ಸಾರಾಂಶ
ಜಗತ್ತಿನಲ್ಲಿ ಅತಿಹೆಚ್ಚು ಯುವ ಜನತೆ ಹೊಂದಿರುವ ಭಾರತದಲ್ಲಿ ಯುವಕರ ಶಕ್ತಿ ಸಾಮರ್ಥ್ಯಗಳು ಸದ್ಬಳಕೆಯಾಗಬೇಕು. ಕುಟುಂಬ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ಹೆಸರು ತರಲು ಶ್ರಮಿಸಬೇಕೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಗತ್ತಿನಲ್ಲಿ ಅತಿಹೆಚ್ಚು ಯುವ ಜನತೆ ಹೊಂದಿರುವ ಭಾರತದಲ್ಲಿ ಯುವಕರ ಶಕ್ತಿ ಸಾಮರ್ಥ್ಯಗಳು ಸದ್ಬಳಕೆಯಾಗಬೇಕು. ಕುಟುಂಬ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ಹೆಸರು ತರಲು ಶ್ರಮಿಸಬೇಕೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಕರೆ ನೀಡಿದರು.ನಗರದ ಸಿಕ್ಯಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎರಡು ದಿನಗಳ ಇಬ್ದಾ 3.0 ತಂತ್ರಜ್ಞಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಸಾಧನೆ ಮೂಲಕ ಸಮಾಜಕ್ಕೆ ನಮ್ಮ ಯುವಕರ ಅವಶ್ಯಕತೆ ಬಹಳಷ್ಟಿದೆ. ತಾವೂ ಕೂಡ ವಿದ್ಯಾರ್ಥಿ ಸಂಘಟನೆಯಲ್ಲಿ ದಶಕಗಳ ಕಾಲ ಬೆಳೆದು ಬಂದ ರೀತಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸುಮಾರು 60 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಶಾಲಾ ಕಾಲೇಜುಗಳ ಮೂಲಕ ಸೇವೆ ಸಲ್ಲಿಸುತ್ತಿರುವ ಸಿಕ್ಯಾಬ್ ಶಿಕ್ಷಣ ಸಂಸ್ಥೆಯು ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಈ ಸಂಸ್ಥೆಯಿಂದ ಪದವಿ ಪಡೆದ ವಿದ್ಯಾರ್ಥಿಗಳು ಜಗತ್ತಿನಲ್ಲಿ ನಾನಾ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಿರುವುದನ್ನು ಶ್ಲಾಘಿಸಿದರು. ಸಾಹಿತಿ ಸೈಯದ್ ಹೈದರ್ ಪಾಶಾ ಸಜ್ಜಾದೆ ಮಾತನಾಡಿ, ಬಡವರು ದುರ್ಬಲ ವರ್ಗದವರು ಮಹಿಳೆಯರು ಈ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಪಡೆದು ವಿಜಯಪುರದ ನಗರದ ಪಂಡಿತ ಪರಂಪರೆ ಮುಂದುವರಿಸಿರುವುದು ಸಂತಸ ಎಂದರು.ಸಂಸ್ಥೆ ನಿರ್ದೇಶಕ ಸಲಾವುದ್ದಿನ್ ಅಯೂಬಿ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸಂಸ್ಥೆಯಲ್ಲಿ ಎಲ್ಲ ರೀತಿಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು ಇಂಥ ಪ್ರಗತಿದಾಯಕ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೆಕೆಂದರು. ವಿವಿಧ ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೊ.ಸಚಿನ್ ಪಾಂಡೆ ಸ್ವಾಗತಿಸಿದರು. ಅಬುಬಕರ್ ಶೇಖ, ಹನಾ ಅಂಜುಮ್ ನಿರೂಪಿಸಿದರು. ವಿವಿಧ ಕಾಲೇಜುಗಳ ಶಕೀಲಾ ಬಿಳಗಿ, ನಜೀರ್ ಹುಂಡೇಕರ, ಎಂ.ಎಸ್.ಭಾವಿಕಟ್ಟಿ, ಎಲ್.ಎಸ್.ಗುರವ, ಎಸ್.ಎಸ್.ಸಜ್ಜನ, ಸನಾವುಲ್ಲಾ ಮಿರಜ್ಕರ, ಕಾಲೇಜಿನ ನಿರ್ದೇಶಕ ಸಲಾವುದ್ದಿನ ಪುಣೆಕರ, ಕಾರ್ಯದರ್ಶಿ ಎ.ಎಸ್.ಪಾಟೀಲ, ಮಲ್ಲಿಕಾರ್ಜುನ ಲೊಣಿ, ಸೈಯದ್ ಹೈದರ್ ವಲಿಪಾಷಾ, ರಫಿಕ್ ಬಂಡಾರಿ, ಸಲೀಂ ಜಾಘಿರದಾರ, ಡಾ.ಎಂ.ಕೆ.ರಬಿನಾಳ, ನಝಿಬ್ ಭಕ್ಷಿ, ಝಡ್.ಎಸ್.ಪುಣೆಕರ, ಝಡ್.ಎ.ಪುಣೆಕರ, ಪ್ರಾಚಾರ್ಯರಾದ ಡಾ.ಸೈಯದ್ ಅಬ್ಬಾಸಅಲಿ, ಡಾ.ಎಚ್.ಕೆ.ಯಡಹಳ್ಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))