ಸಾರಾಂಶ
ಕಂಪ್ಲಿ: ತಾಲೂಕಿನಲ್ಲಿ ನಡೆಯುವ ಕಾಮಗಾರಿಗಳ ಗುತ್ತಿಗೆಗಳನ್ನು ಹೆಚ್ಚಾಗಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಲು ಶಾಸಕರು ಮುಂದಾಗಬೇಕು ಎಂದು ಕಂಪ್ಲಿ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗಭೂಷಣಂ ತಿಳಿಸಿದರು.
ಪಟ್ಟಣದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಂಪ್ಲಿ ತಾಲೂಕು ಗುತ್ತಿಗೆದಾರರ ಸಂಘದ ನೂತನ ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರುಯಾವುದೇ ಕಾಮಗಾರಿಗಳಿಗೆ ಆಗಲಿ ಸರ್ಕಾರ ಮೊದಲು ಅನುದಾನವನ್ನು ಮೀಸಲಿರಿಸಿ ಬಳಿಕ ಟೆಂಡರ್ ಕರೆಯಬೇಕು. ಅನೇಕ ಕಾಮಗಾರಿಗಳು ಪೂರ್ಣಗೊಂಡು ತಿಂಗಳು, ವರ್ಷ ಕಳೆದರೂ ಕೆಲ ಬಾರಿ ಬಿಲ್ ಪಾವತಿಯಾಗದೆ ಗುತ್ತಿಗೆದಾರರಿಗೆ ಸಮಸ್ಯೆಗಳಾಗುತ್ತವೆ. ಗುತ್ತಿಗೆದಾರರಿಂದ ಹಿಡಿದು ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಯಾವುದೇ ಕಾಮಗಾರಿಗಳಾಗಲಿ ಪೂರ್ಣಗೊಂಡ ಕೂಡಲೇ ನಿಗದಿತ ಅವಧಿಯಲ್ಲಿ ಬಿಲ್ ಪಾವತಿಸಬೇಕು. ತಾಲೂಕಿನಲ್ಲಿ ತುಂಡು ಗುತ್ತಿಗೆಗಳನ್ನು ಕರೆಯುವ ಮೂಲಕ ಶೇ. 70ಕ್ಕೂ ಅಧಿಕ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಗುತ್ತಿಗೆದಾರರ ಸಂಘ ಆರಂಭವಾಗಿರುವುದು ಗುತ್ತಿಗೆದಾರರಲ್ಲಿನ ಒಗ್ಗಟ್ಟನ್ನೂ ತೋರಿಸಿಕೊಡುತ್ತಿದೆ. ಸಂಘದ ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸಂಘದ ಪದಾಧಿಕಾರಿಗಳು ಮಾಡಬೇಕು. ಅಲ್ಲದೇ ತಾಲೂಕಿನ ಎಲ್ಲೆಡೆ ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಜನತೆಗೆ ಅನುಕೂಲತೆ ಕಲ್ಪಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮವನ್ನು ಶಾಸಕ ಜೆ.ಎನ್. ಗಣೇಶ್ ಉದ್ಘಾಟಿಸಿದರು. ಪುರಸಭೆ ಮುಖ್ಯ ಅಧಿಕಾರಿ ಕೆ. ದುರುಗಣ್ಣ, ಪುರಸಭೆ ಸದಸ್ಯರಾದ ಭಟ್ ಪ್ರಸಾದ್, ಎಸ್.ಎಂ. ನಾಗರಾಜ, ಟಿ.ವಿ. ಸುದರ್ಶನ್ ರೆಡ್ಡಿ, ಮುಖಂಡರಾದ ಷಣ್ಮುಖಪ್ಪ, ಕಂಪ್ಲಿ ತಾಲೂಕು ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನರೆಡ್ಡಿ, ಉಪಾಧ್ಯಕ್ಷರಾದ ರಮೇಶ್ ದೇವಲಾಪುರ, ಭಾಸ್ಕರ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎನ್. ತಿಪ್ಪಯ್ಯ, ಪ್ರಮುಖರಾದ ಪಿ. ಬ್ರಹ್ಮಯ್ಯ, ಬಾಲೆ ಸಾಬ್ ಎಮ್ಮಿಗನೂರು, ರಾಮಾಂಜನೇಯಲು ಸುಗ್ಗೇನಹಳ್ಳಿ, ಬಿ. ಮಹೇಶ್ ಮೆಟ್ರಿ, ಕೆ. ವೆಂಕಟೇಶ್, ತಿಮ್ಮಾರೆಡ್ಡಿ ಸುಗ್ಗೆನಹಳ್ಳಿ, ಜಿ. ಸುಧಾಕರ, ಟಿ. ವೀರಭದ್ರುಡು, ಆರ್.ಬಿ. ಗಿರೀಶ, ಕೆ. ರಾಜೇಶ, ಶಿವರಾಜಗೌಡ, ಯು. ರಮೇಶ್, ಎಲ್. ರಾಜೇಶ, ಲೋಕರಾಜ್, ಶಶಿಕುಮಾರ್, ಭಾಸ್ಕರ್, ಕೆ. ಬಸವಪ್ರಭು, ಚಂದ್ರಶೇಖರ ಎಮ್ಮಿಗನೂರು ಸೇರಿ ಅನೇಕರಿದ್ದರು.