ಸಹಕಾರ ಚಳವಳಿ ಮತ್ತಷ್ಟು ಪ್ರಬಲವಾಗಲಿ: ವಿಷ್ಣು ಭಟ್ಟ

| Published : Nov 16 2024, 12:34 AM IST

ಸಾರಾಂಶ

ಸಹಕಾರ ಚಳವಳಿಯನ್ನು ಪ್ರಬಲಗೊಳಿಸುವುದು ಮುಖ್ಯ. ಸಹಕಾರ ಚಳವಳಿಗೆ ೧೨೦ ವರ್ಷ ಸಂದಿದೆ. ಸಹಕಾರ ಸಂಘಗಳು ಜನತೆಗೆ ಆರ್ಥಿಕ ಶಕ್ತಿ ಗಟ್ಟಿಗೊಳಿಸುವುದರ ಜತೆ ದೇಶದ ಅಭಿವೃದ್ಧಿಗೆ ಮಹತ್ತರ ಪಾತ್ರ ನಿರ್ವಹಿಸಿದೆ.

ಶಿರಸಿ: ಉತ್ತಮ ಸಹಕಾರ ಸಂಘಗಳನ್ನು ನೋಡಿ ಸಂತೋಷಪಡುವುದ ಜತೆ ನ್ಯೂನತೆಯನ್ನು ಹೊಂದಿರುವ ಸಹಕಾರಿ ಸಂಘಗಳ ಕುರಿತು ಚಿಂತನೆ ನಡೆಸಿ, ಅವರನ್ನು ಮೇಲೆತ್ತುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ವಿಷ್ಣು ಭಟ್ಟ ಅಳ್ಳಂಕಿ ತಿಳಿಸಿದರು.ಶುಕ್ರವಾರ ನಗರದ ಟಿಎಂಎಸ್ ಸಭಾಭವನದಲ್ಲಿ ಶಿರಸಿ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರ ಮಾರಾಟ ಸಂಘದ ವತಿಯಿಂದ ೭೧ನೇ ಸಹಕಾರ ಸಪ್ತಾಹದ ಅಂಗವಾಗಿ ಸಂಘದ ಸದಸ್ಯರಿಗೆ, ಖರೀದಿದಾರರಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಸಹಕಾರ ಚಳವಳಿಯನ್ನು ಪ್ರಬಲಗೊಳಿಸುವುದು ಮುಖ್ಯ. ಸಹಕಾರ ಚಳವಳಿಗೆ ೧೨೦ ವರ್ಷ ಸಂದಿದೆ. ಸಹಕಾರ ಸಂಘಗಳು ಜನತೆಗೆ ಆರ್ಥಿಕ ಶಕ್ತಿ ಗಟ್ಟಿಗೊಳಿಸುವುದರ ಜತೆ ದೇಶದ ಅಭಿವೃದ್ಧಿಗೆ ಮಹತ್ತರ ಪಾತ್ರ ನಿರ್ವಹಿಸಿದೆ. ಹಲವಾರು ಅಗ್ರಗಣ್ಯ ನಾಯಕರು ತನು, ಮನ ಧನ ತ್ಯಾಗ ಮಾಡಿ ಸಹಕಾರಿ ಚಳವಳಿ ಬೆಳೆಸಿದ್ದಾರೆ. ಸಹಕಾರ ಸಪ್ತಾಹದ ಅಂಗವಾಗಿ ಜಿಲ್ಲಾ ಸಹಕಾರಿ ಯುನಿಯನ್‌ನಿಂದಲೂ ಜಿಲ್ಲೆಯ ತಾಲೂಕುಗಳಲ್ಲಿ ಸಹಕಾರಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಆಂದೋಲನ ನಡೆದು ೧ ಶತಮಾನಗಳು ಕಳೆದಿದೆ. ದೇಶಾದ್ಯಂತ ಸಹಕಾರ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಸಹಕಾರಿಗೆ ಜಗತ್ತಿನಾದ್ಯಂತ ಸಂಘಟನೆಗಳಿದ್ದು, ಸಹಕಾರ ತತ್ವದಲ್ಲಿ ಹೇಳಿರುವಂತೆ ಸಹಕಾರಿ ಯುನಿಯನ್ ನಡೆದುಕೊಳ್ಳಬೇಕು ಎಂಬ ಹಕ್ಕುಗಳ ಜತೆ ಕರ್ತವ್ಯವನ್ನು ನೀಡಿದೆ ಎಂದರು.

ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ಡೊಡ್ಮನೆ ಮಾತನಾಡಿ, ಬದ್ಧತೆ, ಆರ್ಥಿಕ ಶಿಸ್ತು, ಸದಸ್ಯರ ಹಿತ ಕಾಪಾಡಿದರೆ ಸಂಸ್ಥೆಗಳು ಉತ್ತುಂಗಕ್ಕೆ ಏರಲು ಸಾಧ್ಯ. ಇದಕ್ಕೆ ಶಿರಸಿ ಟಿಎಂಎಸ್ ಉತ್ತಮ ಉದಾಹರಣೆ. ಸಹಕಾರಿ ಕ್ಷೇತ್ರವು ಸ್ವಾತಂತ್ರ್ಯಾನಂತರ ಕಾನೂನು ಚೌಕಟ್ಟಿನಡಿಗೆ ಬಂತು. ಆದರೆ ಉತ್ತರಕನ್ನಡದಲ್ಲಿ ನಮ್ಮ ರಕ್ತದಲ್ಲಿ ಬಂದಿದೆ. ಕಾನೂನಿನ ಚೌಕಟ್ಟಿನಲ್ಲಿಲ್ಲ. ಉತ್ತರಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಕಾನೂನು ಅವಶ್ಯವಿಲ್ಲ ಎಂದರು.ಟಿಎಂಎಸ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಜಿ.ಎಂ. ಹೆಗಡೆ ಹುಳಗೋಳ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಶಿಕ್ಷಣ ಮುಖ್ಯವಾಗಿದ್ದು, ಉನ್ನತ ಶಿಕ್ಷಣ ಪಡೆದ ಯುವಕರು ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ತೊಡಗಿಕೊಳ್ಳಬೇಕು. ರಾಜ್ಯ ಮಟ್ಟದಲ್ಲಿ ಕೆಡಿಸಿಸಿ ಬ್ಯಾಂಕ್ ಉತ್ತಮ ಹೆಸರು ಗಳಿಸಿತ್ತು. ಆದರೆ ಕಳೆದ ೨ ವರ್ಷದಿಂದ ಏನೆನೋ ನಡೆಯುತ್ತಿದೆ. ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರ ತೆರೆಯುವ ಅವಶ್ಯಕತೆಯಿದೆ ಎಂದರು.ಸಂಘದ ಸದಸ್ಯರಾದ ರಾಮಚಂದ್ರ ಹೆಗಡೆ ನೈಗಾರ, ವೆಂಕಟ್ರಮಣ ಹೆಗಡೆ ಮಣ್ಮನೆ, ತಿಮ್ಮಪ್ಪ ಹೆಗಡೆ ಹುಳಗೋಳ, ಶಿವರಾಮ ಭಟ್ಟ ದೊಡ್ಮನೆ, ವಿಘ್ನೇಶ್ವರ ಹೆಗಡೆ ಗೊಡವೆಮನೆ, ಅನಂತ ಹೆಗಡೆ ಮಾವಿನಕೊಪ್ಪ, ತಿರುಮಲೇಶ್ವರ ಹೆಗಡೆ ಹಾರೇಹುಲೇಕಲ್, ಶ್ರೀಪಾದ ಹೆಗಡೆ ಗುಮ್ಮನಮನೆ, ಗಣಪತಿ ಹೆಗಡೆ ಭಾಗ್ವತ್ ಜಾಗನಳ್ಳಿ, ನರಸಿಂಹ ಹೆಗಡೆ ಬರೂರ- ಕಲಗದ್ದೆ, ರಘುಪತಿ ಹೆಗಡೆ ಪರಿಗೇರಿ, ಗಣಪತಿ ಭಟ್ಟ ಗೋಪಿಮನೆ, ಸೋಮಯ್ಯ ನಾಯ್ಕ ಮಾವಿನಕೊಪ್ಪ, ಧರ್ಮಾ ನಾಯ್ಕ ಬಂಕನಾಳ, ಗುರುನಾಥ ಭಟ್ಟ ಬೆಂಗಳೆ, ಶ್ರೀಪಾದ ಹೆಗಡೆ ಬಕ್ಕೆಮನೆ, ಖರೀದಿದಾರರಾದ ಯಲ್ಲಾಪುರದ ವಿನಯಾ ಟ್ರೇಡರ್ಸ್‌ನ ಸುಬ್ರಹ್ಮಣ್ಯ ಹೆಗಡೆ ಕರಡಿಗೇಮನೆ, ಶಿರಸಿ ಎ.ಆರ್. ಕಂಪನಿಯ ಮಹಮ್ಮದ್ ರಫೀಕ್ ಬೇಸಾನಿಯಾ, ವಿಶೇಷ ಸಾಧಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ, ಡಾಕ್ಟರೇಟ್ ಪದವಿ ಪುರಸ್ಕೃತ ಮನು ಪಿ. ಹೆಗಡೆ ಹಾಲಳ್ಳ, ಪ್ರೊ. ಸತೀಶ ಧವನ ಪ್ರಶಸ್ತಿ ಪುರಸ್ಕೃತ ಅಮರನಾಥ ಹೆಗಡೆ ಕೊಟ್ಟೆಗದ್ದೆ, ಆಕ್ಸ್‌ಫರ್ಡ್ ಯುನಿವರ್‌ಸಿಟಿ ಡಾಕ್ಟರೇಟ್ ಪದವಿ ಪಡೆಯುತ್ತಿರುವ ಅಕ್ಷಯ ಹೆಗಡೆ ಚಿಪಗಿ ಅವರನ್ನು ಗೌರವಿಸಲಾಯಿತು.ಟಿಎಂಎಸ್ ಉಪಾಧ್ಯಕ್ಷ ಹಾಗೂ ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಹೆಗಡೆ ಮಂಡೇಮನೆ ಇದ್ದರು. ರಶ್ಮಿ ಪ್ರಾರ್ಥಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ನಿರ್ದೇಶಕ ಎನ್.ಡಿ. ಹೆಗಡೆ ಹಾಲೇರಿಕೊಪ್ಪ ವಂದಿಸಿದರು.ನಂತರ ಯಕ್ಷ ರಂಗದ ಪ್ರಸಿದ್ಧ ಕಲಾವಿದರ ಯಕ್ಷಗಾನ ವೈಭವ ಕಾರ್ಯಕ್ರಮ ಪ್ರೇಕ್ಷರನ್ನು ರಂಜಿಸಿತು. ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ರಾಮಕೃಷ್ಣ ಹೆಗಡೆ ಹಿಲ್ಲೂರ, ಮದ್ದಲೆಯಲ್ಲಿ ಅನಿರುದ್ಧ ಹೆಗಡೆ ವರ್ಗಾಸರ, ಚಂಡೆಯಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ್ ಕಾರ್ಯನಿರ್ವಹಿಸಿದರು.