ಸಾರಾಂಶ
ಯುವಜನರು ಹೆಚ್ಚಿನ ಸಮಯವನ್ನು ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೇ ಕಳೆದು ಅಮೂಲ್ಯ ಜೀವನ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಉಪವಿಬಾಗಾಧಿಕಾರಿ ಅಭಿಷೇಕ್ ಅಭಿಪ್ರಾಯಪಟ್ಟಿದ್ದಾರೆ.
ಹೊನ್ನಾಳಿ: ಯುವಜನರು ಹೆಚ್ಚಿನ ಸಮಯವನ್ನು ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೇ ಕಳೆದು ಅಮೂಲ್ಯ ಜೀವನ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಉಪವಿಬಾಗಾಧಿಕಾರಿ ಅಭಿಷೇಕ್ ಅಭಿಪ್ರಾಯಪಟ್ಟರು.
ತಾಲೂಕಿನ ವಿಯಜಯಪುರ (ಚಿಕ್ಕಬಾಸೂರು ತಾಂಡ)ದಲ್ಲಿ ಭಾನುವಾರ ಸಂಜೆ ಗ್ರಾಮದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರ ಒಕ್ಕೂಟದಿಂದ ಆಯೋಜಿಸಲಾಗಿದ್ದ ಪ್ರಗತಿಪರ ರೈತರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮುಖಂಡ ಹಾಲೇಶ್ ನಾಯ್ಕ, ಸರ್ಕಾರಿ ಸೇವೆಗಳಲ್ಲಿರುವ ಗ್ರಾಮದ ಯುವಕರು ತಂದೆ-ತಾಯಿ ಮತ್ತು ಕುಟುಂಬ ಅಭಿವೃದ್ದಿ ಕಡೆಗೆ ಗಮನಹರಿಸಬೇಕು. ಗ್ರಾಮದಲ್ಲಿ ಉತ್ತಮ ಕೆಲಸಗಳಿಗೆ ಸಹಕಾರ ನೀಡಬೇಕು ಎಂದರು.
ಜಿ. ಕೃಷ್ಣನಾಯ್ಕ ಮಾತನಾಡಿ, ಗ್ರಾಮದಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ.ಯಿಂದ ಪದವಿವರೆಗಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದರು. ಶಿಕ್ಷಕ ಎಲ್.ರವಿನಾಯ್ಕ, ಮಾತನಾಡಿದರು. ಗ್ರಾಮದಲ್ಲಿ 20 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಗತಿಪರ ರೈತರನ್ನು ಗೌರವಿಸಲಾಯಿತು.ವೈದ್ಯರಾದ ರೇವ್ಯಾನಾಯ್ಕ, ಎಲ್.ಮಂಜುನಾಥ್, ಕೆ.ಕೃಷ್ಣನಾಯ್ಕ, ಸಿ.ಶಂಕ್ರಾನಾಯ್ಕ, ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ಶಿವರಾಂ, ಅಭಿಜಿತ್, ಶಿಕ್ಷಕರಾದ ಎಚ್.ಶಂಕರ ನಾಯ್ಕ, ಡಿ.ನೀಲೇಂದ್ರ ನಾಯ್ಕ, ವಿ.ಸಂತೋಷ್, ಯಶೋದಾ, ಲಕ್ಷ್ಮಣ ನಾಯ್ಕ, ರಾಮಾ ನಾಯ್ಕ, ಅರ್ಜನ ನಾಯ್ಕ, ಸೋಮಶೇಖರ, ಸುನೀಲ್ ರಾಜ್. ರೇವ್ಯಾ ನಾಯ್ಕ, ಆರೋಗ್ಯ ಇಲಾಖೆಯ ಪರಮೇಶ್ವರ ನಾಯ್ಕ, ಹನುಮಂತ ನಾಯ್ಕ ಹಾಲೇಶ್ ನಾಯ್ಕ, ಅರಣ್ಯ ಇಲಾಖೆಯ ವಿಕ್ರಂ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
- - --2ಎಚ್.ಎಲ್.ಐ1:
ಕಾರ್ಯಕ್ರಮದಲ್ಲಿ ಅಂಕವೀರ ವಿದ್ಯಾರ್ಥಿಗಳು, ಪ್ರಗತಿಪರ ರೈತರನ್ನು ಗೌರವಿಸಲಾಯಿತು.