ವಿದ್ಯಾರ್ಥಿಗಳು ಓದಿನಲ್ಲಿ ಶ್ರಮಜೀವಿಗಳಾಗಲಿ: ಎಂ.ವಿ. ಪಾಟೀಲ

| Published : Oct 01 2025, 01:01 AM IST

ಸಾರಾಂಶ

ಪ್ರತಿಯೊಂದು ಮನೆಯಲ್ಲಿ ನಿಮ್ಮ ತಂದೆ ತಾಯಿಗಳು ಬಹಳ ಕಷ್ಟಪಟ್ಟು ನಿಮ್ಮನ್ನು ಶಿಕ್ಷಣ ಕಲಿಸುವರು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ನಿಮ್ಮ ಜೀವನದಲ್ಲಿ ಕಷ್ಟಪಟ್ಟು ಕಲಿತರೆ ಮುಂದಿನ ದಿನಗಳಲ್ಲಿ ಕಲಿತ ಕಾಲೇಜಿಗೆ ಮತ್ತು ನಿಮ್ಮ ತಂದೆ- ತಾಯಿಗೆ ಮತ್ತು ದೇಶಕ್ಕೆ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ.

ನರಗುಂದ: ಪ್ರತಿಯೊಬ್ಬ ವಿದ್ಯಾರ್ಥಿಗೆ ವಿದ್ಯಾರ್ಥಿಜೀವನ ಗೋಲ್ಡನ್ ಲೈಫ್‌ ಎಂದು ಹೇಳುವರು. ಹಾಗಾಗಿ ಓದಿನ ಸಮಯದಲ್ಲಿ ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕೆಂದು ಯಡೆಯೂರು ಸಿದ್ದಲಿಂಗೇಶ್ವರ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕಾರ್ಯದರ್ಶಿ ಎಂ.ವಿ. ಪಾಟೀಲ ತಿಳಿಸಿದರು.

ಮಂಗಳವಾರ ಪಟ್ಟಣದ ಯಡೆಯೂರು ಸಿದ್ದಲಿಂಗೇಶ್ವರ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಸಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಂದು ಮನೆಯಲ್ಲಿ ನಿಮ್ಮ ತಂದೆ ತಾಯಿಗಳು ಬಹಳ ಕಷ್ಟಪಟ್ಟು ನಿಮ್ಮನ್ನು ಶಿಕ್ಷಣ ಕಲಿಸುವರು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ನಿಮ್ಮ ಜೀವನದಲ್ಲಿ ಕಷ್ಟಪಟ್ಟು ಕಲಿತರೆ ಮುಂದಿನ ದಿನಗಳಲ್ಲಿ ಕಲಿತ ಕಾಲೇಜಿಗೆ ಮತ್ತು ನಿಮ್ಮ ತಂದೆ- ತಾಯಿಗೆ ಮತ್ತು ದೇಶಕ್ಕೆ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಎಂ.ವಿ. ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕ ನುಡಿಯನ್ನು ಎಸ್.ಆರ್. ಮೇಟಿ ತಿಳಿಸಿದರು.ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಹೊಸ ಆವಿಷ್ಕಾರವನ್ನು ಮಾಡಬೇಕು. ಉತ್ತಮ ಗುಣಗಳು ಮತ್ತು ಉತ್ತಮ ಮನಸ್ಸು ಹಾಗೂ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಈರನಗೌಡ ಪಾಟೀಲ, ಶಿವನಗೌಡ ಪಾಟೀಲ, ಎಸ್.ಬಿ. ದ್ಯಾವಣ್ಣವರ, ಎಂ.ವಿ. ಪಾಟೀಲ, ಎಸ್.ಆರ್. ಮೇಟಿ, ಬಿ.ಕೆ. ಕೋಳೂರಮಠ ಇತರರು ಇದ್ದರು.

