ರಾಜಕೀಯ, ಆರ್ಥಿಕವಾಗಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯಲಿ

| Published : Aug 13 2024, 12:56 AM IST

ರಾಜಕೀಯ, ಆರ್ಥಿಕವಾಗಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ, ದಾವಣಗೇರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಕಾಂಕ್ಷಿಗಳಾಗಿದ್ದರೂ ಟಿಕೆಟ್ ನೀಡದೇ ವಂಚನೆ ಮಾಡಲಾಗಿದೆ

ಗದಗ: ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದೆ ಉಳಿದಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದೇವೆ ಎಂದು ಕುರುಬ ಸಮುದಾಯದ ಮುಖಂಡ ರಾಜು ಮೌರ್ಯ ದಾವಣಗೇರಿ ಹೇಳಿದರು.

ಗದಗ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

ನಮ್ಮ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್‌ಗೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಸಮುದಾಯದ ಏಳ್ಗೆಗಾಗಿ ಆಗಸ್ಟ್‌ 25ರಂದು ನಗರದ ಭೀಮಸೇನ್ ಜೋಷಿ ರಂಗಮಂದಿಯದಲ್ಲಿ ರಾಜ್ಯಮಟ್ಟದ ನಾಯಕತ್ವ ಕಾರ್ಯಾಗಾರ ಆಯೋಜಿಸಲಾಗಿದೆ. ರುದ್ರಣ್ಣ ಗುಳಗುಳಿ ಹಾಗೂ ವಿಜಯಕುಮಾರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ಸೌಲಭ್ಯಗಳ ಬಗ್ಗೆ ಕುರುಬ ಸಮುದಾಯದ ಯುವಕರಿಗೆ ಟ್ರೇನಿಂಗ್‌ ನೀಡುವ ಕೆಲಸ ಮಾಡಲಾಗುತ್ತದೆ.ರಾಜ್ಯದ 31 ಜಿಲ್ಲೆಗಳಲ್ಲಿ 65 ಲಕ್ಷ ಜನಸಂಖ್ಯೆಯನ್ನು ಕುರುಬ ಸಮುದಾಯ ಹೊಂದಿದೆ. ಆದಾಗ್ಯೂ 2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಹಾವೇರಿ, ದಾವಣಗೇರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಕಾಂಕ್ಷಿಗಳಾಗಿದ್ದರೂ ಟಿಕೆಟ್ ನೀಡದೇ ವಂಚನೆ ಮಾಡಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯ ಎರಡು ಕ್ಷೇತ್ರಗಳ ಪೈಕಿ ಒಂದನ್ನು ಕುರುಬ ಸಮುದಾಯಕ್ಕೆ ನೀಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ತಪ್ಪಿಸಿದರು ಎಂದು ಬೇಸರದಿಂದ ಹೇಳಿದರು.

ಈ ಸಂದರ್ಭದಲ್ಲಿ ಉಮಾ ಸುಭಾಸ್ ದ್ಯಾವಣೂರ, ಸೋಮನಗೌಡ ಪಾಟೀಲ್, ರಾಘು ವಗ್ಗಣ್ಣನವರ, ಬಸವರಾಜ ನೀಲಗಾರ, ನಾಗರಾಜ ಮೇಣಸಗಿ, ಸುರೇಶ್ ಹಲವಾಗಲಿ, ಪ್ರಸಾದ್ ಆಡೀನ್, ಮುತ್ತು ಜಡಿ, ಕುಮಾರ ಮಾರನಬಸರಿ ಉಪಸ್ಥಿತರಿದ್ದರು.