ಅಂಗವಿಕಲರು ಆತ್ಮಸ್ಥೈರ್ಯ ಹೊಂದಲಿ: ನಿಂಗಪ್ಪ ಆರೇರ

| Published : Feb 19 2025, 12:46 AM IST

ಸಾರಾಂಶ

ಆತ್ಮಬಲದಿಂದ ಹಾಗೂ ಎಲ್ಲರಂತೆ ಅಂಗವಿಕಲರು ಬದುಕು ನಡೆಸಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಇಲಾಖೆಯ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿವೆ.

ಸವಣೂರು: ಅಂಗವಿಕಲರ ಅಭಿವೃದ್ಧಿಗೆ ಎಲ್ಲರೂ ಕಂಕಣಬದ್ಧರಾಗುವುದು ಅವಶ್ಯವಿದೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಬಲಿಷ್ಠರಾಗುವುದು ಮತ್ತು ಆತ್ಮಸ್ಥೈರ್ಯ ಹೊಂದಬೇಕು ಎಂದು ಹಿರೇಮುಗದೂರ ಗ್ರಾಪಂ ಸದಸ್ಯ ನಿಂಗಪ್ಪ ಎಂ. ಆರೇರ ತಿಳಿಸಿದರು.

ತಾಲೂಕಿನ ಹಿರೇಮುಗದೂರ ಗ್ರಾಪಂನಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಗ್ರಾಪಂ ಸಂಯೋಜನೆಯ ಸಂಚಾರಿ ಪುನರ್ವಸತಿ ತಜ್ಞರ ತಂಡದಿಂದ ಆಯೋಜಿಸಿದ್ದ ಅಂಗವಿಕಲರ ಉಚಿತ ಆರೋಗ್ಯ ತಪಾಸಣಾ ಹಾಗೂ ಜಾಗೃತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.ಆತ್ಮಬಲದಿಂದ ಹಾಗೂ ಎಲ್ಲರಂತೆ ಅಂಗವಿಕಲರು ಬದುಕು ನಡೆಸಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಇಲಾಖೆಯ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳನ್ನು ತಲುಪಿಸಲು ಸ್ಥಳೀಯ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಅವಶ್ಯವಿದೆ ಎಂದರು.

ತಾಪಂ ಎಂಆರ್‌ಡಬ್ಲ್ಯು ಶಿವಪ್ಪ ಎರೇಶಿಮಿ ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ಅಂಗವಿಕಲರು ವಂಚಿತರಾಗಬಾರದು. ತಾಲೂಕಿನ ಎಲ್ಲ ಅಂಗವಿಕಲರ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಪಂಗಳ ಸಹಕಾರ ಅವಶ್ಯಕವಾಗಿದೆ ಎಂದರು.ಡಿಡಿಆರ್‌ಸಿ ನೋಡಲ್ ಅಧಿಕಾರಿ ಡಾ. ಅಂಕಿತ ಆನಂದ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಸಮಸ್ಯೆ ಇರುವ ಅಂಗವಿಕಲರನ್ನು ಗುರುತಿಸಿ, ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. ಅವರಿಗೆ ಚಿಕಿತ್ಸೆಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.ಇದೇ ಸಮಯದಲ್ಲಿ ಡಿಡಿಆರ್‌ಸಿ ಕಾರ್ಯವೃಂದದದ ಡಾ. ಅಂಕಿತ ಆನಂದ, ಶಿವಪ್ಪ ಯರೇಶಿಮಿ, ಇರ್ಶಾದಲಿ ದುಂಡಸಿ, ಫಕ್ಕಿರೇಶ ಬಾರ್ಕಿ ಹಾಗೂ ಜಗದೀಶ ಬೇಟಿಗೇರಿ ಅವರನ್ನು ಅಮ್ಮಾ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಹನಮಂತಪ್ಪ ಸಂಗೂರ, ಗ್ರಂಥಾಲಯ ಮೇಲ್ವಿಚಾರಕಿ ಕವಿತಾ ಸೋಮಸಾಗರ, ಮಾಲತೇಶ ಕುಲಕರ್ಣಿ, ಎಂಬಿಕೆಗಳಾದ ವೀಣಾ ಕೆಂಬಾವಿಮಠ, ವಿಜಯಲಕ್ಷ್ಮಿ ಆರೇರ, ಬಸವಣ್ಣೆಪ್ಪ ಕುರವತ್ತಿಗೌಡ್ರ, ಶ್ರೀಪಾದಗೌಡ್ರ, ಪಾಟೀಲ, ಗುಡ್ಡಪ್ಪ ಆರೇರ, ಗಂಗಾಧರ ಬಡಿಗೇರ, ಸಣ್ಣಪ್ಪ ಹೊಸಮನಿ, ನಾಗಪ್ಪ ಬಡಿಗೇರ, ಶಿವಪ್ಪ ಅರಳಿ, ಯಲ್ಲಪ್ಪ ಕೆ., ಗುಡ್ಡಪ್ಪ ಎ. ಸೇರಿದಂತೆ ಗ್ರಾಪಂ ವ್ಯಾಪ್ತಿಯ ಅಂಗವಿಕಲರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಸವಣೂರು: ಪಟ್ಟಣದಲ್ಲಿ ಎಸ್‌ಸಿಪಿ, ಟಿಎಸ್‌ಪಿ ತುರ್ತು ಕಾಮಗಾರಿ ಹಿನ್ನೆಲೆ ಫೆ. 20ರಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸವಣೂರಿನ 110/33/11 ಕೆವಿ ವಿದ್ಯುತ್ ಉಪಕೇಂದ್ರದಿಂದ ಸರಬರಾಜುಗೊಳ್ಳುವ ಎಫ್- 1 ಇಂಡಸ್ಟ್ರೀಯಲ್ ಏರಿಯಾ, ಎಫ್- 8 ಸವಣೂರು ಪಟ್ಟಣ, ಎಫ್- 3 ತೋಟಾ ಮತ್ತು ಎಫ್- 11 ಯಲವಿಗಿ ಎನ್‌ಜೆವೈ ಫೀಡರ್‌ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.