ಸಾರಾಂಶ
ಬಿಜೆಪಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಅತ್ಯಗತ್ಯ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಗೊಳ್ಳಿಸುವ ಸಲುವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನೂತನ ಕೊರಟಗೆರೆ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಟಿ.ಎನ್.ರುದ್ರೇಶ್ ತಿಳಿಸಿದರು.
ಕೊರಟಗೆರೆ ವಾರ್ತೆ ಕೊರಟಗೆರೆ
ಬಿಜೆಪಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಅತ್ಯಗತ್ಯ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಗೊಳ್ಳಿಸುವ ಸಲುವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನೂತನ ಕೊರಟಗೆರೆ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಟಿ.ಎನ್.ರುದ್ರೇಶ್ ತಿಳಿಸಿದರು.ಪಟ್ಟಣದ ನವೀನ್ ಕಂಫಟ್‌ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ನೂತನವಾಗಿ ಕೊರಟಗೆರೆ ಮಂಡಲ ಅಧ್ಯಕ್ಷರಿಗೆ ಅಭಿನಂದನಾ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.ಮಂಡಲ ಅಧ್ಯಕ್ಷ ಎನ್ನವುದು ಒಂದು ಹುದ್ದೆ ಪ್ರೋಟೋಕಾಲ್ ಅಷ್ಟೇ. ನಾನು ಕೂಡ ಒಬ್ಬ ಬೂತ್ ಸದಸ್ಯನಾಗಿ ಕೆಲಸ ಮಾಡುತ್ತೇನೆ. ಇಲ್ಲಿ ಯಾರು ಅಧ್ಯಕ್ಷರಲ್ಲ ಎಲ್ಲರೂ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಿ ಮುಂದೆ ಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸ್ಪರ್ಧಿಸಿ ಬಿಜೆಪಿ ಪಕ್ಷವನ್ನ ನಮ್ಮ ಕ್ಷೇತ್ರದಲ್ಲಿ ಸದೃಢಗೊಳಿಸೋಣ ಎಂದು ತಿಳಿಸಿದರು.ಮಧುಗಿರಿ ಜಿಲ್ಲಾ ಉಪಾಧ್ಯಕ್ಷ ಪವನ್ ಕುಮಾರ್ ಮಾತನಾಡಿ ಬಿಜೆಪಿ ಪಕ್ಷದ ಕಾರ್ಯಕರ್ತರು ಗಟ್ಟಿಯಾಗಿ ಇದ್ದರೆ ಪಕ್ಷವು ಗಟ್ಟಿಯಾಗಿ ಇರುತ್ತದೆ. ನೂತನ ಅಧ್ಯಕ್ಷರಾದ ರುದ್ರೇಶ್ ಅವರು ಕಾರ್ಯಕರ್ತರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಹೋಗಬೇಕಿದೆ ಎಂದರು.ಮಧುಗಿರಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್‌ಸ್ವಾಮಿ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಮಾತ್ರ ತಳ ಮಟ್ಟದ ಕಾರ್ಯಕರ್ತರು ಮಾತ್ರ ಅಧ್ಯಕ್ಷರಾಗಿ ಬರಲು ಸಾಧ್ಯ. ಇನ್ನಾವ ಪಕ್ಷಗಳು ಕಾರ್ಯಕರ್ತರನ್ನು ಬೆಳೆಸಲ್ಲ. ಮುಂದಿನ ದಿನಗಲ್ಲಿ ರುದ್ರೇಶ್ ಅವರ ಪದಗ್ರಹಣ ದೊಡ್ಡ ದೊಡ್ಡ ನಾಯಕರನ್ನು ಕರೆಸಿ ಬೃಹತ್ ಕಾರ್ಯಕ್ರಮ ಮಾಡಲು ತಯಾರಿ ಮಾಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜು, ಜಿಲ್ಲಾ ಕಾರ್ಯದರ್ಶಿ ಅರುಣ್‌ಕುಮಾರ್, ಹಿರಿಯ ಬಿಜೆಪಿ ಮುಖಂಡ ಚಂದ್ರಪ್ಪ, ಸಿ.ಎನ್ ದುರ್ಗಾ ಹೋಬಳಿಯ ಅಧ್ಯಕ್ಷ ಸಿದ್ದನಂಜಪ್ಪ, ಕಸಬಾ ಅಧ್ಯಕ್ಷ ದಯಾನಂದ್, ಮುಖಂಡರಾದ ಮೋಹನ್, ಮುಕ್ಕಣ್ಣಪ್ಪ, ಕುಮಾರಣ್ಣ, ರಾಜೇಂದ್ರ, ಗುರುದತ್, ರಂಗನಾಥ್, ಅನಂದ್, ಶಿವಕುಮಾರ್, ಮೋಹನ್, ಶ್ರೀಧರ್, ನಂಜುಂಡಪ್ಪ, ಸಿದ್ದನಂಜಪ್ಪ, ಸೇರಿದಂತೆ ಇತರರು ಇದ್ದರು.