ಮೂರು ವರ್ಷ ಮನೆಹಾಳು ಕೆಲಸ‌ಮಾಡಿ ರಾಜ್ಯ ಸರ್ಕಾರ ಸಾಧನಾ ಸಮಾವೇಶ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಾಲ್ಮೀಕಿ ಅಭಿವೃದ್ಧಿ ನಿಗಮ, ಕಾರ್ಮಿಕ ಇಲಾಖೆ ದುಡ್ಡು ತಿಂದಿದ್ದು, ಎಸ್ ಸಿಪಿ ಎಸ್ ಟಿಪಿ ಅನುದಾನ ದುರ್ಬಳಕೆ ಮಾಡಿ ಶಾಲಾ ಮಕ್ಕಳ ಮನಸ್ಸಿನಲ್ಲಿ ಮತೀಯ ವಿಷ ಬೀಜ ಬಿತ್ತುವುದು ಕಾಂಗ್ರೆಸ್ ಸರ್ಕಾರದ ಸಾಧನೆಯೇ? ಎಂದು ವಿಧಾನಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಮೂರು ವರ್ಷ ಮನೆಹಾಳು ಕೆಲಸ‌ಮಾಡಿ ರಾಜ್ಯ ಸರ್ಕಾರ ಸಾಧನಾ ಸಮಾವೇಶ ಮಾಡಲು ಮುಂದಾಗಿದೆ. ಸಮಾವೇಶ ಮಾಡುವ ಮೊದಲು ತಾವು ಏನು ಸಾಧನೆ ಮಾಡಿದ್ದೇವೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಕೊರೆಸಲು ಹಣ ನೀಡಿಲ್ಲ. ಗೃಹ ಲಕ್ಷ್ಮಿ ಹಣ 10 ತಿಂಗಳು ನೀಡಿ ಎರಡು ತಿಂಗಳ ಹಣ ನುಂಗಿದ್ದಾರೆ. ಈ ಬಗ್ಗೆ ವಿಧಾನ ಸೌಧದಲ್ಲೇ ಪ್ರಶ್ನೆ ಮಾಡಿದರೂ ಉತ್ತರ ನೀಡಿಲ್ಲ. ಈ ಸರ್ಕಾರ ಮಾಡಿರುವುದು ಲೂಟಿ ಹಾಗೂ ಅಧಿಕಾರ ದುರ್ಬಳಕೆ. ಇದಾವುದೂ ಸಾಧನೆಯಾಗಲು ಸಾಧ್ಯವಿಲ್ಲ ಎಂದರು.


ಬಡವರಿಗೆ ಎಷ್ಟು ಗೃಹ ಭಾಗ್ಯ ನೀಡಿದ್ದೇವೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಎಷ್ಟು ಮನೆ ನೀಡಿದ್ದೇವೆ. ರಾಜ್ಯದಲ್ಲಿ ಯಾವ ನೀರಾವರಿ ಯೋಜನೆ ಪೂರ್ಣಗೊಳಿಸಿದ್ದೇವೆ. ಉದ್ಯೋಗ ಸೃಷ್ಟಿ ಮಾಡುವ ಯಾವ ಯೋಜನೆ ಮಾಡಿದ್ದೇವೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಿಯಾಂಕ್ ಖರ್ಗೆಗೆ ಗುಣಪಡಿಸದ ಕಾಯಿಲೆ:

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್ ಎಸ್ ಎಸ್ ಟೀಕಿಸುವ ಗುಣಪಡಿಸಲಾಗದ ರೋಗವಿದೆ. ಈ ರೋಗವನ್ನು ನಿರ್ಲಕ್ಷ ಮಾಡುವುದೇ ಸೂಕ್ತ. ಈ ರೋಗಕ್ಕೆ ಪ್ರತಿಕ್ರಿಯಿಸಿದಷ್ಟು ಅದು ಕೆರಳುತ್ತದೆ. ಆದರ ಬದಲು ನಿರ್ಲಕ್ಷ್ಯ ಮಾಡಿದರೆ ರೋಗ ಶಮನವಾಗುತ್ತದೆ ಎಂದು ಲೇವಡಿ ಮಾಡಿದರು‌.

ಫೋಟೊ ಸಿ.ಟಿ.ರವಿ ಫೋಟೋ ಬಳಸಿ