ಸೋಲಾರ್‌ ಕಂಪನಿಗಳು ಸ್ಥಳೀಯರಿಗೆ ಕೆಲಸ ನೀಡಲಿ

| Published : Dec 18 2024, 12:47 AM IST

ಸಾರಾಂಶ

ಕರ್ನಾಟಕ ರಾಜ್ಯದ ಗಡಿನಾಡು ಪಾವಗಡದಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದು ಸೋಲಾರ್ ಕಂಪನಿಗಳಲ್ಲಿ ಸ್ಥಳೀಯ ಪಾವಗಡದ ಕರ್ನಾಟಕದವರಿಗೆ ಹೆಚ್ಚು ಉದ್ಯೋಗ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡಪ್ರಭವಾರ್ತೆ ಪಾವಗಡ

ಕರ್ನಾಟಕ ರಾಜ್ಯದ ಗಡಿನಾಡು ಪಾವಗಡದಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದು ಸೋಲಾರ್ ಕಂಪನಿಗಳಲ್ಲಿ ಸ್ಥಳೀಯ ಪಾವಗಡದ ಕರ್ನಾಟಕದವರಿಗೆ ಹೆಚ್ಚು ಉದ್ಯೋಗ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಪಟ್ಟಣದ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಕರ್ನಾಟಕದ ಗಡಿನಾಡು ಪಾವಗಡದಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದು ಸೋಲಾರ್ ಕಂಪನಿಗಳು ಸ್ಥಳೀಯ ಪಾವಗಡದ ಕರ್ನಾಟಕದವರಿಗೆ ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸಬೇಕು. ಇದರಲ್ಲಿ ತಾರತಮ್ಯವೆಸಗಿದರೆ, ಮುಂದಿನ ದಿನಗಳಲ್ಲಿ ಸೋಲಾರ್ ಕಂಪನಿಯ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರವೇ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ, ಗಡಿನಾಡು ಪಾವಗಡ ಸುತ್ತಲು ಆಂಧ್ರಪ್ರದೇಶ ಸುತ್ತುವರಿದಿದ್ದು, ಇಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಸಿ ಕನ್ನಡ ಉಳಿವಿಗಾಗಿ ಹೋರಾಡುತ್ತಿರುವ ಕನ್ನಡಪರ ಸಂಘಟನೆಗಳ ಕಾರ್ಯ ಶ್ಲಾಘನೀಯ. ಇನ್ನೂ ಕನ್ನಡಮಯ ವಾತಾವರಣ ಸೃಷ್ಟಿಯಾಗಬೇಕು. ಕನ್ನಡ ಕಂಪು ಹರಡಬೇಕು. ಎಲ್ಲ ಸಂಘ ಸಂಸ್ಥೆಗಳು ಬೆಂಬಲವಾಗಿ ನಿಂತು ಕನ್ನಡ ಪರ ಗಡಿಭಾಗದಲ್ಲಿ ಹೆಚ್ಚು ಹೆಚ್ಚು ಹೋರಾಟಗಳನ್ನು ಮಾಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷರಾದ ವೇಲ್ ರಾಜು, ಸುಮಾ ಅನಿಲ್, ಪುರಸಭೆ ಸದಸ್ಯರಾದ ಇಮ್ರಾನ್ ,ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಶ್ರೀನಿವಾಸ್, ಯುವ ಮುಖಂಡರಾದ ಕಿರಣ್, ಗುತ್ತಿಗೆದಾರರಾದ ಮಂಜುನಾಥ್, ಕರವೇ ಅಧ್ಯಕ್ಷರಾದ ಲಕ್ಷ್ಮೀನಾರಾಯಣ್. ಗೌರವಾಧ್ಯಕ್ಷರಾದ ದೇವಲಕರೆ ಲೋಕೇಶ್. ಉಪಾಧ್ಯಕ್ಷರಾದ ನರಸೀ ಪಾಟೀಲ್, ನಗರ ಅಧ್ಯಕ್ಷರಾದ ನರಸಿಂಹಮೂರ್ತಿ, ನಗರ ಗೌರವಾಧ್ಯಕ್ಷ ಪಿ.ಅಮೀರ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ರಾಮು ಮೂರ್ತಿ,ಮಂಜು, ಮುಂತಾದವರು ಭಾಗವಹಿಸಿದ್ದರು.