ಇಂದಿನಿಂದ ಒಳ್ಳೆಯ ತೇಜಸ್ಸನ್ನು ಇಟ್ಟುಕೊಂಡು ಸೂರ್ಯ ಉತ್ತರಾಯಣ ಪೂರ್ವ ಕಾಲಕ್ಕೆ ಪ್ರವೇಶ ಮಾಡುತ್ತಾನೆ. ಅಂತಹ ತೇಜಸ್ಸನ್ನು ಹೆಚ್ಚಿಸಿಕೊಂಡಿರುವಂತಹ ರವಿಯ ಪ್ರಭೆ ನಮ್ಮೆಲ್ಲರ ಅಂತರಂಗ, ಬಹಿರಂಗದ ಮೇಲೆ ಬೀಳಲಿ. ಎಲ್ಲರಿಗೂ ಶ್ರದ್ಧೆ, ಭಕ್ತಿ, ನಂಬಿಕೆ, ನಿಷ್ಠೆ, ಸದಾಕಾಲ ಸನ್ಮಾರ್ಗ, ಸುದ್ಬುದ್ಧಿ, ಸುಜ್ಞಾನವನ್ನು ಕರುಣಿಸಲಿ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.

- ಮಕರ ಸಂಕ್ರಾಂತಿ ಅಂಗವಾಗಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇಂದಿನಿಂದ ಒಳ್ಳೆಯ ತೇಜಸ್ಸನ್ನು ಇಟ್ಟುಕೊಂಡು ಸೂರ್ಯ ಉತ್ತರಾಯಣ ಪೂರ್ವ ಕಾಲಕ್ಕೆ ಪ್ರವೇಶ ಮಾಡುತ್ತಾನೆ. ಅಂತಹ ತೇಜಸ್ಸನ್ನು ಹೆಚ್ಚಿಸಿಕೊಂಡಿರುವಂತಹ ರವಿಯ ಪ್ರಭೆ ನಮ್ಮೆಲ್ಲರ ಅಂತರಂಗ, ಬಹಿರಂಗದ ಮೇಲೆ ಬೀಳಲಿ. ಎಲ್ಲರಿಗೂ ಶ್ರದ್ಧೆ, ಭಕ್ತಿ, ನಂಬಿಕೆ, ನಿಷ್ಠೆ, ಸದಾಕಾಲ ಸನ್ಮಾರ್ಗ, ಸುದ್ಬುದ್ಧಿ, ಸುಜ್ಞಾನವನ್ನು ಕರುಣಿಸಲಿ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಮಂಗಳವಾರ ಮುಂಜಾನೆ ಸಂಕಲ್ಪ ಸೇವಾ ಫೌಂಡೇಷನ್, ಸಂಕಲ್ಪ ಯೋಗ ಶಾಲೆ-4, ಅಮೃತಾಮಯಿ ಅಷ್ಠಾಂಗ ಯೋಗ ಸಹಯೋಗದಲ್ಲಿ ಮಕರ ಸಂಕ್ರಮಣ ಅಂಗವಾಗಿ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಬಾಧಿಸುವ, ಬರುತ್ತಿರುವ ಎಲ್ಲ ಭವಗಳನ್ನು ಸೂರ್ಯನು ನಿವಾರಣೆ ಮಾಡುವಂಥವನಾಗಬೇಕು. ರವಿಯ ಪ್ರಭೆಗಾಗಿ ಇಂದು ದುಗ್ಗಮ್ಮನ ಸನ್ನಿಧಿಯಲ್ಲಿ ಯೋಗ ಶಿಬಿರಾರ್ಥಿಗಳು 108 ಸೂರ್ಯ ನಮಸ್ಕಾರವನ್ನು ಸಾಮೂಹಿಕವಾಗಿ ಮಾಡಿದ್ದೀರಿ. ಈ ಪುಣ್ಯದ ಫಲ ನಿಮಗಷ್ಟೇ ದೊರಕಿಲ್ಲ, ಆ ದೇವಿಗೆ ಪ್ರೀತಿಯಾಗಿದೆ. ದೇವಿಯ ಪ್ರೀತಿಯಿಂದ ಚೈತನ್ಯ ಶಕ್ತಿ ವೃದ್ಧಿಯಾಗಿದೆ. ಆ ತಾಯಿ ಕೃಪಾಕಾರುಣ್ಯ ನಾಡಿನ ಉದ್ದಗಲಕ್ಕೂ ಜೀವಸಂಕುಲದ ಮೇಲೆ ಬಿದ್ದಿದೆ ಎಂದರು.

ಈ ಸಂದರ್ಭದಲ್ಲಿ ಸಂಕಲ್ಪ ಸೇವಾ ಫೌಂಡೇಷನ್ ಅಧ್ಯಕ್ಷ ಜಿ.ಮಹಾಂತೇಶ ಅವರ 51ನೇ ವರ್ಷದ ಜನ್ಮದಿನ ಆಚರಿಸಲಾಯಿತು. ಕೊಟ್ಟೂರೇಶ್ವರ ಪಾದಯಾತ್ರೆ ಟ್ರಸ್ಟ್‌ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಯೋಗಗುರು ಕೆ.ಕರಿಬಸಪ್ಪ, ಉತ್ತಂಗಿ ಪ್ರಕಾಶ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ, ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಡಿ.ಆರ್. ಶಂಕರ್, ಎಚ್.ಬಸವರಾಜಪ್ಪ, ಶಿಕ್ಷಕ ಜಯಪ್ಪ, ಮಲ್ಲಿಕಾರ್ಜುನಪ್ಪ, ಉಮೇಶ ಕೊಂಡಜ್ಜಿ, ರಂಗನಾಥ, ಎಲ್.ಬಿ.ಸುರೇಶ, ಶಿವಪುತ್ರಪ್ಪ, ದುಗ್ಗೇಶ, ನಿರಂಜನ, ರಾಜು ಬದ್ದಿ, ಕಿರಣಕುಮಾರ, ಶ್ರೀಕಾಂತ, ಸಂಕಲ್ಪ ಯೋಗ ಶಾಲೆಯ ಸದಸ್ಯರು ಇತರರು ಇದ್ದರು.

- - - -14ಕೆಡಿವಿಜಿ31.ಜೆಪಿಜಿ:

ದಾವಣಗೆರೆಯಲ್ಲಿಂದು ಸಂಕಲ್ಪ ಸೇವಾ ಫೌಂಡೇಷನ್‌ನಿಂದ ನಡೆದ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆವರಗೊಳ್ಳ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.