ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವದ್ದು. ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ.

ಎಸ್‌ಐಆರ್ ಕುರಿತು ನೇಮಿಸಲಾದ ತಂಡಗಳ ಸಭೆಯಲ್ಲಿ ಮಾಜಿ ಶಾಸಕಿ

ಕನ್ನಡಪ್ರಭ ವಾರ್ತೆ ಅಂಕೋಲಾ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವದ್ದು. ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ವಿನಂತಿಸಿದರು.

ಅಂಕೋಲಾ ನಗರ ಮಹಾಶಕ್ತಿ ಕೇಂದ್ರ, ಅಗಸೂರ ಮಹಾಶಕ್ತಿ ಕೇಂದ್ರ, ಬೆಳಸೆ ಮಹಾಶಕ್ತಿ ಕೇಂದ್ರ, ಶೆಟಗೇರಿ ಮಹಾಶಕ್ತಿ ಕೇಂದ್ರ, ಭಾವಿಕೇರಿ ಮಹಾಶಕ್ತಿ ಕೇಂದ್ರ ಹಾಗೂ ಬಾವಿಕೇರಿ, ಅವರ್ಸಾ ಮಹಾಶಕ್ತಿ ಕೇಂದ್ರಗಳಲ್ಲಿ ನಡೆದ ಎಸ್‌ಐಆರ್ ಕುರಿತು ನೇಮಿಸಲಾದ ತಂಡಗಳ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪಕ್ಷದಿಂದ ನೇಮಿಸಲಾದ ಬಿಎಲ್ ಎ 2, ಬೂತ್ ಅಧ್ಯಕ್ಷರು, ಸದಸ್ಯರ ತಂಡಗಳು ಹಾಗೂ ಮಹಿಳಾ ಪ್ರಮುಖರು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮತದಾರರ ಪಟ್ಟಿ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು. ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು, ಮತದಾರರ ಯಾದಿಯಲ್ಲಿ ಯಾವುದೆ ಗೊಂದಲಕ್ಕೆ ಅವಕಾಶ ಇಲ್ಲದಂತೆ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಬಿಎಲ್ ಎ 1 ರಾಘವೇಂದ್ರ ಭಟ್, ಜಿಲ್ಲಾ ಸಹ ವಕ್ತಾರ ಜಗದೀಶ ಮೊಗಟಾ, ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ ಸೂರಜ ನಾಯ್ಕ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಧರ ನಾಯ್ಕ, ಚಂದ್ರಕಾಂತ ನಾಯ್ಕ, ನಾರಾಯಣ ಹೆಗಡೆ, ಮಂಕಾಳು ಗೌಡ, ಪ್ರವೀಣ ನಾಯ್ಕ, ರಾಜೇಶ ನಾಯ್ಕ, ಮಂಜುನಾಥ ಠಾಕೇಕರ್, ಬಿಎಲ್ ಎ 2 ಗಳು, ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಪ್ರಮುಖರು ಪಾಲ್ಗೊಂಡಿದ್ದರು.

ಉಪಯುಕ್ತ ಮಾಹಿತಿ

ಕಾರವಾರ ತಾಲೂಕಿನ ಹಲವೆಡೆ ಸಂಚರಿಸಿ ಎಸ್‌ಐಆರ್ ಕುರಿತು ಪಕ್ಷದ ತಂಡಗಳ ಸಭೆ ನಡೆಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ, ಅಂಕೋಲಾ ತಾಲೂಕಿನ ಮಹಾಶಕ್ತಿ ಕೇಂದ್ರಗಳಲ್ಲಿ ಸಂಘಟಿಸಿದ ಸಭೆಯಲ್ಲಿ ಪಾಲ್ಗೊಂಡು ಉಪಯುಕ್ತ ಮಾಹಿತಿ ನೀಡಿದರು.