ಕಲೆಯಿಂದ ನಮ್ಮ ಸಂಸ್ಕೃತಿಯ ಅರಿವಿನೊಂದಿಗೆ ಉತ್ತಮ ಸಂಸ್ಕಾರ ಪಡೆಯಬಹುದು. ನಿರಂತರವಾಗಿ ಸಾಂಸ್ಕೃತಿಕ ವಾತಾವರಣ ನೆಲೆಸುವಂತೆ ಮಾಡಬೇಕು.
ಹೆಡೆ ಎತ್ತಿದ ಸರ್ಪಕ್ಕೆ ಗುರಿ ಇಟ್ಟ ಗರುಡ ನಾಟಕದ ಸಭಾ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಯಲ್ಲಾಪುರ ಕಲೆಯಿಂದ ನಮ್ಮ ಸಂಸ್ಕೃತಿಯ ಅರಿವಿನೊಂದಿಗೆ ಉತ್ತಮ ಸಂಸ್ಕಾರ ಪಡೆಯಬಹುದು. ನಿರಂತರವಾಗಿ ಸಾಂಸ್ಕೃತಿಕ ವಾತಾವರಣ ನೆಲೆಸುವಂತೆ ಮಾಡಬೇಕು. ಸಂಗೀತ, ನೃತ್ಯ, ಸಾಹಿತ್ಯ, ಮಾತುಗಾರಿಕೆ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಪುರಾತನ ಕಲೆಗಳು ಅನೇಕ ದಶಕಗಳಿಂದ ನಮ್ಮ ಪರಂಪರೆಯ ಮೌಲ್ಯಗಳನ್ನು ನಮಗೆ ತಿಳಿಸುವ ಕಾರ್ಯ ಮಾಡುತ್ತಿವೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.ಮಹಾಗಣಪತಿ ಕಲಾಬಳಗ ಹುತ್ಕಂಡ ಕ್ರಾಸಿನಲ್ಲಿ ಹಮ್ಮಿಕೊಂಡಿದ್ದ ಹೆಡೆ ಎತ್ತಿದ ಸರ್ಪಕ್ಕೆ ಗುರಿ ಇಟ್ಟ ಗರುಡ ನಾಟಕದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್‌ಎಸ್‌ಎಂಪಿ ಸೇವಾ ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಅನಂತಮೂರ್ತಿ ಹೆಗಡೆ ಶಿರಸಿ, ಎಲ್.ಪಿ. ಭಟ್ಟ ಗುಂಡ್ಕಲ್, ಅನಂತ ಭಟ್ಟ ಜೂಜಿನಬೈಲ್, ಲಕ್ಷ್ಮೀನಾರಾಯಣ ಭಟ್ಟ ತಾರಿಮಕ್ಕಿ, ಬಾಲಕೃಷ್ಣ ನಾಯಕ, ಪ್ರಸಾದ ಹೆಗಡೆ, ಆರ್ ಎನ್ ಭಟ್ಟ ಹುತ್ಕಂಡ, ಅಪ್ಪು ಆಚಾರಿ, ನಾರಾಯಣ ಆಚಾರಿ ಹುತ್ಕಂಡ ಉಪಸ್ಥಿತರಿದ್ದರು. ಅರ್ಚನಾ ಹೆಗಡೆ ನಿರೂಪಿಸಿದರು. ವಿದ್ಯಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಸುಬ್ಬಣ್ಣ ಉದ್ದಾಬೈಲ್ ಸ್ವಾಗತಿಸಿದರು. ಸುಬ್ಬಣ್ಣ ದಾನ್ಯಾನಕೊಪ್ಪ ವಂದಿಸಿದರು.ನಾಟಕದ ಪುರುಷ ಪಾತ್ರದಲ್ಲಿ ಕೃಷ್ಣ ಹೆಗಡೆ ಜೂಜಿನಬೈಲ್, ಚಂದ್ರಶೇಖರ ಹುತ್ಕಂಡ, ಸುಬ್ರಹ್ಮಣ್ಯ ಉದ್ದಾಬೈಲ್, ಹರಿಪ್ರಸಾದ ಜೂಜಿನಬೈಲ್, ಸಂತೋಷ ನಾಯ್ಕ ಉಪಳೇಶ್ವರ, ನರಸಿಂಹ ಜೂಜಿನಬೈಲ್, ನಾರಾಯಣ ಭಟ್ಟ ಗೌಳಿವಾಡಾ, ನಾಗರಾಜ ಭಾಗ್ವತ ಮಾರ್ಗಜಡ್ಡಿ, ರಾಘವೇಂದ್ರ ಭಟ್ಟ ಕಬ್ಬಿನಗದ್ದೆ, ಸುಬ್ಬಣ್ಣ ದಾನ್ಯಾನಕೊಪ್ಪ, ನರಸಿಂಹ ಭಟ್ಟ ಬೆಳಸೂರು, ಗೋಪಾಲಕೃಷ್ಣ ಭಟ್ಟ ಬಾಳೆಗದ್ದೆ, ಲಕ್ಷ್ಮಣ ಮರಾಠಿ, ಹರೀಶ್ ಸಿದ್ದಿ, ಆರ್.ಜಿ. ಭಟ್ಟ ಬೆಳಸೂರು ಹಾಗೂ ಸ್ತ್ರೀ ಪಾತ್ರದಲ್ಲಿ ಹುಬ್ಬಳ್ಳಿಯ ನೇತ್ರಾ ಮತ್ತು ಸುನೇತ್ರ, ಶಿಲ್ಪಾ ಭದ್ರಾವತಿ ಪಾತ್ರ ಚಿತ್ರಣ ನೀಡಿದರು.ರಂಗಸಜ್ಜಿಕೆ ಗೋಪಾಲಕೃಷ್ಣ ಡ್ರಾಮಾ ಸೀನ್ಸ್ ಕುಮಟಾ, ಸಂಗೀತ ವಿ.ಟಿ. ಭಟ್ಟ ಕನಕನಹಳ್ಳಿ ಸಂಗಡಿಗರು ಕಾರ್ಯನಿರ್ವಹಿಸಿದರು.