ಸಾರಾಂಶ
ಯುವಕರು ದೇಶದ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಬಲಪಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ರಾಣಿಬೆನ್ನೂರು: ಯುವಕರು ದೇಶದ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಬಲಪಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ರೋಟರಿ ಆಂಗ್ಲ ಮಾದ್ಯಮ ಶಾಲೆ, ಪಿಯುಸಿಯ ಕಾಲೇಜ್‌ನ ಪ್ರಸಕ್ತ ವರ್ಷದ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಸ್ಥೆ 50 ವರ್ಷ ಪೂರೈಸಿರುವುದು ಸುಲಭದ ದಾರಿಯಲ್ಲ. ಮಕ್ಕಳಿಗೆ ಬದ್ರ ಬುನಾದಿ ಹಾಕಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸಂಸ್ಥೆ ಕಟ್ಟುವಲ್ಲಿ ಅನೇಕ ಶ್ರಮವಿದೆ ಎಂದರು.
ಯುವಕರು ದೇಶದ ವರ್ತಮಾನ ತಿದ್ದುವ ಜೊತೆಗೆ ಮುಂದೆ ಯಾವ ರೀತಿ ಇರಬೇಕು ಎಂದು ಕಸನು ಕಾಣಬೇಕಿದೆ. ವಿಶೇಷವಾಗಿ ದೇಶ ಕಟ್ಟುವಲ್ಲಿ ಯುವಜನಾಂಗದ ಪಾತ್ರ ಅಪಾರವಾಗಿದೆ. ಯಾವುದೇ ಜಾತಿ, ಧರ್ಮವಿರಲಿ ಎಲ್ಲರೂ ಒಗ್ಗೂಡಿಸುವ ಕೆಲಸ ಯುವಕರು ಮಾಡಬೇಕಿದೆ. ದೇಶದ ಸಾಂಸ್ಕೃತಿಕ ಪರಂಪರೆಯನ್ನು ಭದ್ರಪಡಿಸಬೇಕು. ಮನುಷ್ಯನ ಜನ್ಮ ವಿಶೇಷವಾಗಿದ್ದು, ಒಳ್ಳೆಯ ಕೆಲಸ ಮಾಡುವ ಮೂಲಕ ಸಾರ್ಥಕ ಬದುಕು ಕಟ್ಟಬೇಕು ಎಂದರು.ಯಾವುದೇ ಕ್ಷೇತ್ರವಿರಲಿ ವಿಶೇಷ ಸಾಧನೆ ಮಾಡಿರುವ ಹಿಂದೆ ಅಪಾರ ಶ್ರಮವಿದೆ. ನಾವು ಯೋಚನೆ ಮಾಡುತ್ತೇವೆ. ಆ ರೀತಿ ಆಗುತ್ತೇವೆ. ಮನುಷ್ಯನಿಗೆ ಸಾಧನೆಯ ಗುರಿ ಇದ್ದರೆ ಮುಂದೆಬರಲು ಸಾಧ್ಯವಿದೆ. ಕೇವಲ ಗುರಿ ಇದ್ದರೆ ಸಾಲದು ಗುರಿ ತಲುಪಲು ಹೋರಾಟ ಮಾಡಬೇಕು. ಕಠಿಣ ಪರಿಶ್ರಮವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ, ರೋಟರಿ ಕ್ಲಬ್ ಅಧ್ಯಕ್ಷ ವಿರೇಶ ಮೋಟಗಿ, ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ, ಬಿ.ಜೆ. ಹಿರೇಮಠ, ಅರವಿಂದ ಜೈನ್, ಶಂಕರಗೌಡ ಮಾಳಗಿ, ಕುಮಾರ ಮುಷ್ಟಿ, ಎಂ.ಆರ್. ಪಾಟೀಲ, ಉಮೇಶ ಹೊನ್ನಾಳಿ, ಸಿ.ಎಸ್. ಕುರವತ್ತಿ, ವಿ.ಪಿ. ಲಿಂಗನಗೌಡ್ರ, ಪ್ರಾಚಾರ್ಯ ಕೆ.ಎನ್. ಆರಿಕಟ್ಟಿ ಸೇರಿದಂತೆ ಇತರರಿದ್ದರು.