ಸಾರಾಂಶ
ಚನ್ನಪಟ್ಟಣ: ಧೈರ್ಯ ತಾಕತ್ತು ಇದ್ದರೆ ಎಸ್.ಟಿ.ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಟಿ.ಸೋಮಶೇಖರ್ ಅವರನ್ನು ನಾವು ಪಾರ್ಟಿಗೆ ಕರೆತಂದು ಅವರಿಗೆ ಪ್ರಮುಖ ಖಾತೆ ಕೊಟ್ಟು, ಮೈಸೂರಂತಹ ಸಾಂಸ್ಕೃತಿಕ ಜಿಲ್ಲೆಗೆ ಉಸ್ತುವಾರಿ ಮಾಡಿದೆವು. ಆದರೆ, ಅವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರು ನನ್ನ ಪರ ಕೆಲಸ ಮಾಡಲಿಲ್ಲ. ಆದರೆ ಯಶವಂತಪುರ ಜನತೆ ಒಂದು ಕಾಲು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದರು. ಅವರೀಗ ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ದಾರೆ. ಅವರ ಶರೀರ ಒಂದು ಕಡೆ, ತಲೆ ಒಂದು ಕಡೆ ಇದೆ ಎಂದು ವಾಗ್ದಾಳಿ ನಡೆಸಿದರು.ಸೋಮಶೇಖರ್ ಪಾರ್ಟಿ ಯಾವುದು? ಅವರಿಗೆ ಅವರು, ಯಾವ ಪಾರ್ಟಿ ಅಂತಾನೂ ಹೇಳೋಕೆ ಆಗದ ಪರಿಸ್ಥಿತಿಯಲ್ಲಿದ್ದಾರೆ. ಶಾಸಕರಾಗಿ ಆಯ್ಕೆ ಆಗಿದ್ದು ಬಿಜೆಪಿ, ಆದರೆ ಇರೋದು ಮಾತ್ರ ಕಾಂಗ್ರೆಸ್‌ನಲ್ಲಿ ಅವರಿಗೆ ಧೈರ್ಯ, ಶಕ್ತಿ ಇದ್ದರೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು ಅವಾಗ ಅವರ ಶಕ್ತಿ ಏನು ಎಂದು ನೋಡಬಹುದಿತ್ತು ಎಂದರು.
ಕಮಿಷನ್‌ಗೆ ಕಾಂಗ್ರೆಸ್‌ಗೆ: ಅವರಲ್ಲಿ ಈಗ ಯಾವ ಶಕ್ತಿಯೂ ಅವರಲ್ಲಿ ಉಳಿದುಕೊಂಡಿಲ್ಲ. ಕಮಿಷನ್‌ಗಾಗಿ, ದುಡ್ಡು ಹೊಡೆಯೋಕೆ ಕಾಂಗ್ರೆಸ್‌ಗೆ ಹೋಗಿದ್ದಾರೆ. ಸರ್ಕಾರದ ಶೆಲ್ಟರ್‌ಗಾಗಿ ಕಾಂಗ್ರೆಸ್ ಜೊತೆ ಇದ್ದಾರೆ ಎಂದರು.ಅವರ ಹಾಗೂ ಬಿಜೆಪಿಯ ಸಂಬಂಧ ಉಳಿದುಕೊಂಡಿಲ್ಲ. ಅವರು ತ್ರಿಶಂಕುವಾಗಿಯೇ ಇರಬೇಕೆಂದು ನಾವು ಬಯಸುತ್ತೇವೆ. ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಎಲ್ಲಿ ಇರಬೇಕೆಂದು ತೀರ್ಮಾನ ಮಾಡಲಿ. ಅವರನ್ನು ನಾವು ಪಕ್ಷದಿಂದ ತೆಗೆದು ಬಿಟ್ಟರೆ ಅವರು ಆರಾಮವಾಗಿ ಇದ್ದು ಬಿಡ್ತಾರೆ. ಮೋಸ ಮಾಡಿರುವ ಸೋಮಶೇಖರ್‌ರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಯಶವಂತಪುರದಲ್ಲಿ ಪಕ್ಷದಲ್ಲೇ ಕಾರ್ಯಕರ್ತನನ್ನು ಬೆಳೆಸಿ ಸ್ಪರ್ಧಿಸಿ, ಅವರನ್ನು ಮನೆಗೆ ಕಳುಹಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಬಾಕ್ಸ್..........ಕಮಿಷನ್ ಆಸೆಗೆ ಸಿಪಿವೈ ಕಾಂಗ್ರೆಸ್‌ಗೆ: ಶೋಭಾ
ಚನ್ನಪಟ್ಟಣ: ಅಧಿಕಾರದಲ್ಲಿರುವ ಪಕ್ಷ ಸೇರುವುದು ಯೋಗೇಶ್ವರ್ ಚಾಳಿ. ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷ ಸೇರಿದರೆ ಕಾಮಗಾರಿಗಳಲ್ಲಿ ಕಮಿಷನ್ ಬರುತ್ತದೆ ಎಂದು ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಯೋಗೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಿದ್ಧತೆ ನಡೆಸಲಾಗಿತ್ತು. ಆದರೆ, ಅವರು ಕಾಮಗಾರಿಗಳಿಂದ ಬರುವ ಕಮಿಷನ್ ಆಸೆಗಾಗಿ ಕಾಂಗ್ರೆಸ್ ಸೇರಿದ್ದಾರೆ. ಹಿಂದೆ ಬರಿಗೈಯಲ್ಲಿ ಬಂದಿದ್ದ ಅವರನ್ನು ಬಿಜೆಪಿ ಶಾಸಕರಾಗಿ, ಸಚಿವರಾಗಿ ಮಾಡಿತ್ತು. ಕಳೆದ ಬಾರಿ ಸೋತರು ಸಹ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್ ಸೇರಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಒಂದೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜನ ರೋಸಿ ಹೋಗುತ್ತಿದ್ದು, ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.ಗ್ಯಾರಂಟಿ ಆಸೆ ತೋರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲದಂತಾಗಿದೆ. ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ನಾವು ಕೊಟ್ಟಿದ್ದು ಅಂತಾ ಲೇಬಲ್ ಹಾಕಿಕೊಳ್ಳತ್ತದೆ. ಜನೌಷಧೀಯ ಕೇಂದ್ರ ಬಾಗಿಲು ಹಾಕ್ತೀವಿ ಅಂತಿದ್ದಾರೆ ಯಾವುದರಲ್ಲಿ ಕಮೀಷನ್ ಬರಲ್ಲ ಅದನ್ನು ಕ್ಲೋಸ್ ಮಾಡುತ್ತದೆ ಎಂದರು.
ನಿಖಿಲ್ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಾವನೆಗಳು ಇರುವವರಿಗೆ ಮಾತ್ರ ಕಣ್ಣೀರು ಬರುತ್ತದೆ. ಕಾಂಗ್ರೆಸ್ ನವರಿಗೆ ಯಾಕೆ ಕಣ್ಣೀರು ಬರಬೇಕು. ಈ ಬಾರಿಯ ಚುನಾವಣೆಯಲ್ಲಿ ನಿಖಿಲ್ ಗೆಲುವು ಸಾಧಿಸಲಿದ್ದಾರೆ ಎಂದರು.ಪೊಟೋ೮ಸಿಪಿಟಿ೧೦:
ಚನ್ನಪಟ್ಟಣದಲ್ಲಿ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.