ಯುವನಿಧಿ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ

| Published : Aug 09 2024, 12:34 AM IST

ಸಾರಾಂಶ

ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಪರಿಶೀಲನೆ ಸಭೆ ನಡೆಯಿತು. ಯುವನಿಧಿ ಯೋಜನೆಯ ಕುರಿತು ಇದು ಯುವಕರ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತಂದ ಯೋಜನೆ.ಇದಾಗಿದೆ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಪರಿಶೀಲನೆ ಸಭೆ ನಡೆಯಿತು. ಯುವನಿಧಿ ಯೋಜನೆಯ ಕುರಿತು ಇದು ಯುವಕರ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತಂದ ಯೋಜನೆ.ಇದಾಗಿದೆ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಹೇಳಿದರು.

ಕಚೇರಿ ಸಭಾಂಗಣದಲ್ಲಿ ಅರ್ಹ ಫಲಾನುಭವಿಗಳಿಗೆಲ್ಲರಿಗೂ ತಲುಪುವಂತಾಗಬೇಕೆಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರು ಹಾಗೂ ಪದವಿ/ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲರಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಿಗೆ 2023-24ನೇ ಸಾಲಿನಲ್ಲಿ ಪಾಸಾಗಿರುವ ಎಲ್ಲಾ ವಿದ್ಯಾರ್ಥಿಗಳ ಪಿ.ಡಿ.ಸಿ ದಾಖಲೆಗಳನ್ನು ನ್ಯಾಡಪೋರ್ಟಲ್‌ನಲ್ಲಿ ಅಪ್ಲೋಡ್‌ ಮಾಡಲು ಸೂಚಿಸಿದರು.

ಇನ್ನೂ ಕೆಲವು ವಿಶ್ವವಿದ್ಯಾಲಯಗಳಿಂದ ಅಂತಿಮ ವರ್ಷ/ಸೆಮಿಸ್ಟರ್‌ ಪರಿಕ್ಷೆ ಜಾರಿಯಲ್ಲಿದ್ದು ಇವರುಗಳ ಮೌಲ್ಯಮಾಪನವನ್ನು ಆದಷ್ಟು ಬೇಗನೆ ಮುಗಿಸಿ ಫಲಿತಾಂಶ ನೀಡಿ ಪೋರ್ಟಲ್‍ನಲ್ಲಿ ಪಿ.ಡಿ.ಸಿ ದಾಖಲೆಗಳನ್ನು ಅಪ್ಲೋಡ್‌ ಮಾಡಲು ಸೂಚಿಸಿದರು.

ಎಲ್ಲಾ ಡಿಪ್ಲೊಮಾ ಕಾಲೇಜುಗಳ ಅಂತಿಮ ಪ್ರೊವಿಸನಲ್ ಡಿಪ್ಲೊಮಾ ಸರ್ಟಿಫಿಕೆಟ್‍ಅನ್ನು ಡೈರೆಕ್ಟರ್ ಆಫ್‍ಟೆಕ್ನಿಕಲ್ ಎಜ್ಯುಕೇಷನ್ ಬೊರ್ಡ ಇವರಿಂದ ಪೋರ್ಟಲ್‍ನಲ್ಲಿ ಅಪ್ಲೋಡ್‌ ಮಾಡುವಂತೆ ನೋಡಿಕೊಳ್ಳಲು ಪ್ರಾಂಶುಪಾಲರ ಜವಾಬ್ದಾರಿಯಾಗಿದೆ ಎಂದರು.

ಪ್ರತಿಯೊಂದು ವಿಶ್ವವಿದ್ಯಾಲಯ ಹಾಗೂ ಪದವಿ/ಡಿಪ್ಲೊಮಾ ಕಾಲೇಜುಗಳಲ್ಲಿ ಯುವನಿಧಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಸೂಚಿಸಿದರು. ಈ ಯೋಜನೆ ಅಡಿಯಲ್ಲಿ ಮ್ಯಾನ್ಯೂವಲ್ ವೆರಿಫೀಕೇಶನ್‍ಗಾಗಿ ಪೆಂಡಿಂಗ್ ಇರುವ 8 ರಿಂದ 10ನೇ ತರಗತಿಯ ವರೆಗೆ ಡೋಮೇಶಿಯಲ್ ವೆರಿಫೀಕೇಶನ್ ಡಿ.ಡಿ.ಪಿ.ಐ, ಹಾಗೂ ಪಿ.ಯು.ಸಿ ವೆರಿಫೀಕೇಶನ್ ಡಿ.ಡಿ.ಪಿ.ಯು ಮತ್ತು ಐ.ಟಿ.ಐ, ಡಿಪ್ಲೊಮಾ, ಪದವಿ ದಾಖಲೆ ಪರಿಶೀಲನೆಯನ್ನು ಡಿ.ಇ.ಇ.ಒ ರವರು ದಾಖಲೆಗಳ ಪರಿಶೀಲನೆಯನ್ನು ಆದಷ್ಟು ಬೇಗನೆ ಮಾಡಿ ಮುಗಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಿಗಿ, ಗುವಿವಿ ಕುಲಸಚಿವೆ ಮೇಧಾವಿ ಕಟ್ಟಿಮನಿ, ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಗಾದಗೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ರವೀಂದರನಾಥ ಬಾಳ್ಳಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಲೀಧರ ರತ್ನಗಿರಿ, ಶಾಲಾ ಶಿಕ್ಷಣಾ ಇಲಾಖೆ ಉಪ ನಿರ್ದೇಶಕ ಸೂರ್ಯಕಾಂತ ಮದನೇಕರ್ ಪದವಿ ಪೂರ್ವ ಶಿಕ್ಷಣ ಇಲಾಖೆ, ಅಧಿಕಾರಿಗಳು ಜಿಲ್ಲಾ ಉದ್ಯೋಗ ವಿನಿಮಯ ಪ್ರಭಾರಿ ಸಹಾಯಕ ನಿರ್ದೇಶಕ ಪ್ರಭಾಕರ,ಎಸ್.ಬಿ.ಕಾಲೇಜಿನ ಪದವಿ ಪೂರ್ವ ಪ್ರಾಂಶುಪಾಲರಾದ ದಯಾನಂದ ಹುಡೇಲ್, ಶಾಲಾ ಕಾಲೇಜಿನ ಮುಖ್ಯಸ್ಥರು ಇತರೆ ಶಾಲೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು.