ಸಾರಾಂಶ
ಯಲ್ಲಾಪುರ: ಪಠ್ಯದ ಜತೆ ವಿದ್ಯಾರ್ಥಿಗಳು ಕಲೆ, ಸಾಹಿತ್ಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಕಸಾಪ ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಿಳಿಸಿದರು.ನ. ೧೪ರಂದು ತಾಲೂಕಿನ ಹಿತ್ಲಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಸಾಪ ಘಟಕವು ಕನ್ನಡ ಕಾರ್ತಿಕದ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಕಾವ್ಯ ಕಲರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿ. ೨೩ರಂದು ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಚಿಕೇರಿಯಲ್ಲಿ ನಡೆಯಲಿದ್ದು, ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಪ್ರೌಢಶಾಲಾ ಮುಖ್ಯಾಧ್ಯಾಪಕ ಕಮಲಾಕರ ಭಟ್ಟ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಇಂತಹ ಕಾರ್ಯಕ್ರಮ ವೇದಿಕೆಯಾಗುತ್ತದೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಸಂಖ್ಯೆಯಲ್ಲಿ ನಡೆದಾಗ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚುತ್ತದೆ ಎಂದರು.ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪರಮೇಶ್ವರ ನಾಯ್ಕ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಂದ್ರ ಹೆಗಡೆ, ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ ಉಪಸ್ಥಿತರಿದ್ದರು. ವಿವೇಕ ಹೆಗಡೆ ಸ್ವಾಗತಿಸಿದರು. ರವಿ ನಾಯ್ಕ ನಿರ್ವಹಿಸಿದರು. ಮೇಘನಾ ಹಾಗೂ ವರ್ಷಿಣಿ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆರೋಪದಲ್ಲಿ ಹುರುಳಿಲ್ಲಸಿದ್ದಾಪುರ: ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಅವರು ಪತ್ರಿಕಾಗೋಷ್ಠಿ ನಡೆಸಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿನಂದನಾ ಸಮಾರಂಭಕ್ಕೆ ಎಸಿಎಫ್ ಅವರಿಂದ ನಾನು ಹಣ ಪಡೆದಿದ್ದೇನೆ ಎಂಬ ಆಪಾದನೆಯನ್ನು ಮಾಡಿದ್ದಾರೆ. ವಸಂತ ನಾಯ್ಕರು ಈ ಎಸಿಎಫ್ ಅವರನ್ನು ನಾನು ನಂಬಿರುವ ಶಿರಸಿಯ ಮಾರಿಕಾಂಬಾ ದೇವಿಯ ಎದುರು ಕರೆತಂದಲ್ಲಿ ನಾನು ಯಾವುದೇ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಬಿಜೆಪಿ ಸಿದ್ದಾಪುರ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಣ ತೆಗೆದುಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿಯೇ ವಿನಾ ಬಿಜೆಪಿಯದಲ್ಲ. ವಸಂತ ನಾಯ್ಕರು ಹಾಗೂ ಕಾಂಗ್ರೆಸ್‌ನವರು ಸಹ ತಾವು ಯಾರಿಂದಲೂ, ಯಾವಾಗಲೂ ಹಣ ತೆಗೆದುಕೊಂಡಿಲ್ಲ ಎಂದು ಮಾರಿಕಾಂಬೆಯ ಎದುರು ಪ್ರಮಾಣ ಮಾಡಲು ಸಿದ್ಧವಾಗಲಿ ಎಂದು ಸವಾಲು ಎಸೆದರು.ಇತ್ತೀಚೆಗೆ ಬಾಣಂತಿಯರಿಬ್ಬರ ಸಾವು ಸಂಭವಿಸಿದ ಹಿನ್ನೆಲೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ವಸಂತ ನಾಯ್ಕರು, ₹೨೫ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಶಾಸಕರಿಂದ ತಾವು ಬಚಾವಾಗಲು ಸಮಾಜಘಾತುಕ ಶಕ್ತಿಗಳು ಕಲೆತಿದ್ದರು ಎಂಬ ಹಸಿಸುಳ್ಳು ಹೇಳುತ್ತಿದ್ದಾರೆ. ಅಂದಿನ ಪ್ರತಿಭಟನೆಯಲ್ಲಿ ವೈದ್ಯರ ವಿರುದ್ಧ ಪ್ರತಿಭಟಿಸಲಾಗಿದೆಯೇ ವಿನಾ ಶಾಸಕರು, ಸರ್ಕಾರದ ವಿರುದ್ಧ ಘೋಷಣೆ ಇಲ್ಲವೇ ಪ್ರತಿಭಟನೆ ನಡೆದಿಲ್ಲ. ತಾಲೂಕಿನ ಸಾವಿರಾರು ಜನತೆ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಮಾರುತಿ ನಾಯ್ಕ ಕಾನಗೋಡ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಸುಂಕತ್ತಿ ಮಂಜಣ್ಣ, ದಯಾನಂದ ಕಡಕೇರಿ ಇತರರಿದ್ದರು.