ಸಾರಾಂಶ
ಹಾವೇರಿ ಪಟ್ಟಣದ ಎಸ್‌ಆರ್‌ಜೆವಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಕ್ಕಳಿಗಾಗಿ ರೆಕ್ಕೆಗಳಾಗೋಣ ವಿನೂತನ ಕಾರ್ಯಕ್ರಮ, ಉಪನ್ಯಾಸ ಮತ್ತು ಸನ್ಮಾನ ಸಮಾರಂಭ ನಡೆಯಿತು.
ಶಿಗ್ಗಾಂವಿ: ಕನ್ನಡ ಸಾಹಿತ್ಯ ಸುಮಾರು ೨ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು, ಕನ್ನಡಿಗರು ಸುಸಜ್ಜಿತ, ಸಭ್ಯರು, ಸೌಜನ್ಯರು. ಆದರೆ ಕೆಟ್ಟವರಿಗೆ ಅತಿಯಾದ ಕೆಟ್ಟವರು ಕನ್ನಡಿಗರಾಗಿದ್ದಾರೆ ಎಂದು ಹಾವೇರಿಯ ಜಾನಪದ ತಜ್ಞ ಶಂಭು ಬಳಿಗಾರ ಹೇಳಿದರು.
ಪಟ್ಟಣದ ಎಸ್‌ಆರ್‌ಜೆವಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಕ್ಕಳಿಗಾಗಿ ರೆಕ್ಕೆಗಳಾಗೋಣ ವಿನೂತನ ಕಾರ್ಯಕ್ರಮ, ಉಪನ್ಯಾಸ ಮತ್ತು ಸನ್ಮಾನ ಸಮಾರಂಭ ಎಸ್.ಆರ್.ಜೆ.ವಿ. ಕಾಲೇಜು, ಎನ್.ಎಸ್.ಎಸ್. ಸಂಯುಕ್ತಾಶ್ರಯದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಭ್ಯ ಸಮಾಜದ ನಿರ್ಮಾಣಕ್ಕೆ ಲೇಖನಿ ತಲೆ ಎತ್ತಬೇಕು. ವಿನಯ, ಸಂಸ್ಕಾರ ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತದೆ. ಮಿಂಚಿ ಹೋದ ಸಮಯ ಮರಳಿ ಬರುವುದಿಲ್ಲ, ತಂದೆ-ತಾಯಿ ಉಪಕಾರ ಮಕ್ಕಳು ಸ್ಮರಿಸಿ ಜೀವನ ಸಾಗಿಸಬೇಕು ಎಂದರು.ಕಾಲೇಜು ನಿರ್ದೇಶಕ ಎಂ. ಕೋಟ್ರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ನಿರ್ದೇಶಕ ಪಿ.ಸಿ. ಹಿರೇಮಠ, ಕಸಾಪ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಿವಯ್ಯ ಪೂಜಾರ, ಕಸಾಪ ಕೋಶಾಧ್ಯಕ್ಷ ಬಸವರಾಜ ಹೆಸರೂರ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಲಲಿತಾ ಹಿರೇಮಠ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಇಂದೂಧರ ಮುತ್ತಳ್ಳಿ ಉಪನ್ಯಾಸ ನೀಡಿದರು.
ಕರವೇ ತಾಲೂಕು ಅಧ್ಯಕ್ಷ ಸಂತೋಷಗೌಡ ಪಾಟೀಲ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸಂಘದ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಗುಡಗೇರಿ, ಪತ್ರಕರ್ತರಾದ ಪಿ.ಎಂ. ಸತ್ಯಪ್ಪನವರ, ಬಸವರಾಜ ವಿ.ಎಚ್. ಕಸಾಪ ಗೌರವ ಕಾರ್ಯದರ್ಶಿ ಡಾ. ಸುಮಂಗಲಾ ಅತ್ತಿಗೇರಿ ಅವರನ್ನು ಗೌರವಿಸಲಾಯಿತು.ಎಸ್.ಎನ್. ನಾಯೀಕೊಡದ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ರಾಜೇಶ್ವರಿ ಹಾಗೂ ವರ್ಷಾ ಕಾರ್ಯಕ್ರಮ ನಿರೂಪಿಸಿದರು.