ಸಾರಾಂಶ
ಗುಣಾತ್ಮಕ ಶಿಕ್ಷಣದಿಂದ ಭವಿಷ್ಯ ನಿರ್ಮಾಣ ಸಾಧ್ಯ.
ಕನ್ನಡಪ್ರಭ ವಾರ್ತೆ ಗಂಗಾವತಿ
ಗುಣಾತ್ಮಕ ಶಿಕ್ಷಣದಿಂದ ಭವಿಷ್ಯ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಶಿಸ್ತಿನಿಂದ ಶಿಕ್ಷಣ ಕಲಿಯಬೇಕೆಂದು ಪ್ರಾಂಶುಪಾಲೆ ಶೋಭಾ ಕೆ.ಎಸ್. ಹೇಳಿದರು.ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಅಡಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಹುಬಗೆಯ ಉಪನ್ಯಾಸ ಮಾಲಿಕೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾಣಿಜ್ಯ ಶಾಸ್ತ್ರವಿಭಾಗದ ಮುಖ್ಯಸ್ಥ ಪ್ರೊ. ಕರಿಗೂಳಿ ಮಾತನಾಡಿ, ವಿವಿಧ ವಿಷಯಗಳ ಉಪನ್ಯಾಸ ಮಾಲಿಕೆಗಳಿಂದ ಬಹುಮುಖ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಸರ್ಫರಾಜ್ ಅಹ್ಮದ್ ಮಾತನಾಡಿ, ಬಹುಚಿಂತನೆಯನ್ನು ಸೃಷ್ಟಿಸುವ, ಆಧುನಿಕತೆಯೊಂದಿಗೆ ವೈಚಾರಿಕತೆ ಹಾಗೂ ವಾಸ್ತವ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಉಪನ್ಯಾಸ ಮಾಲಿಕೆಗಳು ಬೇಕೆಂದರು.
ಪ್ರಾಸ್ತಾವಿಕವಾಗಿ ಐಕ್ಯೂಎಸಿ ಸಂಯೋಜಕ ರವಿಕುಮಾರ್ ಮಾತನಾಡಿದರು.ಒಂದನೇ ಅಧಿವೇಶನದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಸಂಪನ್ಮೂಲ ವ್ಯಕ್ತಿಯಾಗಿದ್ದ ಗಂಗಾವತಿಯ ಎಸ್.ಕೆ.ಎನ್.ಜಿ.ನ ಉಪನ್ಯಾಸಕ ಶಿವಕುಮಾರ್ ಉಪಾಸಿಯವರು ಉತ್ಪನ್ನ ಮತ್ತು ಗ್ರಾಹಕಗಳ ಸಂಬಂಧದ ಕುರಿತು ಮಾತನಾಡಿದರು.
ಕನಕಗಿರಿ ಕಾಲೇಜಿನ ಉಪನ್ಯಾಸಕ ಬಾಳಪ್ಪ ಸುಳೇಕಲ್, ಇತಿಹಾಸ ವಿಭಾಗದ ಮುಖ್ಯಸ್ಥರಾದ ಶಂಕ್ರಪ್ಪ, ಸೋಮಶೇಖರ್, ತಾತಪ್ಪ ಕೆ., ಶಶಿಕುಮಾರ್ ವಿರೂಪಾಕ್ಷ ಶಂಕ್ರಪ್ಪ ಹಾಗೂ ಬೋಧಕೇತರರಾದ ಜಬೀನಾ ಬೇಗಂ, ವಿನಾಯಕ ಉಪನ್ಯಾಸಕರಾದ ವೆಂಕಟರಾಜು, ಈಶಪ್ಪ ಮೇಟಿ, ದೇವರಾಜ್, ಪರಶುರಾಮ, ಸಂಧ್ಯಾ, ಪೀರಾವಲಿ, ದುರ್ಗಾಕೃಷ್ಣ, ಶಾಂತಿ ಇದ್ದರು.