ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಇರಲಿ-ವರುಣಗೌಡ ಪಾಟೀಲ

| Published : May 27 2024, 01:01 AM IST / Updated: May 27 2024, 01:02 AM IST

ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಇರಲಿ-ವರುಣಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸಾಧನೆ ಎನ್ನುವುದು ಯಾರ ಸ್ವತ್ತಲ್ಲ, ಸಾಧಿಸುವ ಛಲ ಇದ್ದರೆ ಏನನ್ನಾದರೂ ಮಾಡಬಹುದು ಎಂದು ವರುಣಗೌಡ ಪಾಟೀಲ ಅವರು ಹೇಳಿದರು.

ಶಿಗ್ಗಾಂವಿ: ಸಾಧನೆ ಎನ್ನುವುದು ಯಾರ ಸ್ವತ್ತಲ್ಲ, ಸಾಧಿಸುವ ಛಲ ಇದ್ದರೆ ಏನನ್ನಾದರೂ ಮಾಡಬಹುದು ಎಂದು ವರುಣಗೌಡ ಪಾಟೀಲ ಅವರು ಹೇಳಿದರು.

ತಾಲೂಕಿನ ಶ್ಯಾಡಂಬಿ ಗ್ರಾಮದ ವರುಣಗೌಡ ಪಾಟೀಲ ಫಾರ್ಮ್ ಹೌಸನಲ್ಲಿ ವರುಣಗೌಡ ಪಾಟೀಲ ಅಭಿಮಾನಿ ಬಳಗದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ತಂದೆಯವರಾದ ಎಮ್.ಸಿ. ಪಾಟೀಲ ಅವರು ಮಾಡಿದಂತಹ ಕೆಲಸಗಳಿಗೆ ಪ್ರೇರಿತನಾಗಿ ಇಂದು ಆವರ ಸೇವೆಯನ್ನು ನಾನು ಮುಂದುವರೆಸಿಕೊಂಡು ಬಂದಿದ್ದೇನೆ. ಅದರ ಭಾಗವಾಗಿ ಇಂದು ಅಭಿಮಾನಿ ಬಳಗದ ಎಲ್ಲರೂ ಸೇರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷ ತಂದಿದೆ. ಬಡವರ ಸೇವೆ ಮಾಡುವುದು ಖುಷಿ ತಂದಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಕೂಡಲ ಸ್ವಾಮಿಗಳಾದ ಮಹೇಶ ದೇವರ ಅವರು ಮಾತನಾಡಿ, ಜೀವನದಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು, ಕಷ್ಟದಲ್ಲಿ ಇದ್ದವರ ನೆರವಿಗೆ ನಿಲ್ಲುವುದು ಅತ್ಯಂತ ಶ್ರೇಷ್ಠವಾದದ್ದು, ಆ ಕೆಲಸ ವರುಣಗೌಡ ಪಾಟೀಲ ಅವರ ಕುಟುಂಬ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಸೋಮಯ್ಯ ಹಿರೇಮಠ, ಯುವ ಉದ್ಯಮಿ ರಾಘವೇಂದ್ರ ಬಾಸೂರ, ಬಿ.ಎಸ್. ಹಿರೇಮಠ, ಹೇಮಂತ ಮೋದಿ, ನಾಗರಾಜ ಕ್ಯಾಬಳ್ಳಿ, ವಿನಯ ಹೊನ್ನಣ್ಣವರ, ನಾಗರಾಜ ಉಪಸ್ಥಿತರಿದ್ದರು.

ಕಿರಿಯ ತರಬೇತಿ ಅಧಿಕಾರಿಗಳಾದ ಶಶಿಕಾಂತ ರಾಠೋಡ ಅವರು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಮುಂದೇನು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಸ್ಪಷ್ಪವಾದ ಕಲ್ಪನೆ ಮತ್ತು ಗುರಿ ಇರಬೇಕು ಎಂದರು

ವಿದ್ಯಾರ್ಥಿಗಳು ಶ್ರೇಣಿಕೃತ ವ್ಯವಸ್ಥೆಯಲ್ಲಿ ಜಾತಿ, ಧರ್ಮ, ಹೆಚ್ಚು ಅಂಕ, ಕಡಿಮೆ ಅಂಕ ಎಂಬ ಕೀಳರಿಮೆಯಿಂದ ಹೊರಬನ್ನಿ ಅಂದಾಗ ಯಶಸ್ಸು ಸಾಧ್ಯವಾಗಲಿದೆ. ಸರ್ಕಾರಿ ನೌಕರಿ ಜತೆಗೆ ಸಾಕಷ್ಟು ಖಾಸಗಿ ಕ್ಷೇತ್ರದಲ್ಲಿ ಉತ್ತಮ ಹುದ್ದೆಗೇರಬಹುದು ಎಂದರು.

ಹಾನಗಲ್ ಯುವ ಮುಖಂಡ ಮಾರುತಿ ಪುರ್ಲಿ, ಗಂಗಮ್ಮ ಮೋದಿ, ಶಿಕ್ಷಕರಾದ ಡಾ.ಯೋಗೇಶ ಪಾಟೀಲ ಮಾತನಾಡಿದರು.

ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು, ತಾರಕೇಶ ಮಠದ ವಂದಿಸಿದರು.