಿಚತಗೊಂಡಿದೆ. ಈ ಸಂಸ್ಥೆಯು ಪ್ರತಿಯೊಂದು ಕಾರ್ಯಕ್ರಮವು ಸಮಾಜದ ಬೆಳವಣಿಗೆಗೆ ಪ್ರೇರಣೆಯಾಗಿವೆ. ನಾನು ಸಾಮಾಜಿಕ ಕ್ಷೇತ್ರದಲ್ಲಿ ಪಾಲ್ಗೊಂಡು ಲಯನ್ಸ್ ಪರಿವಾರ ಸಂಸ್ಥೆಗೆ ಬೆನ್ನೆಲಬಾಗಿ ನಿಲ್ಲುತ್ತೇನೆ ಎಂದು ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲಯನ್ಸ್ ಕ್ಲಬ್ ಬಿಜಾಪುರ ಪರಿವಾರ ಈಗಾಗಲೇ ಸಾಕಷ್ಟು ಸಾಮಾಜಿಕ ಕಳಕಳಿ ಮೆರೆಯುವುದರ ಮೂಲಕ ಪರಿಚತಗೊಂಡಿದೆ. ಈ ಸಂಸ್ಥೆಯು ಪ್ರತಿಯೊಂದು ಕಾರ್ಯಕ್ರಮವು ಸಮಾಜದ ಬೆಳವಣಿಗೆಗೆ ಪ್ರೇರಣೆಯಾಗಿವೆ. ನಾನು ಸಾಮಾಜಿಕ ಕ್ಷೇತ್ರದಲ್ಲಿ ಪಾಲ್ಗೊಂಡು ಲಯನ್ಸ್ ಪರಿವಾರ ಸಂಸ್ಥೆಗೆ ಬೆನ್ನೆಲಬಾಗಿ ನಿಲ್ಲುತ್ತೇನೆ ಎಂದು ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.

