ಯಕ್ಷಗಾನ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಲಿ: ಶಾಸಕ ಭೀಮಣ್ಣ ನಾಯ್ಕ

| Published : Nov 25 2024, 01:04 AM IST

ಯಕ್ಷಗಾನ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಲಿ: ಶಾಸಕ ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನ ಕಲೆ ಮೈಗೂಡಿಸಿಕೊಳ್ಳುವ ಕಲೆ ಉಳಿಸಿ ಬೆಳೆಸಿಕೊಳ್ಳಬೇಕು. ಯಕ್ಷಗಾನದ ಮೂಲಕ ಪುರಾಣ ತಿಳಿಸುವ ನಡೆಯುತ್ತಿದೆ. ಕಲೆಯನ್ನು ಅರಿತು ಮುನ್ನಡೆಸಬೇಕು.

ಶಿರಸಿ: ಯಕ್ಷಗಾನ ಶ್ರೀಮಂತ ಕಲೆ. ಅದನ್ನು ಉಳಿಸಿ ಬೆಳಸುವ ಕಾರ್ಯ ಸದಾ ನಡೆಯಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ತಾಲೂಕಿನ ಮುಂಡಿಗೇಸರದ ಗಣಪತಿ ದೇವಾಲಯದಲ್ಲಿ ಸಿದ್ದಾಪುರದ ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ವಾರ್ಷಿಕ ಅನಂತೋತ್ಸವ ೨೦೨೪ಕ್ಕೆ ಚಾಲನೆ ನೀಡಿ ಮಾತನಾಡಿದರು.ಯಕ್ಷಗಾನ ಕಲೆ ಮೈಗೂಡಿಸಿಕೊಳ್ಳುವ ಕಲೆ ಉಳಿಸಿ ಬೆಳೆಸಿಕೊಳ್ಳಬೇಕು. ಯಕ್ಷಗಾನದ ಮೂಲಕ ಪುರಾಣ ತಿಳಿಸುವ ನಡೆಯುತ್ತಿದೆ. ಕಲೆಯನ್ನು ಅರಿತು ಮುನ್ನಡೆಸಬೇಕು ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಯಕ್ಷಗಾನ ಕ್ಷೇತ್ರ ಬೆಳೆದಿದೆ. ಬೆಳೆಯುತ್ತಿದೆ. ಕಲಾವಿದರು ಬಡತನ, ಪರಿಶ್ರಮದಿಂದ ಬೆಳೆಸಿದ್ದಾರೆ. ಯಕ್ಷಗಾನ ಅಕಾಡೆಮಿ ಮಾಡಿಸಬೇಕು. ಯಕ್ಷಗಾನ ಕಲೆಯ ಮಹತ್ವ ಅರಿತು ಜೀವಂತಿಕೆ ಇಟ್ಟುಕೊಳ್ಳಬೇಕು. ಮನರಂಜನೆ ಜತೆಗೆ ಸಂಸ್ಕಾರ ಕೊಡುವ, ಸಂಸ್ಕೃತಿ ಕೊಡುವ ಕಲೆ ಯಕ್ಷಗಾನ. ಕಲೆಯ ಉಳಿವಿಗೆ, ಬೆಳವಣಿಗೆಗೆ ಇರಬೇಕು ಎಂದರು.ಅನಂತ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಭಾಗವತ ಸತೀಶ ದಂಟ್ಕಲ್ ಮಾತನಾಡಿ, ಅನಂತ ಹೆಗಡೆ ಅವರ ಒಡನಾಡಿಗಳು ಸಾಕಷ್ಟು ಜನ ಇದ್ದರೂ ನನಗೆ ನೀಡಿದ್ದಾರೆ. ಅನಂತ ಹೆಗಡೆ ಅವರ ಒಡನಾಟ ಇಲ್ಲಿ ತನಕ ತಂದಿದೆ. ಕಲಾವಿದರು ಉಳಿಯಬೇಕು. ಕಲಾವಿದರಿಗಿಂತ ಕಲೆ ದೊಡ್ಡದು ಎಂದರು.ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಮಾತನಾಡಿ, ಜಾತಿಯನ್ನು ಪ್ರತಿಭೆ ಹತ್ತಿಕ್ಕಲು ಬಳಸಬಾರದು. ಪರಂಪರೆಯ ಜೀನ್ಸ್ ರಕ್ಷಣೆ ಮಾಡಬೇಕು ಎಂದರು.ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಯಕ್ಷ ರಂಗಾಯಣ ಶಿರಸಿಯಲ್ಲಿ ಆಗಬೇಕು. ಯಕ್ಷಗಾನಕ್ಕೆ ಒಂದು ದಿನ ಆಗಬೇಕಾಗಿದೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ. ಭಟ್ಟ ಸಿದ್ದಾಪುರ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ರತ್ನ ಆರ್.ಎಂ. ಹೆಗಡೆ ಬಾಳೇಸರ, ನಾಟ್ಯ ವಿನಾಯಕ ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ಸಾಮಾಜಿಕ ಕಾರ್ಯಕರ್ತರಾದ ದೀಪಕ್ ದೊಡ್ಡೂರು, ಎಸ್.ಕೆ. ಭಾಗವತ್ ಶಿರಸಿಮಕ್ಕಿ, ದೇವಸ್ಥಾನದ ಅಧ್ಯಕ್ಷ ರಾಜೀವ ಹೆಗಡೆ ಮುಂಡಗೇಸರ, ಸುಜಾತ ದಂಟ್ಕಲ್ ಮತ್ತಿತರರು ಇದ್ದರು. ಹರ್ಷಿತಾ ಹೆಗಡೆ, ಮೋಹನ ಶಿರಳಗಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಸ್ವಾಗತಿಸಿದರು. ಗಣಪತಿ ಗುಂಜಗೋಡ ನಿರೂಪಿಸಿದರು. ಹಿಮ್ಮೇಳ ವೈಭವದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ದಂಟ್ಕಲ್, ರವಿ ಮೂರೂರು ಗಾನ ವೈಭವ ನಡೆಸಿದರು. ಮದ್ದಲೆಯಲ್ಲಿ ಶಂಕರ ಭಾಗವತ್, ವಿಘ್ನೇಶ್ವರ ಗೌಡ ಚಂಡೆಯಲ್ಲಿ ಸಹಕಾರ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಪ್ರಾಯೋಜಿಸಿತ್ತು.