ಜಿಪಂ, ತಾಪಂ ಚುನಾವಣೆ ಬೇಗ ನಡೆಯಲಿ

| Published : Jan 03 2025, 12:31 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ಅಬ್ದುಲ್‌ ನಜೀರ್‌ ಸಾಬ್‌ ಪುಣ್ಯ ಸ್ಮರಣೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪುಷ್ಪಾರ್ಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಅಬ್ದುಲ್‌ ನಜೀರ್‌ ಸಾಬ್‌ ಮಾದರಿ ರಾಜಕಾರಣಿಯಾಗಿದ್ದರು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಬಣ್ಣಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಅಬ್ದುಲ್‌ ನಜೀರ್‌ ಸಾಬ್‌ ೩೭ನೇ ಪುಣ್ಯ ಸ್ಮರಣೆಯಲ್ಲಿ ಮಾತನಾಡಿ, ನಜೀರ್‌ ಪಂಚಾಯತ್‌ ರಾಜ್‌ ವ್ಯವಸ್ಥೆ ಮೂಲಕ ಶಾಸಕರ ನಂತರದ ರಾಜಕಾರಣಿಗಳಿಗೆ ಜಿಲ್ಲಾ ಪರಿಷತ್‌, ಮಂಡಲ ಪಂಚಾಯತ್‌ ಮೂಲಕ ಅಧಿಕಾರ ನೀಡಲು ಪ್ರಮುಖ ಕಾರಣರಾದರು. ಕುಡಿವ ನೀರಿನ ಹಾಹಾಕಾರ ಕಂಡು ಕೊಳವೆ ಬಾಯಿ ಕೊರೆಸುವ ಮೂಲಕ ನೀರ್‌ ಸಾಬ್‌ ಎಂದು ಬಿರುದು ಪಡೆದರು ಎಂದು ಹೇಳಿದರು.

ನಜೀರ್‌ ಸಾಬ್‌ ಆಸ್ಪತ್ರೆಯಲ್ಲಿದ್ದಂತ ಸಮಯದಲ್ಲಿ ಸಿಎಂ ಭೇಟಿ ನೀಡಿದಾಗ ವಸತಿ ರಹಿತರಿಗೆ ಮನೆ ಕಟ್ಟಿಕೊಳ್ಳಲು ಹಣ ಬಿಡುಗಡೆ ಮಾಡಿ ಎಂದಿದ್ದರು. ಆಗ ಅವರಲ್ಲಿ ಜನರ ಬಗ್ಗೆ ಎಷ್ಟು ಕಾಳಜಿ ಇತ್ತು ಎಂದು ಅರಿಯಬೇಕಿದೆ. ನಜೀರ್‌ ಸಾಬ್‌ ಅವರ ಕನಸಿನ ಜಿಪಂ, ತಾಪಂ ಚುನಾವಣೆ ಬೇಗ ನಡೆಯಲಿ ಎಂದರು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ದಿ. ಎಚ್.ಎಸ್.ಮಹದೇವಪ್ರಸಾದ್‌ ಸೇರಿದಂತೆ ನನ್ನಂತ ಅನೇಕ ನಾಯಕರ ಬೆಳವಣಿಗೆಯಲ್ಲಿ ನಜೀರ್‌ ಸಾಬ್‌ ಪಾತ್ರ ಪ್ರಮುಖವಾಗಿದೆ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ಜೈ ಕಿಸಾನ್‌ ಶಿವಣ್ಣ, ಜಿಲ್ಲಾ ಯೂನಿಯನ್‌ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ಬಸವರಾಜು, ಎಚ್.ಎನ್.ನಟೇಶ್‌, ಪುರಸಭೆ ಮಾಜಿ ಅಧ್ಯಕ್ಷ ಕಿರಣ್‌ ಗೌಡ, ಭಾಗ್ಯಮ್ಮ, ಮಾಜಿ ಉಪಾಧ್ಯಕ್ಷ ಎಸ್‌ಆರ್‌ಎಸ್‌ ರಾಜು, ಮುಖಂಡರಾದ ಮಂಚಹಳ್ಳಿ ಲೋಕೇಶ್‌, ದೇವರಹಳ್ಳಿ ಪ್ರಭು, ಪುಟ್ಟಸ್ವಾಮಿ ಆಚಾರ್‌, ಕಾರ್ಗಳ್ಳಿ ಸುರೇಶ್‌, ಬಿ.ಸಿ.ಮಹದೇವಸ್ವಾಮಿ, ವೀರನಪುರ ಚಂದ್ರು, ಜಿ.ಕೆ.ಲೋಕೇಶ್‌, ಪುರಸಭೆ ಸದಸ್ಯರಾದ ಮಹಮದ್‌ ಇಲಿಯಾಸ್‌, ಅಣ್ಣಯ್ಯಸ್ವಾಮಿ, ಪಿ.ಶಶಿಧರ್‌ ದೀಪು, ಎನ್.ಕುಮಾರ್‌, ಗೌಡ್ರ ಮಧು, ಶ್ರೀನಿವಾಸ್‌, ಎಲ್.ನಿರ್ಮಲ ಇದ್ದರು.