ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ರೂಪಿಸಬೇಕೆಂದು ಆಶಯ ಹೊಂದಿದ್ದ ಸ್ವಾಮಿ ವಿವೇಕಾನಂದರ ಬಯಕೆ ಈಡೇರಿಸಲು ಇಂದಿನ ಯುವ ಜನಾಂಗ ತ್ರಿಕರ್ಣಪೂರ್ವಕವಾಗಿ ಶ್ರಮಿಸಬೇಕೆಂದು ಪಾವಗಡದ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಸ್ವಾಮಿಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ರೂಪಿಸಬೇಕೆಂದು ಆಶಯ ಹೊಂದಿದ್ದ ಸ್ವಾಮಿ ವಿವೇಕಾನಂದರ ಬಯಕೆ ಈಡೇರಿಸಲು ಇಂದಿನ ಯುವ ಜನಾಂಗ ತ್ರಿಕರ್ಣಪೂರ್ವಕವಾಗಿ ಶ್ರಮಿಸಬೇಕೆಂದು ಪಾವಗಡದ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಸ್ವಾಮಿಜಿ ಕರೆ ನೀಡಿದರು.

ಪಟ್ಟಣದಲ್ಲಿ ನಡೆದ ಹಿಂದೂ ಸಮಾಜೋತ್ಸವದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತರೆ ಧರ್ಮದಲ್ಲಿ ಕಂಡು ಬರುವಂತ ಶಿಸ್ತು, ಪ್ರಜ್ಞೆ ನಮ್ಮಲ್ಲಿ ಕಾಣದಿರುವುದು ವಿಷಾದಕರ. ಭಾರತೀಯ ಸನಾತನ ಹಿಂದೂ ಧರ್ಮವನ್ನು ಎಲ್ಲರೂ ಪ್ರೀತಿ , ವಿಶ್ವಾಸದಿಂದ ಕಂಡು ಉಳಿಸಿ ಬೆಳಸಬೇಕು. ಮನೆಗಳಲ್ಲಿ ತಮ್ಮ ಮಕ್ಕಳಿಗೆ ಮಹಾಭಾರತ ,ರಾಮಾಯಾಣ ಹಾಗೂ ಭಗವದ್ಗೀತೆ ಓದಿಸಿ ಮಕ್ಕಳಲ್ಲಿ ಹಿಂದೂ ಸಮಾಜದ ಬಗ್ಗೆ ಜಾಗೃತಿ ಮೂಡಿಸಬೇಕು. ಇಂತಹ ಸಮಾವೇಶಗಳು ಮೂರು ತಿಂಗಳಿಗೊಮ್ಮೆ ನಡೆದರೆ ಜನರಲ್ಲಿ ಧರ್ಮ ಜಾಗೃತಿ ಪಸರಿಸುತ್ತದೆ ಎಂದರು.

ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮಿಜಿ ಮಾತನಾಡಿ, ಹಲವು ಮಹಾತ್ಮರ ತ್ಯಾಗ ಬಲಿದಾನದಿಂದ ಹಿಂದೂ ಧರ್ಮ ಜೀವಂತವಾಗಿದೆ. ಪ್ರಸ್ತುತ ಧರ್ಮ ಉಳಿಸುವ ಕೆಲಸವನ್ನು ಆರ್‌ಎಸ್‌ಎಸ್ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ, ಧರ್ಮ ತಾಯಿ ಇದ್ದಂತೆ ಆ ತಾಯಿ ಬಗ್ಗೆ ಮಾತನಾಡಲು ಹೆದರಬಾರದು. ನಮ್ಮ ಧರ್ಮದ ಬಗ್ಗೆ ಅರಿವಿರಬೇಕು. ವಿಶ್ವದಲ್ಲಿ ಹಿಂದೂ ಸ್ಥಾನವನ್ನು ಕರ್ಮಭೂಮಿಯಾಗಿ ನೋಡುತ್ತಿದ್ದು, ಪ್ರತಿ ಜೀವಿಯಲ್ಲೂ ದೇವರನ್ನು ಕಾಣುವ ದರ್ಮ ನಮ್ಮದು ಇಂತಹ ಪುಣ್ಯಭೂಮಿಯ ಧರ್ಮವನ್ನು ಕಾಪಾಡಲು ಎಲ್ಲರೂ ಒಟ್ಟಾಗಬೇಕು ಎಂದರು.

ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ನಮ್ಮನ್ನು ಹಿಂದೂ ಧರ್ಮ ದೇಶದಲ್ಲಿ ಒಟ್ಟಾಗಿಸಿದ್ದು,ವಿಶ್ವದಲ್ಲೇ ಇಂದೂ ಸ್ಥಾನವು ದೇವರ ಗುಡಿಯಂತಿದೆ. ನಮ್ಮನ್ನು ಒಗ್ಗೂಡಿಸುವ ಧರ್ಮವೇ ಹಿಂದೂ ಧರ್ಮ ನಮ್ಮ ದೇಶದ ಪಂರಪರೆ,ಸಂಸ್ಕೃತಿ ಉಳಿಸಿ ನಮ್ಮ ಮುಂದಿನ ಮಕ್ಕಳಿಗೆ ಧರ್ಮ ಜಾಗೃತಿ ಮೂಡಿಸಬೇಕು ಎಂದರು.

ಪ್ರಧಾನ ಭಾಷಣಕಾರ ಸಂಸ್ಕೃತ ಭಾರತಿ ಸಂಸ್ಥೆಯ ದಿನೇಶ್ ಕಾಮತ್ ಮಾತನಾಡಿ, ಬಾಂಗ್ಲಾದಲ್ಲಿ ಶೇ.27 ರಿಂದ ಶೇ.7 ಹಾಗೂ ಪಾಕಿಸ್ಥಾನದಲ್ಲಿ ಶೇ.9 ರಿಂದ ಶೇ. 1ಕ್ಕೆ ಹಿಂದೂಗಳ ಸಂಖ್ಯೆ ಇಳಿದಿದೆ. ಇದು ರಾಮಕೃಷ್ಣ ಜನಿಸಿದ ಪುಣ್ಯಭೂಮಿ. ಜಾತಿಯಿಂದ ನೋಡದೆ ಧರ್ಮದಿಂದ ನೋಡಬೇಕು. ಹಿಂದುಗಳು ಅಲ್ಪಸಂಖ್ಯಾತರಾದರೆ ಅದು ನಮಗೆ ಕೇಡುಗಾಲವಾದೀತು. ಒಳ್ಳೆಯ ಗುಣಗಳೇ ಧರ್ಮದ ಮೂಲ ಮಂತ್ರವಾಗಿದ್ದು, ಅದು ಜನರನ್ನು ಸೇರಿಸುತ್ತದೆ. ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದ್‌ ಗೆ ಮರುಳಾಗದೆ ದೇಶದ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅರಿತು ಧರ್ಮ ಪಾಲನೆ ಮಾಡಬೇಕು ಎಂದರು.

ಅಧ್ಯಕ್ಷ ಡಾ.ಎಂಜಿ.ಶ್ರೀನಿವಾಮೂರ್ತಿ ಮಾತನಾಡಿ,ಜಗತ್ತಿಗೆ ಶಾಂತಿ ಸಾರುತ್ತಿರುವುದು ನಮ್ಮ ಹಿಂದೂಸ್ಥಾನ ದೇಶದ ಆದರ್ಶ ಸಮಾಜಗಳು ಹಿಂದೂ ಧರ್ಮದ ಭಾಗವಾಗಿದ್ದು ನಾವೆಲ್ಲ ಒಂದೇ ಎಂದರು.

ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ನಡೆದ ಅದ್ಧೂರಿ ಶೋಭಾಯಾತ್ರೆ ಜನರ ಗಮನ ಸೆಳೆಯಿತು.