ಉಸ್ತುವಾರಿ ಸಚಿವರು ಕೂಡಲೇ ಜಿಲ್ಲೆಗೆ ಧಾವಿಸಲಿ

| Published : Jul 28 2024, 02:04 AM IST

ಸಾರಾಂಶ

ಬಾಳೆಹೊನ್ನೂರು, ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗಿ 6 ತಾಲೂಕುಗಳಲ್ಲಿ ಕಳೆದ 15-20 ದಿನಗಳಿಂದ ಕೋಟ್ಯಂತರ ರು. ಆಸ್ತಿಪಾಸ್ತಿ ಹಾನಿ ಜತೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಉಸ್ತುವಾರಿ ಸಚಿವರು ಈವರೆಗೆ ಜಿಲ್ಲೆ ಭೇಟಿ ನೀಡಿಲ್ಲ. ಕೆ.ಜೆ.ಜಾರ್ಜ್ ಅವರು ಸಮಸ್ಯೆ ತೀವ್ರತೆ ಅರಿತು ಕೂಡಲೇ ಜಿಲ್ಲೆಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗಿ 6 ತಾಲೂಕುಗಳಲ್ಲಿ ಕಳೆದ 15-20 ದಿನಗಳಿಂದ ಕೋಟ್ಯಂತರ ರು. ಆಸ್ತಿಪಾಸ್ತಿ ಹಾನಿ ಜತೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಉಸ್ತುವಾರಿ ಸಚಿವರು ಈವರೆಗೆ ಜಿಲ್ಲೆ ಭೇಟಿ ನೀಡಿಲ್ಲ. ಕೆ.ಜೆ.ಜಾರ್ಜ್ ಅವರು ಸಮಸ್ಯೆ ತೀವ್ರತೆ ಅರಿತು ಕೂಡಲೇ ಜಿಲ್ಲೆಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಒತ್ತಾಯಿಸಿದ್ದಾರೆ

ಅತಿಯಾದ ಮಳೆಯಿಂದ ಹಲವು ಕಡೆ ಭೂ ಕುಸಿತ, ಸೇತುವೆ, ಕಾಲುಸಂಕ, ರಸ್ತೆಗಳಿಗೆ ಹಾನಿಯಾಗಿದೆ. ಮನೆಗಳ ಮೇಲೆ ಮರ ಉರುಳಿ, ಗೋಡೆ ಕುಸಿದು ಕುಟುಂಬಸ್ಥರು ಆತಂಕದಲ್ಲಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ವಿತರಿಸುವುದು ಆದ್ಯ ಕರ್ತವ್ಯ. ಮಳೆಯಿಂದ ಉಂಟಾದ ಸಮಸ್ಯೆ ಕುರಿತು ಜಿಲ್ಲಾಡಳಿತ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಸಹ ಅವರ ಜವಾಬ್ದಾರಿ ಎಂದರು.

ಈಗಾಗಲೇ ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿ ಅಡಕೆ, ಕಾಫಿ, ಕಾಳುಮೆಣಸು ಬೆಳೆಗಳಿಗೆ ಕೊಳೆ ರೋಗ ತಗುಲುತ್ತಿದೆ. ಬತ್ತದ ನಾಟಿಗೆ ಹಾಕಿದ ಸಸಿಗಳು ಕೊಳೆಯುತ್ತಿದೆ. ಸ್ವತಃ ಕಾಫಿ ಬೆಳೆಗಾರರು, ಉತ್ತಮ ಸೇವಾ ಮನೋಭಾವ ಹೊಂದಿರುವ ಜಾರ್ಜ್ ಅವರಿಗೆ ಬೆಳೆಗಾರರ ಪರಿಸ್ಥಿತಿ ಅರ್ಥವಾಗಲಿದೆ ಎಂದು ಭಾವಿಸಿದ್ದೇವೆ ಎಂದರು.

ಉಸ್ತುವಾರಿ ಸಚಿವರು ಇಂಧನ ಮಂತ್ರಿಯೂ ಆಗಿದ್ದು, ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದಲ್ಲಿ ಮೆಸ್ಕಾಂನ ವಿದ್ಯುತ್ ಕಂಬಗಳು ಹಾನಿಯಾಗಿದೆ. ಮೆಸ್ಕಾಂ ನೌಕರರು ಹಗಲಿರುಳು ಕರ್ತವ್ಯ ನಿರ್ವಹಿಸಿದರೂ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೆಸ್ಕಾಂನ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

೨೬ಬಿಹೆಚ್‌ಆರ್ ೭: ಟಿ.ಎಂ.ಉಮೇಶ್.