ಸಾರಾಂಶ
ಮುಳಗುಂದ: ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ, ಅವುಗಳನ್ನು ಕಾರ್ಮಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಗದಗ ಜಿಲ್ಲಾ ಯುತ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.
ಪಟ್ಟಣದ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಶಾದಿ ಹಾಲ್‌ನಲ್ಲಿ ಇತ್ತೀಚೆಗೆ ನಡೆದ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ 9ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಕಾರ್ಮಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕಾರ್ಮಿಕ ಸಂಘಗಳು ಅರ್ಹ ಕಾರ್ಮಿಕರಿಗೆ ಸರ್ಕಾರದ ಎಲ್ಲ ಯೋಜನೆಗಳು ತಲುಪಿಸುವ ಕೆಲಸ ಮಾಡಬೇಕು, ಯೋಜನೆ ತಲುಪಿಸುವಲ್ಲಿ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘವು ಮುಂಚೂಣಿಯಲ್ಲಿರುವದು ಶ್ಲಾಘನೀಯ ಎಂದರು.
ಡಾ.ಎಸ್.ಸಿ. ಚವಡಿ ಮಾತನಾಡಿ, ಯಾವ ಕಾಯಕವು ಕೀಳಲ್ಲ, ಯಾವುದೆ ಕಾಯಕ ಮಾಡಿದರೂ ಪ್ರಾಮಾಣಿಕ, ಶ್ರದ್ದೆಯಿಂದ ಮಾಡಿ ಕೂಲಿ ಕಾರ್ಮಿಕರು ದುಶ್ಚಟದಿಂದ ಅನಾರೋಗ್ಯ ತಂದುಕೊಳ್ಳುತ್ತಾರೆ, ಆದಷ್ಟು ಚಟಗಳಿಂದ ದೂರವಿರಲು ಪ್ರಯತ್ನಿಸಿ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಎಂದರು.ಈ ವೇಳೆ ಹಿರಿಯ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಂ.ಎ.ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಮುಳಗುಂದ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಣ್ಣ ನೀಲಗುಂದ, ಬಿಎಂಎಸ್ ಸಮಿತಿ ಅಧ್ಯಕ್ಷ ಎಂ.ಡಿ.ಬಟ್ಟೂರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಸುಂಕಾಪೂರ, ಕಾರ್ಮಿಕ ಕಲ್ಯಾಣ ಸಂಘದ ಗದಗ ಜಿಲ್ಲಾಧ್ಯಕ್ಷ ಇರ್ಫಾನ ಡಂಬಳ, ಎಂ.ಐ.ನವಲೂರ, ಈಶ್ವರ ಲಕ್ಷ್ಮೇಶ್ವರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ್ ಶೇಖ, ಸದಸ್ಯರಾದ ಎಸ್.ಸಿ. ಬಡ್ನಿ, ಎನ್.ಆರ್. ದೇಶಪಾಂಡೆ, ಕೆ.ಎಲ್.ಕರೇಗೌಡ್ರ, ವಿಜಯ ನೀಲಗುಂದ, ಅಂಜುಮನ್ ಕಮಿಟಿ ಅಧ್ಯಕ್ಷ ತಾಜ್ಜುದ್ದಿನ ಕಿಂಡ್ರಿ, ಗದಗ ಕಾರ್ಮಿಕ ನಿರೀಕ್ಷಕಿ ಸುಷ್ಮಾ, ಸೈಯದಲಿ ಶೇಖ, ಎಂ.ಎಂ. ಜಮಾಲಸಾಬನವರ, ಮಾಬೂಸಾಬ ಮುಳಗುಂದ, ಎ.ಡಿ. ಮುಜಾವರ, ದಾವುದ ಜಮಾಲಸಾಬನವರ ಮೊದಲಾವರು ಇದ್ದರು.