ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಇತಿಹಾಸದಲ್ಲಿ ಧೈರ್ಯ, ಸಾಹಸ ಶೂರತ್ವಕ್ಕೆ ಹೆಸರಾದ ರಜಪೂತ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಮಾಜದವರು ಮೊದಲು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದು ರಜಪೂತ ಮಹಾಸಭಾದ ತಾಲೂಕು ಘಟಕದ ನೂತನ ಅಧ್ಯಕ್ಷ ಟಿ. ಶಂಕರ್‌ಸಿಂಗ್ ಹಳೆಮನಿ ಹೇಳಿದರು.ಇಲ್ಲಿನ ಈಶ್ವರ ದೇವಸ್ಥಾನದ ಬಳಿ ನಡೆದ ರಜಪೂತ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಇತಿಹಾಸವನ್ನೂ ನಾವೆಲ್ಲರೂ ಮರೆಯಬಾರದು. ದೇಶಕ್ಕಾಗಿ ನಮ್ಮ ಸಮಾಜ ಜೀವವನ್ನೇ ತ್ಯಾಗ ಮಾಡಿದೆ. ರಜಪೂತರು ದೇಶವನ್ನು ಕಾಯ್ದಿದ್ದಾರೆ. ಆದರೆ, ಈಗ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವೆಲ್ಲರೂ ಸಂಘಟಿತರಾಗಿ ನಮ್ಮ ಸಮಾಜವನ್ನು ಶೈಕ್ಷಣಿಕವಾಗಿ ಬೆಳೆಸಿ ಆರ್ಥಿಕವಾಗಿ ಸದೃಢವಾಗಬೇಕಾಗಿದೆ ಎಂದರು.ಕೆಲವೇ ಕೆಲವು ಭಾಗದಲ್ಲಿ ನಮ್ಮ ಸಮಾಜದವರು ಶ್ರೀಮಂತರಿದ್ದಾರೆ. ಉಳಿದಂತೆ ಮಧ್ಯ ವರ್ಗದಲ್ಲಿಯೇ ಹೆಚ್ಚು ನಮ್ಮ ಸಮಾಜ ಉಳಿದಿದೆ. ನಾವೆಲ್ಲರೂ ಸೇರಿ ಸರ್ಕಾರದ ಸೌಲಭ್ಯವನ್ನು ಬಳಕೆ ಮಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಶೈಕ್ಷಣಿಕವಾಗಿ ಬೆಳೆಸೋಣ. ಜೊತೆಗೆ ಉಳಿದ ಸಮಾಜದೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸುವುದನ್ನು ಕಲಿಸೋಣ ಎಂದರು.
ಕಾರಟಗಿ ಭಾಗದಲ್ಲಿ ನಮ್ಮ ರಜಪೂತ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ. ಸಮಾಜಕ್ಕಾಗಿ ಒಂದು ಸಭಾಭವನವನ್ನು ನಿರ್ಮಿಸುವ ಯೋಜನೆ ಇದ್ದು, ಸರ್ಕಾರದ ಅನುದಾನ ಮತ್ತು ಇತರ ಮೂಲಗಳ ಸಹಕಾರದಿಂದ ಈ ಕೆಲಸವನ್ನೂ ಪೂರ್ಣಗೊಳಿಸಲು ಎಲ್ಲರೂ ಕೈಜೋಡಿಸೋಣ ಎಂದರು.ಹಿಂದಿನ ಅಧ್ಯಕ್ಷ ರವಿಸಿಂಗ್ ಮಾತನಾಡಿದರು. ಜೂ. ೮ರಂದು ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿ ಆಚರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಜೆ. ಶಂಕರ್‌ಸಿಂಗ್, ಭವನಿಸಿಂಗ್ ದೇವರಮನಿ, ಯಮನೂರ್‌ಸಿಂಗ್ ಗೂಡಿನಾಳ್, ಎನ್. ಶಂಕರ್‌ಸಿಂಗ್, ವಸಂತಸಿಂಗ್ ರಾಮನಗರ, ಬಾಬುಸಿಂಗ್ ಕವಿತಾಳ್, ಪರುಶುರಾಮ್‌ಸಿಂಗ್ ಹುನುಗುಂದ, ಶಿವರಾಜಸಿಂಗ್, ಸತ್ಯನಾರಾಯಣ ಸಿಂಗ್, ತುಳಜರಾಮಸಿಂಗ್ ಆನೆಗುಂದಿ, ಭೀಮಸಿಂಗ್ ನೆಟ್ಟೆಕಲ್, ದುರ್ಗಾಸಿಂಗ್, ಅನಿಲ್‌ಸಿಂಗ್, ಕಾರ್ತಿಕಸಿಂಗ್, ವೆಂಕಟಸಿಂಗ್, ಟೀಕರಾಮ್‌ಸಿಂಗ್ ಮರರ್ಲಾನಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.
ಪದಾಧಿಕಾರಿಗಳು: ಎಚ್. ಚಾಂದಸಿಂಗ್ ರಜಪೂತ್ (ಗೌರಾವಾಧ್ಯಕ್ಷ) ಟಿ. ಶಂಕರಸಿಂಗ್ ಹಳೆಮನಿ(ಅಧ್ಯಕ್ಷ), ಯಮನಸಿಂಗ್ ಮತ್ತು ಲಕ್ಷ್ಮಣಸಿಂಗ್ ಕನಕಗಿರಿ (ಉಪಾಧ್ಯಕ್ಷರು) ವೆಂಕಟಸಿಂಗ್ ಎಲಿಗಾರ (ಪ್ರ.ಕಾರ್ಯದರ್ಶಿ) ಎಂ.ಶ್ಯಾಮ್‌ಸಿಂಗ್(ಸಹ ಕಾರ್ಯದರ್ಶಿ), ರಾಮಸಿಂಗ್ ಗೋಡಿನಾಳ (ಖಜಾಂಚಿ), ಜಿ. ತುಳಜಾರಾಮ್‌ಸಿಂಗ್ (ಸಂ ಕಾರ್ಯದರ್ಶಿ) ಹನುಮನಸಿಂಗ್ ಕೋಟೆ, ರೂಪಸಿಂಗ್ ಹುನಗುಂದ, ಅಲಬ್‌ಸಿಂಗ್ ಯರಡೋಣಾ, ಬಾಲಾಜಿಸಿಂಗ್ ಎಳ್ಳಾರ್ಥಿ(ಗೌ.ಸಲಹೆಗಾರರು) ಆಯ್ಕೆಯಾದರು.