ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮಹಿಳೆಯರ ಸಬಲೀಕರಣ ಹಾಗೂ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ಜಾರಿಗೆ ತಂದಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ಪುರಸಭೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಶೇ.50 ರಷ್ಟು ಮತ್ತು ಶೇ.33 ರಷ್ಟು ಕಾಯ್ದಿರಿಸಲಾಗಿದೆ. ಈ ಬಗ್ಗೆ ಮಹಿಳೆಯರು ಪಾಲ್ಗೊಂಡು ಸಬಲೀಕರಣಗೊಳ್ಳಬೇಕು ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಭಾಗವಹಿಸಿ ಮುಂದೆ ಬರುತ್ತಿದ್ದು, ಪ್ರತಿಯೊಬ್ಬ ಮಹಿಳೆಯರಲ್ಲಿಯೂ ಕೂಡ ಒಂದಿಲ್ಲೊಂದು ಪ್ರತಿಭೆ ಇದ್ದೆ ಇರುತ್ತದೆ. ಇವರುಗಳನ್ನು ತಿಳಿದು ಆ ಮಹಿಳೆ ಸಮಾಜದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಹಾಗೂ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಅಂತಾ ತಿಳಿಸಿದರು.ನ್ಯಾಯವಾದಿ ಸೀಮಾ ಮಾಲದಾರ, ಲಕ್ಷ್ಮೀ ಭಾಂವಿಹಾಳ ಉಪನ್ಯಾಸ ನೀಡಿ, ಕಾನೂನಿನಲ್ಲಿ ಮಹಿಳೆಯರಿಗೆ ಇರುವ ವಿಶೇಷ ಅಧಿಕಾರಗಳ ಬಗ್ಗೆ ಹಾಗೂ ಭ್ರೂಣ ಹತ್ಯೆಗಳ ಬಗ್ಗೆ ಇರುವ ಕಾನೂನುಗಳ ಬಗ್ಗೆ ಮತ್ತು ಮಹಿಳಾ ದಿನಾಚರಣೆ ಆಚರಣೆಗೆ ಬಂದಿರುವ ಬಗ್ಗೆ ಐತಿಹಾಸಿಕ ಹಿನ್ನೆಲೆಗಳನ್ನು ತಿಳಿಸಿದರು.
ಪುರಸಭೆಯ ಸದಸ್ಯೆ ವಾಣಿಶ್ರೀ ಪತ್ತಾರ ಮಾತನಾಡಿ, ಈ ಸಮಾಜದಲ್ಲಿ ಮಹಿಳೆಯರು ಒಗ್ಗಟ್ಟಾಗಿ ಸರ್ಕಾರದ ಯೋಜನೆಗಳನ್ನು ಪಡೆಯಬೇಕು ಹಾಗೂ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಪಡೆದುಕೊಳ್ಳಲು ಒಗ್ಗಟ್ಟಾಗಿ ಶ್ರಮಿಸಬೇಕು ಮತ್ತು ನದಿ ಮತ್ತು ದೇವಾಲಯಗಳಿಗೆ ಹೋಲಿಸಿ ಹೆಚ್ಚಿನ ಹೆಸರುಗಳು ಮಹಿಳೆಯರ ಶಾಂತ ಸ್ವಭಾವ ಮತ್ತು ಉಗ್ರ ಸ್ವಭಾವಗಳ ಬಗ್ಗೆ ತಿಳಿಸಿದರು.ಮುಖ್ಯಾಧಿಕಾರಿ ವಿರೇಶ ಹಸಬಿ ಮಾತನಾಡಿ, ಸ್ವಚ್ಛತೆ ಹಾಗೂ ನೀರಿನ ಮಿತವ್ಯಯ ಬಳಕೆ ಬಗ್ಗೆ ಮತ್ತು ಮಹಿಳಾ ಸ್ವಸಹಾಯಗಳ ಬಗ್ಗೆ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಪ್ರಭಾವತಿ ಫಕೀರಪೂರ, ಮಹಿಳಾ ಪೌರಕಾರ್ಮಿಕರಾದ ಸುವರ್ಣಾ ನಾಗಪ್ಪ ಗುಂಡ್ಲೂರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಪುರಸಭೆಯ ಸದಸ್ಯೆ ಶಶಿಕಲಾ ಹೊಸಮನಿ, ಅಮಿರಬಿ ಬಾಗವಾನ, ಹೇಮಲತಾ ಹಿರೇಮಠ, ಪ್ರೇಮಾ ಇಂಚಲ, ಶ್ರೀದೇವಿ ದೇವಲಾಪೂರ, ಅಂಜನಾ ಬೊಂಗಾಳೆ, ದಿಲಶಾದ್ ನದಾಫ, ಜಗದೀಶ ಜಂಬಗಿ, ಶಿವಾನಂದ ಕೋಲಕಾರ, ಶಶಿಕಲಾ ಕಲ್ಲೋಳ್ಳಿ, ವಿಜಯ ಬೋಳಣ್ಣವರ, ಅಂಬಿಕಾ ಕೊಟಬಾಗಿ, ಸಿಬ್ಬಂದಿಯರಾದ ಆರ್.ಎಸ್.ಹಿಟ್ಟಣಗಿ, ಎಂ.ಐ.ಕುಟ್ರಿ, ಬಿ.ಐ.ಗುಡಿಮನಿ, ಸೋನಾಲಿ ಬುಬನಾಳೆ, ಗಿರೀಶ ಆವಳೆ, ಎಸ್.ಎನ್.ಪಾಟೀಲ ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರು ಮತ್ತು ಪುರಸಭೆಯ ಸಿಬ್ಬಂದಿ ವರ್ಗ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.