ಕಾಂಗ್ರೆಸ್‌ ಅಭ್ಯರ್ಥಿ 6 ವರ್ಷ ಎಲ್ಲಿದ್ರು ತಿಳಿಸಲಿ: ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌

| Published : May 18 2024, 12:42 AM IST

ಕಾಂಗ್ರೆಸ್‌ ಅಭ್ಯರ್ಥಿ 6 ವರ್ಷ ಎಲ್ಲಿದ್ರು ತಿಳಿಸಲಿ: ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಈಶಾನ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್‌ 6 ವರ್ಷ ಎಲ್ಲಿ ಇದ್ರು, ಎಲ್ಲಿ ಪ್ರವಾಸ ಮಾಡಿದ್ದೀರಿ ಎಂಬುವದನ್ನು ಮತದಾರರಿಗೆ ತಿಳಿಸಲಿ ಎಂದು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ ಸವಾಲೆಸಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಈಶಾನ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್‌ 6 ವರ್ಷ ಎಲ್ಲಿ ಇದ್ರು, ಎಲ್ಲಿ ಪ್ರವಾಸ ಮಾಡಿದ್ದೀರಿ ಎಂಬುವದನ್ನು ಮತದಾರರಿಗೆ ತಿಳಿಸಲಿ ಎಂದು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ ಸವಾಲೆಸಗಿದ್ದಾರೆ.

ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಾನು ಇದೇ ಕ್ಷೇತ್ರದಿಂದ 4800 ಮತಗಳ ಅಂತರದಿಂದ ಗೆಲವು ಸಾಧಿಸಿ, ಪದವೀಧರರು ಹಾಗೂ ಶಿಕ್ಷಕರಿಗಾಗಿ ಸದನದಲ್ಲಿ ಅನೇಕ ಪ್ರಶ್ನೆ ಕೇಳಿದ್ದೇನೆ. ಅಲ್ಲದೇ ಶಿಕ್ಷಕರ ಬೇಡಿಕೆ ಈಡೇರಿಕೆಗೆ 10 ದಿನಗಳ ವರೆಗೆ ಅಹೋರಾತ್ರಿ ಧರಣಿ ನಡೆಸಿದ್ದೇನೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ತಮ್ಮ ಅಧಿಕಾರಾವಧಿಯಲ್ಲಿ ಏನು ಮಾಡಿದ್ದಾರೆ ಎಂಬುವದನ್ನು ತೋರಿಸಲಿ, ಅಷ್ಟಕ್ಕೂ ಕಾಂಗ್ರೆಸ್‌ ಅಭ್ಯರ್ಥಿಯು ಗುರುವಾರ ನನ್ನ ಬಗ್ಗೆ ಅಪಮಾನಕರ ಭಾಷೆಯಲ್ಲಿ ಮಾತನಾಡಿದ್ದು ಒಬ್ಬ ಜನಪ್ರತಿಧಿಗೆ ಶೋಭೆ ತರುವಂತಹದ್ದಲ್ಲ ಎಂದರು.

ಈ ಭಾಗದ ಪದವೀಧರರಿಗೆ ಅನುಕೂಲವಾಗುವ ರೀತಿಯಲ್ಲಿ ಖಾಲಿ ಹುದ್ದೆಗಳ ಭರ್ತಿ, 371(ಜೆ)ಯನ್ನು ಪರಿಣಾಮಕಾರಿಯಾಗಿ ಜಾರಿ ಆಗಬೇಕು. ಹುದ್ದೆಗಳಲ್ಲಿ ಪದೋನ್ನತಿ, ಮಾನವ ಸಂಪನ್ಮೂಲಗಳ ಅಭಿವೃದ್ಧಿ ವಿಷಯಗಳ ಕುರಿತು ಸದನದಲ್ಲಿ ಮಾತನಾಡಿದ್ದೇನೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಅವಧಿಯಲ್ಲಿ ಏನು ಪ್ರಶ್ನೆ ಮಾಡಿದ್ದಾರೆ. ಎಲ್ಲಿ ಪ್ರವಾಸ ಮಾಡಿದ್ದಾರೆ ಹಾಗೂ ಪದವೀಧರರ ಬೇಡಿಕೆಗಳ ಈಡೇರಿಕೆಗಾಗಿ ತೆಗೆದುಕೊಂಡ ಕ್ರಮಗಳನ್ನು ಪದವೀಧರರ ಮತದಾರರ ಎದುರು ಬಹಿರಂಗಪಡಿಸಲಿ ಎಂದು ನುಡಿದರು.

ನಾನೋಬ್ಬ ಬಿಚ್ಚು ಪುಸ್ತಕ ಇದ್ದಂತೆ ನಾನು ಹಿಂದೆ ಮಾಡಿದ್ದನ್ನು ನನ್ನ ಮತದಾರರ ಎದುರು ಇಡುತ್ತಿದ್ದೇನೆ. ಮುಂದೆ ಕೂಡ ಹೆಚ್ಚಿನ ಕೆಲಸ ಮಾಡಲು ಇಚ್ಚಿಸಿದ್ದೇನೆ ಹೀಗಾಗಿ ಪ್ರಜ್ಞಾವಂತ ಮತದಾರರು ಇಬ್ಬರ ಕಾರ್ಯಗಳನ್ನು ಹೋಲಿಕೆ ಮಾಡಿ ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಅಮರನಾಥ ಪಾಟೀಲ್‌ ವ್ಯಕ್ತಪಡಿಸಿದರು.