ಸಾರಾಂಶ
ಸರ್ಕಾರ ಶೀಘ್ರವಾಗಿ ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡಬೇಕು ಮತ್ತು ರೈತರಿಗೆ ಪರಿಹಾರ ತಾರತಮ್ಯ ಪರಿಹರಿಸಬೇಕು ಎಂದು ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಸರ್ಕಾರ ಶೀಘ್ರವಾಗಿ ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡಬೇಕು ಮತ್ತು ರೈತರಿಗೆ ಪರಿಹಾರ ತಾರತಮ್ಯ ಪರಿಹರಿಸಬೇಕು ಎಂದು ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.ಅವರು ತಾಲೂಕಿನ ಕೋಳಾಲ ಹೋಬಳಿಯ ತಿಮ್ಮನಾಯಕನಹಳ್ಳಿಯ ಗ್ರಾಮದೇವತೆ ಮಾರಮ್ಮದೇವಸ್ಥಾನ ಲೋಕಾರ್ಪಣೆ ಮತ್ತು ಕಳಸ ಪ್ರತಿಷ್ಟಾಪನೆ ಕಾರ್ಯಕ್ರ ಉದ್ಘಾಟಿಸಿ ಮಾತನಾಡಿ, ಈ ಭಾಗದ ರೈತರು ಜಮೀನುಗಳನ್ನು ಎತ್ತಿನಹೋಳೆ ಯೋಜನೆಗೆ ಕಳೆದುಕೊಳ್ಳುತ್ತಿದ್ದಾರೆ, ಇದರಲ್ಲಿ ದೊಡ್ಡಬಳ್ಳಾಪುರ ಭಾಗದ ರೈತರಿಗೆ ಮತ್ತು ತುಮಕೂರು ಭಾಗದ ರೈತರಿಗೆ ವಿಭಿನ್ನ ಪರಿಹಾರ ನೀಡುತ್ತಿರುವುದು ನ್ಯಾಯಸಮ್ಮತವಲ್ಲ. ಒಂದೇ ಬದುವಿನ ಎರಡು ಜಮೀನುಗಳಿಗೆ ಪರಿಹಾರ ತಾರತಮ್ಯ ಮಾಡಬಾರದು. ಕೂಡಲೇ ಸರ್ಕಾರ ಈ ತಾರತಮ್ಯವನ್ನು ಹೋಗಲಾಡಿಸಬೇಕು. ವ್ಯವಸಾಯ ಉಳಿಯಬೇಕಾದರೆ ಸರ್ಕಾರಗಳು ಅವರಿಗೆ ಪೂರಕ ನೀತಿಗಳನ್ನು ಮಾಡಬೇಕು ಎಂದರು.ಈ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳು ಆಗಲೇಬೇಕು. ಇದಕ್ಕಾಗಿ ಪ್ರತಿವರ್ಷ ನೀರಾವರಿ ಹಕ್ಕೊತ್ತಾಯ ಕಾರ್ಯಕ್ರಮನ್ನು ಶ್ರೀ ಮಠದಿಂದ ರೈತರ ಜೊತೆಗೂಡಿ ಮಾಡಿಕೊಂಡು ಬರಲಾಗುತ್ತಿದೆ. ಈಗಾಗಲೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 22 ಟಿಎಂಸಿ ಎತ್ತಿನಹೊಳೆ ಯೋಜನೆಯಲ್ಲಿ 19 ಟಿಎಂಸಿ ನೀರನ್ನು ಹರಿಸುವ ಯೋಜನೆ ಶೀಘ್ರವಾಗಬೇಕು. ಕೈಗಾರಿಕೆಗಳಿಂದ ಭತ್ತರಾಗಿ ಆಹಾರಧಾನ್ಯ ತಯಾರಿಸಲು ಸಾಧ್ಯವಿಲ್ಲ. ರೈತರಿಗೆ ನೀರಾವರಿ ಯೋಜನೆ, ವೈಜ್ಞಾನಿಕ ಬೆಂಬಲ ಬೆಲೆ ಸರ್ಕಾರ ಒದಗಿಸಲೇಬೇಕು ಎಂದರು .
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯ ನಾಗರಾಜು, ಮಾಜಿ ತಾ.ಪಂ ಅದ್ಯಕ್ಷಕೆಂಪಣ್ಣ, ಮಾಜಿ ಸರ್ಕಾರಿ ನೌಕರ ಸಂಘದ ಅದ್ಯಕ್ಷ ವಿ.ಕೆ.ವೀರಕ್ಯಾತರಾಯ ಮುಖಂಡರುಗಳಾದ ಬೈರಪ್ಪ, ಚಿಕ್ಕರಂಗಯ್ಯ ಸೇರಿದಂತೆ ಇತರರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))