ಸಾರಾಂಶ
ಶಿಕ್ಷಣ ಎಂದರೆ, ಪಾಠ ಬೋಧನೆ ಅಲ್ಲ. ಬದಲಿಗೆ ಮಗುವಿನ ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸುವುದಾಗಿದೆ ಎಂದು ಸ್ವಾಮಿ ವೀರೇಶಾನಂದ ಸರಸ್ವತಿ ಶ್ರೀ ಹೇಳಿದರು.
ಧಾರವಾಡ: ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಣ ಬುನಾದಿ. ಹೀಗಾಗಿ, ಶಿಕ್ಷಕರು ಎಂದೂ ಮೈಮರೆಯದೆ, ತಮ್ಮ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಲು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಶ್ರೀ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಶನಿವಾರ ರಾಮಕೃಷ್ಣ ಭಾವೈಕ್ಯ ಮಂದಿರದ 20ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಶಿಕ್ಷಕ ಸಮ್ಮೇಳನದಲ್ಲಿ ಮಾತನಾಡಿದರು.ಶಿಕ್ಷಣ ಎಂದರೆ, ಪಾಠ ಬೋಧನೆ ಅಲ್ಲ. ಬದಲಿಗೆ ಮಗುವಿನ ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸುವುದಾಗಿದೆ. ಇಂತಹ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಅಂದಾಗ ಮಾತ್ರ ರಾಷ್ಟ್ರದ ಏಳ್ಗೆ ಸಾಧ್ಯ ಎಂದರು.
ಧಾರವಾಡ ಐಐಟಿ ಡೀನ್ ಡಾ. ಎಸ್.ಎಂ. ಶಿವಪ್ರಸಾದ ಸಮ್ಮೇಳನಕ್ಕೆ ಚಾಲನೆ ನೀಡಿ, ಭವಿಷ್ಯದ 10-15 ವರ್ಷಗಳಲ್ಲಿ ಎಲ್ಲವೂ ಕಂಪ್ಯೂಟರ್ ಯುಗವಾಗಲಿದೆ. ಅಷ್ಟೊಂದು ಜಗತ್ತು ಮುನ್ನಡೆದಿದೆ. ಇದಕ್ಕೆ ಶಿಕ್ಷಣ ಮತ್ತು ಶಿಕ್ಷಕರೇ ಕಾರಣ ಎಂದರು.ಶಿಕ್ಷಣ ವೃತ್ತಿಯ ಸವಾಲುಗಳ ಕುರಿತು ಉಪನ್ಯಾಸ ನೀಡಿದ ಮೈಸೂರಿನ ಸ್ವಾಮಿ ಮಹಾಮೇಧಾನಂದ, ಪ್ರಸ್ತುತ ಶಿಕ್ಷಣ ಪ್ರಭಾವಿಗಳ ಸ್ವಸ್ತಾಗಿದೆ. ಇದರಿಂಗ ಶಿಕ್ಷಣದ ಗುಣಮಟ್ಟ ಕುಸಿದಿದ್ದಾಗಿ ಬೇಸರಿಸಿದರು.
ಧಾರವಾಡ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ, 1993ರಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಆಶ್ರಮ 2005ಕ್ಕೆ ಸ್ವಂತ ಕಟ್ಟಡ ಹೊಂದುವ ಜತೆ 20 ವರ್ಷ ಪೂರೈಸಿ ಇತಿಹಾಸ ದಾಖಲಿಸಿದೆ ಎಂದರು.ಸ್ವಾಮಿ ಪ್ರಕಾಶನಂದ ಮಹಾರಾಜ, ಸ್ವಾಮಿ ಜೀತಕಮಾನಂದ ಮಹಾರಾಜ, ಮೋಹನ ರಾಮದುರ್ಗ, ಸುಭಾಷ ಗೌಡರ, ಅರ್ಜುನ ಅರಗಾಡೆ, ಅಶೋಕ ಕಾಟೆನ್ನವರ, ಈರಣ್ಣ ಅಗಲಗಟ್ಟಿ, ಗಣೇಶ ಕುಂದರಗಿ, ಸಂಜೀವ ಕೊಡಿಗೆ ಇದ್ದರು.