ದುಡಿಯುವ ಜನ ಸಂವಿಧಾನದ ರಕ್ಷಣೆಗೆ ನಿಲ್ಲಲಿ: ಯು. ಬಸವರಾಜ

| Published : Dec 16 2024, 12:46 AM IST

ಸಾರಾಂಶ

ದೇಶದ ಅಭಿವೃದ್ಧಿಗೆ ಲಕ್ಷಾಂತರ, ಕೋಟ್ಯಂತರ ರುಪಾಯಿ ಖರ್ಚು ಮಾಡಿದರೂ ಅಪೌಷ್ಟಿಕತೆ, ಹಸಿವಿನಿಂದ ಈ ದೇಶ ತಲೆತಗ್ಗಿಸುವಂತೆ ಆಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕಿತ್ತು.

ಶಿರಸಿ: ದುಡಿಯುವ ಜನ ಧಕ್ಕೆಗೆ ಒಳಗಾದ ಸಂವಿಧಾನದ ರಕ್ಷಣೆಗೆ ನಿಲ್ಲಬೇಕಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಯು. ಬಸವರಾಜ ತಿಳಿಸಿದರು.

ನಗರದ ರೈತ ಭವನದಲ್ಲಿ ಶನಿವಾರ ಹಮ್ಮಿಕೊಂಡ ೧೨ನೇ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜಾತ್ಯತೀಯ ಸ್ವರೂಪ ಉಳಿಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ ಇಷ್ಟು ವರ್ಷಗಳ ಬಳಿಕ ಸಂವಿಧಾನದ ಪ್ರಶ್ನೆ ಎದ್ದಿದೆ. ಇಡೀ ದೇಶದ ಗಮನ ಸೆಳೆಯಲು ಸಿಪಿಐಎಂ ಪಕ್ಷವು ಏಪ್ರಿಲ್‌ನಲ್ಲಿ ದೇಶ ಮಟ್ಟದ ಸಮಾವೇಶವನ್ನು ಮಧುರೈಯಲ್ಲಿ ಹಮ್ಮಿಕೊಂಡಿದೆ. ಇಲ್ಲಿ ಸಂವಿಧಾನದ ಉಳಿವಿನ ಪ್ರಶ್ನೆ ಎತ್ತಲಿದೆ. ಉತ್ತರ ಕನ್ನಡದ ಸೌಹಾರ್ದತೆ ಉಳಿಸಿ ಬೆಳೆಸಬೇಕಾಗಿದೆ. ದುಡಿಯುವ ಜನರ ರಕ್ಷಣೆ ಆಗಬೇಕು ಎಂದರು.

ಎರಡು ದಿನಕ್ಕೆ ಒಮ್ಮೆ ದಲಿತರ ಹತ್ಯೆ ಆಗುತ್ತಿದೆ. ಹದಿನೈದು ನಿಮಿಷಕ್ಕೆ ಮಹಿಳೆ ಮೇಲೆ ಅತ್ಯಾಚಾರ ಆಗುತ್ತಿದೆ. ದೇಶದ ಅಭಿವೃದ್ಧಿಗೆ ಲಕ್ಷಾಂತರ, ಕೋಟ್ಯಂತರ ರುಪಾಯಿ ಖರ್ಚು ಮಾಡಿದರೂ ಅಪೌಷ್ಟಿಕತೆ, ಹಸಿವಿನಿಂದ ಈ ದೇಶ ತಲೆತಗ್ಗಿಸುವಂತೆ ಆಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕಿತ್ತು ಎಂದರು.

ಮುಖ್ಯಸ್ಥೆ ಯಮುನಾ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಸಿಪಿಐಎಂನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಶಾಂತಾರಾಮ ನಾಯಕ, ತಿಲಕ ಗೌಡ, ಜಯಶ್ರೀ ಹಿರೇಕರ, ತಿಮ್ಮಪ್ಪ ಗೌಡ, ಶ್ಯಾಮನಾಥ ನಾಯ್ಕ, ಅಣ್ಣಪ್ಪ ಪೂಜಾರಿ, ಮುತ್ತೂ ಪೂಜಾರಿ, ನಾಗಪ್ಪ ನಾಯ್ಕ ಇತರರು ಇದ್ದರು. ಜಿಲ್ಲಾ ಸಮಿತಿಯ ಸಿ.ಆರ್. ಶಾನಭಾಗ ಕಾರ್ಯಕ್ರಮ ನಿರ್ವಹಿಸಿದರು.

ಅಂಜುಮನ್ ಕಾಲೇಜಿನಲ್ಲಿ ಬ್ರಿಡ್ಜ್‌ ಕೋರ್ಸ್‌ ಆರಂಭ

ಭಟ್ಕಳ: ಮಂಗಳೂರಿನ ಇನ್‌ ಯುನಿಟಿಯ ಸಹಯೋಗದಲ್ಲಿ ಅಂಜುಮನ್ ತಾಂತ್ರಿಕ ಕಾಲೇಜಿನಲ್ಲಿ ಮೊದಲ ವರ್ಷದ ಬ್ಯಾಚುಲರ್ ಆಫ್ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗಾಗಿ ಬ್ರಿಡ್ಜ್ ಕೋರ್ಸ್‌ ಆಯೋಜಿಸಲಾಗಿದೆ.ವಿದ್ಯಾರ್ಥಿಗಳನ್ನು ಅಗತ್ಯ ಎಂಜಿನಿಯರಿಂಗ್ ಉಪಕರಣಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದು, ಏಕಕಾಲದಲ್ಲಿ ಅವರ ಪರಸ್ಪರ ಕೌಶಲ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಕೋರ್ಸ್ ಆರಂಭಿಸಲಾಗಿದೆ. ಸಂವಾದಾತ್ಮಕ ಅವಧಿಗಳು ಮತ್ತು ಪ್ರಾಜೆಕ್ಟ್‌ಗಳ ಸರಣಿಯ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.ವಿವಿಧ ಎಂಜಿನಿಯರಿಂಗ್ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಸಾಮರ್ಥ್ಯದೊಂದಿಗೆ ಎಂಜಿನಿಯರಿಂಗ್ ಸವಾಲುಗಳನ್ನು ನಿಭಾಯಿಸಲು ಸಿದ್ಧರಾದರು. ಪ್ರಾಂಶುಪಾಲ ಡಾ. ಫಜಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಎಪ್ಲೈಡ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ವಸೀಮ್ ಅಹ್ಮದ್ ಹಲವೇಗಾರ್ ಉಪಸ್ಥಿತರಿದ್ದರು.