ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನೂರಾರು ವರ್ಷಗಳಿಂದ ವ್ಯಾಪಾರ, ವ್ಯವಹಾರದಿಂದಲೇ ಜೀವನ ಸಾಗಿಸುತ್ತಾ ಬಂದಿರುವ ಆರ್ಯವೈಶ್ಯ ಸಮಾಜವು ರಾಜಕೀಯ ಕ್ಷೇತ್ರದಲ್ಲೂ ಕೂಡ ಗುರುತಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕುಮಾರ್ ಹೇಳಿದರು.ನಗರದ ವೈಶ್ಯ ಕೋ ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.1950ರಲ್ಲಿ ಬ್ರಿಟೀಷರು ದೇಶದಲ್ಲಿ ಆರ್ಥಿಕ ಸಬಲೀಕರಣಗೊಳ್ಳಲು ಕೋ ಆಪರೆಟೀವ್ ಸೊಸೈಟಿಗಳನ್ನು ಪ್ರಾರಂಭಿಸಲು ಮುಂದಾದರು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಮಾಜದ ಹಿರಿಯರು ಪರಿಶ್ರಮದಿಂದ ಸಹಕಾರಿ ಸಂಘವನ್ನು ಪ್ರಾರಂಭಿಸಿದ್ದು, ಶತಮಾನೋತ್ಸವ ಕಂಡ ಇಂತಹ ಸಹಕಾರಿಯ ಹಿರಿಯರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು ಎಂದ ಅವರು, ಸಮಾಜದ ಬಂಧುಗಳು ಒಗ್ಗಟ್ಟಾಗುವ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು ಎಂದು ಕರೆ ನೀಡಿದರು.
ಸಹಕಾರಿ ಧುರೀಣ ರಾಮನಾಥ್ ಮಾತನಾಡಿ, 182 ವರ್ಷಗಳ ಹಿಂದೆ ಕೀರ್ತಿ ಶೇಷ ನಂಜನಗೂಡು ನಂಜುಂಡ ಶ್ರೇಷ್ಠಿಯವರು ಅನೇಕ ಊರುಗಳಲ್ಲಿ ದೇವಾಲಯ, 42ಕ್ಕೂ ಹೆಚ್ಚು ಆರ್ಯವೈಶ್ಯ ಸಹಕಾರಿಗಳನ್ನು ರಾಜ್ಯದಲ್ಲಿ ಪ್ರಾರಂಭಿಸುವ ಮೂಲಕ ಸಮಾಜದಲ್ಲಿ ಆರ್ಥಿಕ ಸಬಲೀಕರಣಕ್ಕೆ ಮುಂದಾಗಿದ್ದರು. ಅಂದಿನ ಸಹಕಾರಿಗಳು ಇಂದು ಬ್ಯಾಂಕುಗಳಾಗಿ ಪರಿವರ್ತನೆಗಳಾಗಿರುವುದು ಸಂತೋಷದ ವಿಷಯವಾಗಿದ್ದು, ಹಿರಿಯರ ತ್ಯಾಗ ಸ್ಮರಣಿಯ ಎಂದರು.ಶಿವಮೊಗ್ಗ ಅರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷ ಡಿ.ಎಂ.ಅರವಿಂದ್ ಮಾತನಾಡಿ, ಯಾವುದೇ ಸಹಕಾರಿಗಳು ನೂರು ವರ್ಷ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಇದರ ಶ್ರೇಯ ಸ್ಥಾಪಕರಿಗೆ, ನಿರ್ದೇಶಕರಿಗೆ, ಷೇರುದಾರರಿಗೆ ಸಲ್ಲಬೇಕು. ಆರ್ಯವೈಶ್ಯರು ಪ್ರತಿ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್, ಮೈಸೂರಿನ ಉದ್ಯಮಿ ಅನಂತ, ಅರ್ಯವೈಶ್ಯ ಮಂಡಳಿ ತಾಲೂಕು ಅಧ್ಯಕ್ಷ ಬಾಗೇಪಲ್ಲಿ ನಟರಾಜು, ವೈಶ್ಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ಸ್.ಸುಬ್ರಮಣ್ಯ, ಉಪಾಧ್ಯಕ್ಷ ಜಿ.ಕೆ.ಸಂಜಯ್, ನಿರ್ದೇಶಕರಾದ ಪ್ರಸಾದ್, ಮಂಜುನಾಥ್, ಕಿಶೋರ್‌ಕುಮಾರ್ ರಾಮಚಂದ್ರಗುಪ್ತ, ಪ್ರವೀಣ್, ವಿಶ್ವನಾಥಬಾಬು, ಪಣಿರಾಜ್, ಶ್ರೀನಾಥ್, ಜ್ಯೋತಿಲಕ್ಷ್ಮಿ, ಶ್ವೇತಾ, ಹರಿಬಾಬು, ವ್ಯವಸ್ಥಾಪಕರಾದ ಸೌಮ್ಯ, ಗಾಯತ್ರಿ, ದೇವಿಪ್ರಸಾದ್, ಸ್ಫೂರ್ತಿ ಸೇರಿದಂತೆ ಸಹಕಾರಿಯ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಹಾಗೂ ಸಮಾಜದ ಬಾಂಧವರು ಭಾಗವಹಿಸಿದ್ದರು.‘ಇತ್ತೀಚಿನ ದಿನಗಳಲ್ಲಿ ಸರ್ಕಾರ ಸಹಕಾರ ಕ್ಷೇತ್ರದಲ್ಲಿ ಮೂಗು ತೂರಿಸಲು ಹೊರಟಿರುವುದು ಸರಿಯಲ್ಲ. ಈ ಬಗ್ಗೆ ವಿಧಾನ ಪರಿಷತ್ತಿನಲ್ಲೂ ಕೂಡ ನಾನು ಧ್ವನಿ ಎತ್ತಿದ್ದೇನೆ. ಅವಶ್ಯಕತೆ ಇರುವ ಸಣ್ಣ ಪುಟ್ಟ ಜನರಿಗೆ ಬ್ಯಾಂಕಗಳು ಸಾಲ ನೀಡದ ಸಂದರ್ಭದಲ್ಲಿ ಸಹಕಾರಿಗಳು ನೀಡುತ್ತವೆ. ಆದ್ದರಿಂದ ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ಕಾಲಿಡಬಾರದು. ಸಹಕಾರಿಗಳಿಗೆ ಸರ್ಕಾರದ ಒತ್ತಡ ಇರಬಾರದು.’ ವಿಧಾನ ಪರಿಷತ್ ಸದಸ್ಯ ಅರುಣ್‌ಕುಮಾರ್