ಸಾರಾಂಶ
ಪ್ರತಿ ಮಗು ಗುಣಮಟ್ಟದ ಶಿಕ್ಷಣ ಪಡೆಯಬೇಕು. ಉತ್ತಮ ಕಲಿಕೆ ಹಾಗೂ ಅಭ್ಯಾಸದಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು, ಶಿಕ್ಷಣದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಹೇಳಿದರು.
ಕನ್ನಡಪ್ರಭ ವಾರ್ತೆ ಘಟಪ್ರಭಾ
ಪ್ರತಿ ಮಗು ಗುಣಮಟ್ಟದ ಶಿಕ್ಷಣ ಪಡೆಯಬೇಕು. ಉತ್ತಮ ಕಲಿಕೆ ಹಾಗೂ ಅಭ್ಯಾಸದಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು, ಶಿಕ್ಷಣದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಹೇಳಿದರು.ಅವರು ಮಲ್ಲಾಪೂರ ಪಿಜಿಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಬಿ ಮಲಬನ್ನವರ, ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ವಿಯಾಗಿದೆ. ಪ್ರತಿ ಮಗುವಿಗೆ ನಿತ್ಯ ಪೌಷ್ಠಿಕ ಆಹಾರ ನೀಡಲು ಸಾಕಾರವಾಗಿದೆ ಎಂದರು.ಮುಖ್ಯ ಅತಿಥಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಎಂ ಲೋಕನ್ನವರು ಮಾತನಾಡಿ, ಉರ್ದು ಶಾಲೆಗಳಲ್ಲಿ ಉತ್ತಮ ಕಲಿಕೆ ನೀಡುವುದರಿಂದ ಅಲ್ಪಸಂಖ್ಯಾತರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಲಿಯುವ ವಯಸ್ಸಿನಲ್ಲಿ ದುಡಿಮೆಗೆ ಕಳಿಸಬೇಡಿ. ನೀವು ದುಡಿದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಾಲೆಗೆ ಕಳಿಸಿ ಎಂದು ಹೇಳಿದರು.
ಈ ವೇಳೆ ಹಿರಿಯ ಪತ್ರಕರ್ತ ಸೈಯದ್ ಅಳಾವರ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ್ ಉಸ್ತಾದ, ಮುಸ್ಲಿಂ ಜಮಾತ್ ಅಧ್ಯಕ್ಷ ಶೌಕತ್ ಕಬ್ಬೂರ, ಪ.ಪಂ ಮಾಜಿ ಸದಸ್ಯ ಸಲೀಮ ಕಬ್ಬೂರ, ಇಮ್ರಾನ್ ಬಟಕುರ್ಕಿ, ವೈದ್ಯ ಪ್ರಶಾಂತ್ ಬಬಲಾದಿ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಿಲೀಪ್ ಕಲಾರಕೊಪ್ಪ, ಸಿ.ಆರ್.ಪಿ ಆರೀಫ್ ಹುಸೇನ್ ಟೋಪಿಚಾಂದ, ರಂಗಣ್ಣ ಗೋಡೆರ ಮುಖ್ಯೋಪಾಧ್ಯಾಯ ಶಫಿಉದ್ದಿನ ಭಾಗಸಿರಾಜ್, ಎಸ್.ಡಿ.ಎಂ.ಸಿ ನಿರ್ದೇಶಕರು. ಶಿಕ್ಷಕರು. ಪಾಲಕರು. ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿಎಮ್.ಎ.ಸಿದ್ದೀಕಿ ನಿರೂಪಿಸಿದರು. ಶಿಕ್ಷಕ ಶಾನವಾಜ ದಬಾಡಿ ವಂದಿಸಿದರು.