ಏಕತೆ, ಅಖಂಡತೆ ರಕ್ಷಣೆ ಪರಮ ಕರ್ತವ್ಯವಾಗಲಿ: ಭೋವಿ ಶ್ರೀ

| Published : Jul 30 2024, 12:39 AM IST / Updated: Jul 30 2024, 12:40 AM IST

ಸಾರಾಂಶ

ಮಾನವೀಯ ಮೌಲ್ಯಗಳಿಂದಾಗಿ ಸಮಾಜದಲ್ಲಿ ಧರ್ಮಗಳು ಅಸ್ಥಿತ್ವದಲ್ಲಿವೆ. ಮಾನವ ತನ್ನಲ್ಲಿರುವ ಮಾನವೀಯತೆ ಉದ್ದೀಪನಗೊಳಿಸಿಕೊಂಡಾಗ ಮಾತ್ರ ಮಹಾಮಾನವತಾವಾದಿ ಆಗಲು ಸಾಧ್ಯ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ವೆಂಕ ಭೋವಿ ಕಾಲೋನಿ ಗುರುಪೀಠದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ 62ನೇ ರಥೋತ್ಸವ ನಿಮಿತ್ತ ಧರ್ಮ ಧ್ವಜಾರೋಹಣ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾನವೀಯ ಮೌಲ್ಯಗಳಿಂದಾಗಿ ಸಮಾಜದಲ್ಲಿ ಧರ್ಮಗಳು ಅಸ್ಥಿತ್ವದಲ್ಲಿವೆ. ಮಾನವ ತನ್ನಲ್ಲಿರುವ ಮಾನವೀಯತೆ ಉದ್ದೀಪನಗೊಳಿಸಿಕೊಂಡಾಗ ಮಾತ್ರ ಮಹಾಮಾನವತಾವಾದಿ ಆಗಲು ಸಾಧ್ಯ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನುಡಿದರು.

ನಗರದ ವೆಂಕ ಭೋವಿ ಕಾಲೋನಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ಆ.5ರ ಶ್ರಾವಣ ಮೊದಲನೇ ಸೋಮವಾರ ಜರುಗುವ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ದೇವರ 62ನೇ ರಥೋತ್ಸವ ನಿಮಿತ್ತ ಧರ್ಮ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ಪೂಜ್ಯರು ಜಗತ್ತಿನ ಮಾನವ ಸಹಜ ಆಲೋಚನೆ, ಬಾಲ್ಯ ಹಣ್ಣು, ತಾರುಣ್ಯ ಹೆಣ್ಣು, ಸಂಸಾರ ಹೊನ್ನು, ಮುಪ್ಪು ಮಣ್ಣನ್ನು ಬಯಸುತ್ತದೆ. ದಾರ್ಶನಿಕರ ವಿಚಾರಗಳು ಈ ರೀತಿ ಇರದೇ, ಇದಕ್ಕಿಂತ ವಿಭಿನ್ನವಾಗಿರುತ್ತದೆ. ಸಾಹಸ, ಸಹಕಾರ, ಸಂಘರ್ಷ, ಸಾಂತ್ವನ ಸಂಯಮದಿಂದ ಕೂಡಿದ ವಿಚಾರಗಳಿಂದ ಜಗತ್ತಿನ ಸರ್ವಶ್ರೇಷ್ಠ ಸಾಧಕರ ಪಟ್ಚಿಗೆ ದಾರ್ಶನಿಕರು ಸೇರುತ್ತಾರೆ ಎಂದರು.

ಹಳೇ ಬೇರಿನಂತಿರುವ ಹಿರಿಯರನ್ನು ಹೊಸ ಚಿಗುರಿನ ಯುವಕರನ್ನು ಸಮಾನವಾಗಿ ಗೌರವಿಸುವ ಕೆಲಸ ಆಗಬೇಕು. ಕಿರಿಯರ ಉತ್ಸಾಹವು ಹಿರಿಯರ ಪ್ರೋತ್ಸಾಹ ಸೇರಿದರೆ, ಜಾತ್ರೋತ್ಸವವೂ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜರುಗುತ್ತದೆ. ಸಮುದಾಯದಲ್ಲಿ ಏಕತೆ ಮತ್ತು ಅಖಂಡತೆ ಕಾಪಾಡುವುದು ನಮ್ಮೆಲ್ಲರ ಪರಮ ಕರ್ತವ್ಯವಾಗಬೇಕು. ಸಾಮರಸ್ಯದ ಮನಸ್ಸುಗಳಲ್ಲಿ ಒಳ್ಳೆಯ ಒಗ್ಗಟ್ಟಿನ ಶಕ್ತಿ ಇರುತ್ತದೆ ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿವರಿಸಿದರು.

