ಸಾರಾಂಶ
ನಾನು ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಏನು ಮಾಡದ ದಡ್ಡನಗೌಡ ಇನ್ನೇನೋ ಬೋಗಳುತ್ತಾನೆ. ಆತ ಇನ್ನು ಮುಂದೆ ಬೋಗಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಂಠಿ ವೃತ್ತದಲ್ಲಿ ತನ್ನಲ್ಲಿರುವ ದಾಖಲೆ ತೆಗೆದುಕೊಂಡು ಬರಲಿ. ನಾನು ಅಭಿವೃದ್ಧಿ ಮಾಡಿದ ಕಾಮಗಾರಿಗಳ ದಾಖಲೆ ತೆಗೆದುಕೊಂಡು ಬಂದು ತೋರಿಸುವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ನಾನು ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಏನು ಮಾಡದ ದಡ್ಡನಗೌಡ ಇನ್ನೇನೋ ಬೋಗಳುತ್ತಾನೆ. ಆತ ಇನ್ನು ಮುಂದೆ ಬೋಗಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಂಠಿ ವೃತ್ತದಲ್ಲಿ ತನ್ನಲ್ಲಿರುವ ದಾಖಲೆ ತೆಗೆದುಕೊಂಡು ಬರಲಿ. ನಾನು ಅಭಿವೃದ್ಧಿ ಮಾಡಿದ ಕಾಮಗಾರಿಗಳ ದಾಖಲೆ ತೆಗೆದುಕೊಂಡು ಬಂದು ತೋರಿಸುವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಜನ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಅಂಥವರಿಗೆ ನಾನು ಉತ್ತರ ಕೊಡುವುದಿಲ್ಲ. ಇನ್ನು ಮಾಜಿ ಶಾಸಕ ದೊಡ್ಡನಗೌಡ ಮಾಡಿದ ಆರೋಪಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಆಯ್ಕೆಯಾಗಿ 15 ತಿಂಗಳಲ್ಲಿ ನೂರಾರು ಕೋಟಿ ರುಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ನಮ್ಮ ಮತಕ್ಷೇತ್ರಕ್ಕೆ ವಿಶೇಷ ಅನುದಾನದಲ್ಲಿ ₹25 ಕೋಟಿ ಮಂಜೂರು ಮಾಡಿದ್ದಾರೆ. ಅದರಲ್ಲಿ ₹12 ಕೋಟಿಗಳಲ್ಲಿ ಇಳಕಲ್ಲ ನಗರದ ರಸ್ತೆ ಅಭಿವೃದ್ಧಿ ಮಾಡುತ್ತಿದ್ದೇನೆ. ಅಲ್ಲದೆ ಇಳಕಲ್ಲ ಹಾಗೂ ಹುನಗುಂದ ತಾಲೂಕಿನ ಎಲ್ಲ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಹಿಂದಿನವರ ಅವಧಿಯಲ್ಲಿ ಗ್ರಾಮೀಣ ರಸ್ತೆ ಸುಧಾರಣೆ ಮಾಡಿಲ್ಲ. ಆ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು. ಅಲ್ಲದೇ ಗಣಿ ಇಲಾಖೆಯ ₹13 ಕೋಟಿ ಅನುದಾನದಲ್ಲಿ ಸರ್ಕಾರದ ಎಲ್ಲ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಇನ್ನು ಉಳಿದ ಹಣದಲ್ಲಿ ಗಣಿ ಉದ್ದಿಮೆ ಇರುವ ಗ್ರಾಮೀಣ ರಸ್ತೆ ಸುಧಾರಣೆ ಮಾಡಲಾಗುವುದು. ಇನ್ನು ಇಳಕಲ್ಲ ನಗರಕ್ಕೆ ಸರಕಾರದ ಸುಸಜ್ಜಿತ ಒಂದು ಕ್ರೀಡಾಂಗಣ, ಈಜುಗೋಳ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಅಲ್ಲದೇ ಅವಳಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಕುಡಿವ ನೀರು ಹಾಗೂ ನೀರಾವರಿ ಯೋಜನೆ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಉಪಾಧ್ಯೆಕ್ಷೆ ಕಾಳಮ್ಮ ಜಕ್ಕಾ, ಹಿರಿಯರಾದ ವೆಂಕಟೇಶ ಸಾಕಾ, ಅಬ್ದುಲ್‌ರಜಾಕ ತಟಗಾರ, ಸುರೇಶ ಜಂಗ್ಲಿ, ಮಹಾಂತೇಶ ಅವಾರಿ, ಮಹಾಂತೇಶ ಗದ್ದನಕೇರಿ, ಮಾಯವ್ವ ಗಾಜಿ ಇತರರು ಇದ್ದರು.
--ಬಾಕ್ಸ್
ಸಿಎಂ ಜೊತೆ 136 ಜನ ಇದ್ದೇವೆಇಂದು ರಾಜ್ಯದಲ್ಲಿ ಸುಳ್ಳು ಆರೋಪ ಮಾಡುವ ಬಿಜೆಪಿಯವರ ಹೇಳಿಕೆಗಳು ಸುಳ್ಳು ಆರೋಪಗಳು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮೇಲೆ ಮಾಡುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಅವರ ಏಳ್ಗೆ ಸಹಿಸದ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ನಾಯಕರ ಜೊತೆ ರಾಜ್ಯದ 136 ಜನ ಶಾಸಕರು ಇದ್ದೇವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.