ನಾಳೆ ಆನೆ ಮೇಲೆ ಅಂಬಾರಿ ಮೆರವಣಿಗೆ

ನರಗುಂದ: ದಸರಾ ಹಬ್ಬದ ವೇಳೆ ಕಳೆದ ಐವತ್ತು ವರ್ಷದಿಂದ ದೇವಿ ಪುರಾಣ ಪ್ರವಚನ ನಡೆದುಕೊಂಡು ಬಂದಿದೆ. ಗ್ರಾಮದೇವತೆಯ ಬನ್ನಿ ಮುಡಿಯುವ ಹಬ್ಬದಲ್ಲಿ ಪ್ರಥಮ ಬಾರಿಗೆ ಆನೆ ಮೇಲೆ ಅಂಬಾರಿ ಮೆರವಣಿಗೆ ಜರುಗಲಿದೆ ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟದ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ತಿಳಿಸಿದರು.ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮೊದಲು ಕೃತಕವಾಗಿ ನಿರ್ಮಿಸಿದ ಆನೆಯ ಮೇಲೆ ಅಂಬಾರಿ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಶ್ರೀಶೈಲ ಪೀಠದಿಂದ ಜೀವಂತ ಆನೆಯನ್ನೇ ತರಿಸಲಾಗುತ್ತಿದೆ. ಗ್ರಾಮದೇವತೆ ಮಂದಿರದಿಂದ ಮಳೆಯಪ್ಪಜ್ಜನ ಮಠದವರೆಗೆ ಸಕಲ ವಾದ್ಯಮೇಳದೊಂದಿಗೆ 180 ಕೆಜಿ ತೂಕವುಳ್ಳ ಅಂಬಾರಿಯಲ್ಲಿ ದೇವಿಯ ಉತ್ಸವ ಮೂರ್ತಿ ಹೊತ್ತ ಆನೆಯ ಮೆರವಣಿಗೆ ಅ. 2ರಂದು ಸಂಜೆ 4 ಗಂಟೆಗೆ ಗ್ರಾಮದ ಪ್ರಮುಖ ಪಂಚಬಣಗಳ ಬೀದಿಯಲ್ಲಿ ಸಂಚರಿಸಲಿದೆ. ನಂತರ ದೇವಿಯು ಬನ್ನಿ ಮುಡಿದ ನಂತರ ಗ್ರಾಮದಲ್ಲಿ ಸೌಹಾರ್ದತೆಯಿಂದ ಪರಸ್ಪರ ಬನ್ನಿ ಹಬ್ಬವನ್ನು ಆಚರಿಸಲಾಗುವುದೆಂದರು.ಗ್ರಾಮದೇವತೆ ಪುರಾಣವನ್ನು ಪತ್ರೀವನ ಮಠದ ಲಿಂ. ಬಸಯ್ಯ ಅಜ್ಜನವರು 30 ವರ್ಷದಿಂದ ನಡೆಸಿಕೊಂಡು ಬಂದಿದ್ದರು. ಈಗ 18 ವರ್ಷದಿಂದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಗಿರೀಶ ಹಿರೇಮಠ ಅವರು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಆನೆಮೇಲೆ ಅಂಬಾರಿ ಮೆರವಣಿಗೆ ನಡೆಯಲಿದೆ. ದೇವಿಗೆ ನಿತ್ಯ ರುದ್ರಾಭಿಷೇಕ ನಡೆದ ನಂತರ ಸಂಜೆ ಪ್ರವಚನವು 11 ದಿನಗಳಿಂದ ನಡೆಯುತ್ತಿದೆ. ನಿತ್ಯವೂ ಪ್ರಸಾದ ಜರುಗುತ್ತಿದೆ. ಗ್ರಾಮದ ಪ್ರತಿ ಮನೆಯಿಂದ 11 ಹೋಳಿಗೆಯನ್ನು ಜನರು ಗುಡಿಗೆ ತಂದು ಕೊಡಲಿದ್ದಾರೆ. ಅ. 2ರಂದು ಸಂಜೆ ಜರುಗುವ ಪ್ರವಚನದ ನಂತರದಲ್ಲಿ ಸಾವಿರಾರು ಹೋಳಿಗೆ ಪ್ರಸಾದ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಚಂದ್ರಗೌಡ ಪೊಲೀಸಪಾಟೀಲ, ಬಸನಗೌಡ ಮುಲ್ಕಿಪಾಟೀಲ, ಬಾಪುಗೌಡ ಹಿರೇಗೌಡ್ರ, ಕೃಷ್ಣರೆಡ್ಡಿ ರಾಯರಡ್ಡಿ, ಬಸಪ್ಪ ಸುಂಕದ, ಬಸಪ್ಪ ಹಳೇಮನಿ, ಬಸಪ್ಪ ಹಾದಿಮನಿ, ಶಂಕರಗೌಡ ಚನ್ನಪ್ಪಗೌಡ್ರ, ಶಿವನಗೌಡ ಸಾಲೂಟಿಗಿ, ಕಲ್ಲಪ್ಪ ಮೊರಬದ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶೇಖರಯ್ಯ ಕುಲಕರ್ಣಿ, ರಾಜು ಹಾದಿಮನಿ, ಮರಿಗೌಡ ಚನ್ನಪ್ಪಗೌಡ್ರ, ವಿಠ್ಠಲ ತಿಮ್ಮರಡ್ಡಿ, ಸುರೇಶ ಸಾತಣ್ಣವರ, ನಾಗರಾಜ ಹೂಲಿ, ಬಸಪ್ಪ ಬಡಿಗೇರ ಮುಂತಾದವರು ಇದ್ದರು.