ಸಾರಾಂಶ
ಶಾಸಕನಾಗಿದ್ದಾಗ 2022ನೇ ಇಸವಿಯಲ್ಲಿ ಗಂಗೇನಹಳ್ಳಿ- ಮಸಣಿಕೆರೆ ಕೆರೆ ಮತ್ತು ಮುಳ್ಳುಕೆರೆಗೆ ಉಬ್ರಾಣಿ- ಅಮೃತಾಪುರ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ₹8.50 ಕೋಟಿ ಹಣ ಬಿಡುಗಡೆ ಮಾಡಿಸಿ, ಟೆಂಡರ್ ಕರೆದು ಭೂಮಿ ಪೂಜೆ ಮಾಡಲಾಗಿತ್ತು. ಆದರೂ, ಇದುವರೆಗೂ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಾರಂಭಿಸಿಲ್ಲ. ಇದು ರೈತರ ಮೇಲೆ ಸರ್ಕಾರ ಎಷ್ಟರಮಟ್ಟಿಗೆ ಕಾಳಜಿ ಇಟ್ಟಿದೆ ಎನ್ನುವುದನ್ನು ತೋರುತ್ತದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಶಾಸಕನಾಗಿದ್ದಾಗ 2022ನೇ ಇಸವಿಯಲ್ಲಿ ಗಂಗೇನಹಳ್ಳಿ- ಮಸಣಿಕೆರೆ ಕೆರೆ ಮತ್ತು ಮುಳ್ಳುಕೆರೆಗೆ ಉಬ್ರಾಣಿ- ಅಮೃತಾಪುರ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ₹8.50 ಕೋಟಿ ಹಣ ಬಿಡುಗಡೆ ಮಾಡಿಸಿ, ಟೆಂಡರ್ ಕರೆದು ಭೂಮಿ ಪೂಜೆ ಮಾಡಲಾಗಿತ್ತು. ಆದರೂ, ಇದುವರೆಗೂ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಾರಂಭಿಸಿಲ್ಲ. ಇದು ರೈತರ ಮೇಲೆ ಸರ್ಕಾರ ಎಷ್ಟರಮಟ್ಟಿಗೆ ಕಾಳಜಿ ಇಟ್ಟಿದೆ ಎನ್ನುವುದನ್ನು ತೋರುತ್ತದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ಸೋಮವಾರ ತಾಲೂಕಿನ ಮಸಣಿಕೆರೆ ಗ್ರಾಮದ ದೇವರಕಟ್ಟೆ ಕೆರೆ ತುಂಬಿದ ಹಿನ್ನೆಲೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ, ಅವರು ಮಾತನಾಡಿದರು. 2019ರಲ್ಲಿ ಇದೊಂದು ಸಣ್ಣ ಗುಂಡಿಯಾಗಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹20 ಲಕ್ಷ ವೆಚ್ಚದಲ್ಲಿ 30 ಅಡಿ ಆಳ, ಸಾಕಷ್ಟು ಸುತ್ತಳತ್ತೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಿದ್ದರ ಪ್ರತಿಫಲವಾಗಿ ಈ ಭಾಗದ ರೈತರು ಹರ್ಷಚಿತ್ತರಾಗಿದ್ದಾರೆ. ಈ ಕೆರೆಗೆ ನೀರನ್ನು ಹರಿಸಲು ₹10 ಲಕ್ಷ ಮಂಜೂರು ಮಾಡಿಸಿ, ಪದ್ಮಗಿರಿ ಹಳ್ಳದಿಂದ ಕೆರೆಗೆ ನೀರನ್ನು ಮೋಟಾರುಗಳ ಸಹಾಯದಿಂದ ತಂದ ಪರಿಣಾಮವಾಗಿ ಕೆರೆ ತುಂಬಿರುವುದು ಸಂತಸ ತಂದಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಗೊಂಡನಹಳ್ಳಿ ಜಗದೀಶ್, ಗ್ರಾಮದ ಪ್ರಮುಖರಾದ ಮಹಾರುದ್ರಪ್ಪ, ದೇವಣ್ಣ, ರವಿ, ತಿಮ್ಮಯ್ಯ, ಸುರೇಶ್, ಕುಮಾರ್, ಲಿಂಗೇಶಪ್ಪ, ಚಂದ್ರಪ್ಪ, ಮಂಜುನಾಥ್, ಗೋವಿಂದರಾಜು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.- - - -18ಕೆಸಿಎನ್‌ಜಿ3:
ಚನ್ನಗಿರಿ ತಾಲೂಕಿನ ಮಸಣಿಕೆರೆ ಗ್ರಾಮದ ದೇವರಕಟ್ಟೆ ಕೆರೆಗೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಾಗಿನ ಅರ್ಪಿಸಿದರು.