ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಕ್ಷೇತ್ರದಲ್ಲಿ ಬಡವರ ಪರವಾಗಿ ಪ್ರ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳು ಬೇಕು ಸುಖಾಸುಮ್ಮನೆ ಕಾಲಹರಣ ಮಾಡುವ ಅಧಿಕಾರಿಗಳು ಕ್ಷೇತ್ರ ಬಿಟ್ಟು ಹೋಗಲಿ, ನಿಗದಿತ ಅವಧಿಯೊಳಗೆ ತಮ್ಮ ಕೆಲಸ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಗ್ಯಾರಂಟಿ ಎಂದು ಅಧಿಕಾರಿಗಳಿಗೆ ಶಾಸಕಿ ರೂಪಕಲಾ ಶಶಿಧರ್ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಆಡಳಿತ ಸೌಧದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಕೆಜಿಎಫ್ ವಿಧಾನಸಭೆ ಕ್ಷೇತ್ರವನ್ನು ಬರಪೀಡಿತ ತಾಲೂಕು ಎಂದು ಘೊಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ಪಶು ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ತಡಬಡಾಯಿಸಿದು ಅಧಿಕಾರಿಗಳು:
ಸರ್ಕಾರ ಕೆಜಿಎಫ್ ವಿಧಾನಸಭೆ ಕ್ಷೇತ್ರವನ್ನು ಬರಗಾಲ ಪೀಡಿತ ಕ್ಷೇತ್ರವನ್ನಾಗಿ ಘೊಷಣೆ ಮಾಡಿದ್ದು ಕ್ಷೇತ್ರದಲ್ಲಿ ಮೇವು ಎಷ್ಟು ಸಂಗ್ರಹಣೆ ಮಾಡಲಾಗಿದೆ ಮತ್ತು ಮುಂದಿನ ಬೇಸಿಗೆ ಅವದಿಯಲ್ಲಿ ಅಗತ್ಯವಿರುವ ಮೇವು ಎಷ್ಟು ಎಂಬ ಅಂಕಿ ಅಂಶದ ಪಟ್ಟಿ ನೀಡಿ ಎಂದು ಪಶು ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ಉತ್ತರಿಸಲು ಅಧಿಕಾರಿ ತಡಬಡಾಯಿಸಿದರು.ತಾಲೂಕಿನಲ್ಲಿ ಯಾವ ಬೆಳೆಗಳು ನಷ್ಟವಾಗಿವೆ, ರೈತರು ಬೆಳೆದ ಯಾವ ಬೆಳೆ ಹೆಚ್ಚು ನಷ್ಟವಾಗಿದೆ ಮತ್ತು ರೈತರಿಗೆ ಸರ್ಕಾರದಿಂದ ವಿತರಿಸಿರುವ ನಷ್ಟ ಪರಿಹಾರದ ಅಂಕಿ ಅಂಶಗಳ ಪಟ್ಟಿ ನೀಡುವಂತೆ ಸೂಚಿಸಿದರು.
ಎನ್‌ಡಿಆರ್‌ಎಫ್‌ಗೆ ವರದಿ:ಹಲವು ವರ್ಷಗಳಿಂದ ಜನರಿಗೆ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸುವ ಮೂಲಕ ಶಾಶ್ವತ ಕ್ರಮ ಕೈಗೊಳ್ಳಲಾಗಿತ್ತು. ಮುಂದಿನ ಬೇಸಿಗೆ ದಿನಗಳಲ್ಲೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗದಂತೆ ಅಗತ್ಯವಿರುವಡೆ ಕೊಳವೆ ಬಾವಿಗಳನ್ನು ಕೊರೆಸಲು ಎನ್‌ಡಿಆರ್‌ಎಫ್‌ಗೆ ವರದಿಯನ್ನು ನೀಡಬೇಕಿರುವುದರಿಂದ ನಗರದ ೩೫ ವಾರ್ಡ್‌ಗಳಲ್ಲಿನ ವರದಿ ಕೇಳಲಾಗಿತ್ತು.
ನಗರಸಭೆ ಪೌರಾಯುಕ್ತರು ಇದುವರೆಗೆ ಶೇ.೬೦ ರಷ್ಟು ವರದಿ ಮಾತ್ರ ನೀಡಿದ್ದು, ಇನ್ನು ಶೇ.೩೦ ರಷ್ಟು ವರದಿ ನೀಡಬೇಕಿದೆ. ಅದರಂತೆ ಗ್ರಾಮೀಣ ಭಾಗದ ಗ್ರಾಪಂ ಪಿಡಿಓಗಳು, ಅಧ್ಯಕ್ಷರು, ಸದಸ್ಯರು ತಾಪಂ ಇಓ ವರದಿಯನ್ನು ಕೇಳಲಾಗಿತ್ತು. ಅವರು ಸಹ ಶೇ.೮೦ ರಷ್ಟು ವರದಿ ನೀಡಿದ್ದು ಅಧಿಕಾರಿಗಳು ನೀಡಿರುವ ವರದಿ ಎನ್‌ಡಿಆರ್‌ಎಫ್‌ಗೆ ಸಲ್ಲಿಸಲಾಗುವುದು. ಅದರಂತೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗುವ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.ಬಾಡಿಗೆ ಹಣ ಪಾವತಿಸಲು ಪೆಟಿಎಂ:
ನಗರದ ಎಂ.ಜಿ. ಮಾರುಕಟ್ಟೆ ವ್ಯಾಪಾರಸ್ಥರು ಇನ್ನು ಮುಂದೆ ನಗರಸಭೆಗೆ ಕಟ್ಟ ಬೇಕಾಗಿರುವ ತೆರಿಗೆಯನ್ನು ಪಾವತಿಸಲು ಬ್ಯಾಂಕ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಪೇಟಿಎಂ ಯಂತ್ರದ ಮೂಲಕ ವ್ಯಾಪಾರಸ್ಥರು ಸುಲಭವಾಗಿ ತಾವಿರುವ ಸ್ಥಳದಿಂದಲೇ ಕಂದಾಯ, ಬಾಡಿಗೆ ಹಣವನ್ನು ಸುಲಭವಾಗಿ ಪಾವತಿ ಮಾಡಬಹುದು. ಪೇಟಿಎಂ ಯಂತ್ರವನ್ನು ನಿಮ್ಮ ಅಂಗಡಿಗಳ ಬಳಿ ತರಲಾಗುವುದು ಹಣವನ್ನು ಪಾವತಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿದ್ದು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.ತಹಸೀಲ್ದಾರ್ ನಾಗವೇಣಿ, ತಾಪಂ ಇಓ ಮಂಜುನಾಥ್ ಹರ್ತಿ, ನಗರಸಭೆ ಪೌರಾಯುಕ್ತ ಪವನ್ ಕುಮಾರ್, ಪಿಆರ್‌ಇಡಿ ಎಇಇ ಶೇಷಾದ್ರಿ ಇದ್ದರು.