ಉತ್ಸವ ಸಮಿತಿಗೆ ಆಯ್ಕೆಯಾದ ಶ್ರೀ ಪೀಠದ ಧರ್ಮದರ್ಶಿ ಬಿ.ಟಿ.ಸಿದ್ದಪ್ಪ, ಎಚ್.ಜಯಣ್ಣ, ವಿ.ಗೋಪಾಲ, ಎ.ಬಿ.ನಾಗರಾಜ, ಟಿ,ಮಂಜುನಾಥ, ಪಿ.ಶ್ರೀನಿವಾಸ, ಬಿ.ಎನ್.ವಿನಾಯಕ, ಡಿ.ಬಸವರಾಜ, ಎಂಜಿನಿಯರ್ ವೆಂಕಟೇಶ, ಶ್ರೀನಿವಾಸ, ಶಿವಶಂಕರ ಶಿಲ್ಪಿ. ಟಿ., ಉಮಾ ಕುಮಾರ, ರಾಜಣ್ಣ ಚನ್ನಗಿರಿ, ಅರ್ಜುನ ಜಗಳೂರು, ಜಿ.ಮಂಜುನಾಥ ಹೊನ್ನಾಳಿ, ರಾಜಣ್ಣ ಚಟ್ನಹಳ್ಳಿ, ಅಂಜಿನಪ್ಪ ಹರಪನಹಳ್ಳಿ, ವೀರಭದ್ರಪ್ಪ ಹರಿಹರ, ದಿನೇಶ ನ್ಯಾಮತಿ, ಬಿ.ವೀರೇಶ, ಎಂ.ಚಾಮರಾಜ, ವಿನೋದ, ಮಂಜುನಾಥ ನಲ್ಲಿ, ಪ್ರವೀಣ, ಜಿ.ಸೋಮಶೇಖರ, ಶೇಖರಪ್ಪ, ಜಿ.ಮಂಜಪ್ಪ. ಪಿ.ರವಿಕುಮಾರ ಇದ್ದರು. ಉತ್ಸವದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಸಮಿತಿ ರಚಿಸಿದ ಶ್ರೀಗಳು ತಿಳಿಸಿದರು.

- - - ಕೋಟ್‌ ದೈವಿಕ ಶಕ್ತಿಯ ಯಾತ್ರೆಯಾದ ಜಾತ್ರೆಗಳು ಯಾರಿಂದನೂ ನಡೆಯುವುದಿಲ್ಲ, ಅವು ಯಾರಿಂದಲೂ ನಿಲ್ಲುವುದೂ ಇಲ್ಲ. ಕಾರ್ಯದ ನೆಪಕ್ಕೆ ವ್ಯಕ್ತಿಯ ಪ್ರವೇಶವಾಗಿರುತ್ತದೆ ಅಷ್ಟೇ. ನಾನು, ನನ್ನಿಂದ ಎನ್ನುವ ಅಹಂಕಾರದಿಂದ ಮೊದಲು ಹೊರಬಂದು, ನಮ್ಮಿಂದ ಎನ್ನುವ ಸಮಷ್ಠಿಪ್ರಜ್ಞೆ ಮೂಡಬೇಕು

- ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಭೋವಿ ಗುರುಪೀಠ, ಚಿತ್ರದುರ್ಗ

- - - -29ಕೆಡಿವಿಜಿ1:

ದಾವಣಗೆರೆ ವೆಂಕಾ ಭೋವಿ ಕಾಲೋನಿಯಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ 62ನೇ ರಥೋತ್ಸವ ನಿಮಿತ್ತ ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಧರ್ಮ ಧ್ವಜಾರೋಹಣ ನೇರವೇರಿಸಿದರು. ಈ ಸಂದರ್ಭ ಸಮಾಜದ ಮುಖಂಡರು ಇದ್ದರು.