ನಾನು ಸೈನಿಕನಿದ್ದಾಗಲೂ ದೇಶ ಸೇವೆ ಮಾಡುವ ಸೌಭಾಗ್ಯ ಸಿಕ್ಕಿತ್ತು, ಈಗ ಹರ್ ಘರ್ ತಿರಂಗಾ ಯಾತ್ರೆಯ ಸಂಚಾಲಕನನ್ನಾಗಿ ಮಾಡಿ ಮತ್ತೆ ದೇಶ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ

ಕುಕನೂರು: ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಸೈನಿಕರ ಹಾಗೂ ರೈತರ ಸ್ಮಾರಕದ ಸ್ವಚ್ಛತಾ ಕಾರ್ಯ ಜರುಗಿತು.

ನಂತರ ಸ್ಮಾರಕಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸವಿ ನೆನಪಿಗಾಗಿ ಒಂದು ಆಲದ ಮರ ಸಹ ನೆಡಲಾಯಿತು. ಬನ್ನಿಕೊಪ್ಪ ಗ್ರಾಪಂಯ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಬನ್ನಿಕೊಪ್ಪ ಗ್ರಾಮದ ಮಾಜಿ ಯೋಧರ ಮನೆಗಳಿಗೆ ಭೇಟಿ ನೀಡಿ ಅವರ ಸೇವೆ ಸ್ಮರಿಸಿ ಗೌರವಿಸಲಾಯಿತು. ಆರ್ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಗೌರಾ ಮಾತನಾಡಿ, ಭಾರತಮಾತೆಯ ಸುಪುತ್ರರಾದ ನಾವು ದೇಶ ಭಕ್ತಿ ಮೆರೆಯಲು ನಮ್ಮ ನಮ್ಮ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು, ನಿಸ್ವಾರ್ಥದಿಂದ ಸೇವೆ ಮಾಡುವ ಸೈನಿಕರ ಸೇವೆ ಸದಾ ಶ್ಲಾಘನೀಯ. ಅವರನ್ನು ಯಾವಾಗಲೂ ಗೌರವಿಸುತ್ತಿರಬೇಕು. ಗ್ರಾಮವನ್ನು ಸದಾ ಸ್ವಚ್ಛವಾಗಿಡುವ ಪೌರ ಕಾರ್ಮಿಕರನ್ನು ಪ್ರೀತಿ ಗೌರವಗಳಿಂದ ಕಾಣಬೇಕು ಎಂದರು.

ಹರ್ ಘರ್ ತಿರಂಗಾ ಯಲಬುರ್ಗಾ ಬಿಜೆಪಿ ಮಂಡಲ ಸಂಚಾಲಕ ಹಾಗೂ ಮಾಜಿ ಸೈನಿಕ ನಾಗರಾಜ ವೆಂಕಟಾಪುರ ಮಾತನಾಡಿ, ನಾನು ಸೈನಿಕನಿದ್ದಾಗಲೂ ದೇಶ ಸೇವೆ ಮಾಡುವ ಸೌಭಾಗ್ಯ ಸಿಕ್ಕಿತ್ತು, ಈಗ ಹರ್ ಘರ್ ತಿರಂಗಾ ಯಾತ್ರೆಯ ಸಂಚಾಲಕನನ್ನಾಗಿ ಮಾಡಿ ಮತ್ತೆ ದೇಶ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಶಿವಕುಮಾರ ನಾಗಲಾಪೂರಮಠ, ಸಿದ್ದಪ್ಪ ಮಾಳೆಕೊಪ್ಪ, ಹನುಮಂತಗೌಡ, ಈಶಪ್ಪ ಬ್ಯಾಳಿ, ಅಶೋಕ್ ಯಾರಾಶಿ, ವೀರಪ್ಪ ಗೊಂದಿ, ಮಂಜುನಾಥ್ ಬ್ಯಾಳಿ, ಭಾಸ್ಕರ್ ಬಾವಿಕಟ್ಟಿ, ಮಹಾಬಲೇಶ್ವರಪ್ಪ ಯಾರಾಶಿ, ಶರಣಪ್ಪ ಯಾರಾಶಿ, ವಿಜಯ ಕುಮಾರ, ಕಲ್ಲಪ್ಪ ಹಳ್ಳಿಕೇರಿ, ಶಿವಪ್ಪ ಚವಡಿ, ನಾಗರಾಜ ಹಳ್ಳಿಕೇರಿ, ಶರಣಪ್ಪ ಹೂಗಾರ್, ರಾಜು ರೇವಡಿಹಾಳ, ಸಿದ್ದು ಪ್ಯಾಟಿ, ಚನ್ನರಡ್ಡಿ ಯರಾಶಿ, ವಿರುಪನಗೌಡ ಸಿದ್ದಪ್ಪ ಜೀವಣ್ಣವರ, ರಮೇಶ ತಳವಾರ, ಗಿರೀಶ್ ಕಡೆಮನಿ, ಗೋಪಾಲ ಚಂಡಿ, ಸಲಬಪ್ಪ ಗೊಂದಿ, ಚನ್ನಪ್ಪ ಯಲಬುರ್ಗಿ, ವೀರಣ್ಣ ಗೊಂದಿ ಇತರರಿದ್ದರು.