ನಗರದ ಸೊಲಾಪೂರ ರಸ್ತೆಯ ಅಪ್ಸರಾವಾಡನಲ್ಲಿ ನಡೆದ ಲಯನ್ಸ್ ಕ್ಲಬ್ ಬಿಜಾಪುರ ಪರಿವಾರದ 2024-25ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಸಮಾಜಕ್ಕೆ ದಿನನಿತ್ಯ ಏನಾದರೂ ಕೊಡುಗೆ ಕೊಟ್ಟರೇ ನಮ್ಮ ಬದುಕಿಗೆ ಒಂದು ಅರ್ಥ ಸಿಗುತ್ತದೆ. ಹೀಗಿರುವ ನಾವೆಲ್ಲರೂ ಸೇರಿಕೊಂಡು ಸುಂದರ ಸಮಾಜ ನಿರ್ಮಿಸುವಲ್ಲಿ ಕಾರ್ಯರೂಪ ಕೈಗೊಳ್ಳೋಣ ಎಂದರು.ಪದಗ್ರಹ ಅಧಿಕಾರಿ ಲಯನ್ ಎಂ.ಜೆ.ಎಫ್ ಮಹೇಶ ದರಬಾರ ಮಾತನಾಡಿ, ಲಯನ್ಸ್ ಕ್ಲಬ್ ಬಿಜಾಪುರ ಸಂಸ್ಥೆಯಲ್ಲಿ ಪಾಲ್ಗೊಂಡ ಪದಾಧಿಕಾರಿಗಳಿಗೆ ಇದರಿಂದ ಯಾವುದೇ ಲಾಭವಿಲ್ಲ. ಆದರೆ, ಸಂಸ್ಥೆಯಿಂದ ಸಮಾಜಕ್ಕೆ ಸಾಕಷ್ಟು ಲಾಭಗಳಿವೆ. ಯಾವುದೇ ಪಲಾಫೇಕ್ಷೆ ಬಯಸದೆ ಸರ್ವ ಪದಾಧಿಕಾರಿಗಳು ಅಧ್ಯಕ್ಷರು ಶ್ರಮವಹಿಸಿ ಸುಂದರವಾದ ಸಮಾಜಕ್ಕೆ ಕಾರಣಿಕರ್ತರಾಗಿದ್ದಾರೆ. ಇದರಿಂದ ನಾವೆಲ್ಲರೂ ಈ ಸಂಸ್ಥೆಗೆ ಮಾಡುವ ಪ್ರತಿಯೊಂದ ಒಳ್ಳೆಯ ಕಾರ್ಯಕ್ಕೆ ನಮ್ಮದು ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು.ಲಯನ್ ಎಂಜೆಎಫ್ ಬಿ.ಕೆ.ಕನ್ನೂರ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಯಾದ ಈ ಸಂಸ್ಥೆಗೆ ಇನ್ನಷ್ಟು ಎತ್ತರಕ್ಕೆ ಬೆಳೆದು ಸಮಾಜದ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಲಿ ಎಂದರು.ಪ್ರೊ.ಎಂ.ಬಿ.ರಜಪೂತ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಿಂದ ಆಗದ ಕೆಲವು ಸಮಾಜಮುಖಿ ಕೆಲಸಗಳನ್ನು ಮುಂಬರುವ ವರ್ಷದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕೈಜೋಡಿಸಿಕೊಂಡು ಕೆಲಸ ಮಾಡಲು ಅಣಿಯಾಗುತ್ತೇವೆ ಎಂದರು.ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾಗಿ ಡಾ.ಅಶೋಕಕುಮಾರ ಜಾಧವ, ಸಿ.ಎಸ್. ನಿಂಬಾಳ, ವಾಲು ಚವ್ಹಾಣ, ಎಂ.ಬಿ.ರಜಪೂತ, ಎಚ್.ಎಸ್.ರಾಜಮಾನೆ, ಡಾ.ಬಾಬುರಾಜೇಂದ್ರ ನಾಯಕ, ಬಿ.ಎನ್.ಬಿರಾದಾರ, ಎ.ಎಸ್.ಕುಲಕರ್ಣಿ, ಎಸ್.ಆರ್‌.ಕಟ್ಟಿ, ಎಚ್. ಕಲಾದಗಿ, ಎ.ಆರ್.ಲಮಾಣಿ, ರಾಜೇಶ ಗಾಯಕವಾಡ, ಸಾಧಿಕ ಜಾನ್ವೇಕರ, ವಿದ್ಯಾ ಕೋಟೇನವರ, ರಜನಿ ಸಂಬಣ್ಣಿ, ಜಯಶ್ರಿ ಲದ್ವಾ, ತಾರಾಸಿಂಗ ದೊಡಮನಿ, ನಿರ್ದೇಶಕರನ್ನಾಗಿ ಎಸ್.ಎಸ್.ಗಂಗನಳ್ಳಿ, ಡಾ.ರವಿಂದ್ರ ಮದ್ದರಕಿ, ಡಾ.ಅಶೋಕ ನಾಯಕ, ಡಾ.ಅಶೋಕ ಬಿರಾದಾರ, ಪ್ರಕಾಶ ದರಬಾರ, ಡಾ.ಗೀರಿಶ ಕುಲ್ಲೊಳ್ಳಿ, ಡಾ.ರವಿ ನಾಯಕ, ಡಾ.ನಚಿಕೇತ ದೇಸಾಯಿ, ಶಾಂತಾ ಉತ್ಲಾಸರ, ಸದಸ್ಯರನ್ನಾಗಿ ಶೈಲಾ ಪಾಟೀಲ, ಶ್ರೀದೇವಿ ಲೋಗಾವಿ, ಇಂದುಮತಿ ಕನ್ನೂರ, ಅನುಶಾ ನಿಂಬರಗಿ, ಮೀನಾಕ್ಷಿ ಪತ್ತಾರ, ಚಿದಾನಂದ ಸಂಬಣ್ಣಿ, ಧರ್ಮರಾಯ ಮಮದಾಪೂರ, ಸಿದ್ದನಗೌಡ ಪಾಟೀಲ ಆಯ್ಕೆಯಾದರು. ಡಾ.ಅಶೋಕ ಜಾಧವ ನಿರೂಪಿಸಿದರು. ಶ್ರೇಯಸ್ ಮಹೇಂದ್ರಕರ ವಂದಿಸಿದರು.

ನಾವು ಸಮಾಜಕ್ಕೆ ದಿನನಿತ್ಯ ಏನಾದರೂ ಕೊಡುಗೆ ಕೊಟ್ಟರೇ ನಮ್ಮ ಬದುಕಿಗೆ ಒಂದು ಅರ್ಥ ಸಿಗುತ್ತದೆ. ಹೀಗಿರುವ ನಾವೆಲ್ಲರೂ ಸೇರಿಕೊಂಡು ಸುಂದರ ಸಮಾಜ ನಿರ್ಮಿಸುವಲ್ಲಿ ಕಾರ್ಯರೂಪ ಕೈಗೊಳ್ಳೋಣ.

-ಶೈಲಜಾ ಬಸನಗೌಡ ಪಾಟೀಲ (ಯತ್ನಾಳ).