ಸಾಲ ಪಡೆದ ರೈತರಿಂದ ಸಾಲ ಮರುಪಾವತಿಸಿ ಕೂಡಲೇ ರಿನೀವಲ್ ಮಾಡಿಸಿಕೊಡಬೇಕಾಗಿದ್ದ ಆಡಳಿತ ಮಂಡಳಿಗಳು ಅವರೇ ಸ್ವಯಂ ರಿನೀವಲ್ ಮಾಡಿಕೊಂಡು ಅಡ್ಡದಾರಿ ಹಿಡಿದಿರುವುದೇ ಡಿಸಿಸಿ ಬ್ಯಾಂಕ್‍ಗೆ ಮುಳುವಾಗಿದೆ.
ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿವ್ಯವಹಾರದಲ್ಲಿ ಹೀನಾಯಸ್ಥಿತಿಗೆ ತಲುಪಿರುವ ಡಿಸಿಸಿ ಬ್ಯಾಂಕ್‍ಗೆ ಶಕ್ತಿ ತುಂಬುವ ಕೆಲಸಕ್ಕೆ ಸಿಬ್ಬಂದಿ ಮುಂದಾಗಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣಕ್ಕೆ ಸಮೀಪದ ರಾ.ಹೆ.44ರಲ್ಲಿನ ಕೋಮಲ್‍ಗಾರ್ಡ್‍ನ್ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ಆಯೋಜಿಸಲಾಗಿದ್ದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರು ಮತ್ತು ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ವ್ಯವಹಾರ ಹೀನಾಯ ಸ್ಥಿತಿಗೆ ತಲುಪುವ ಮೂಲಕ ಸ್ಥಗಿತಗೊಂಡಿವೆ. ಸಾಲ ಪಡೆದ ರೈತರಿಂದ ಸಾಲ ಮರುಪಾವತಿಸಿ ಕೂಡಲೇ ರಿನೀವಲ್ ಮಾಡಿಸಿಕೊಡಬೇಕಾಗಿದ್ದ ಆಡಳಿತ ಮಂಡಳಿಗಳು ಅವರೇ ಸ್ವಯಂ ರಿನೀವಲ್ ಮಾಡಿಕೊಂಡು ಅಡ್ಡದಾರಿ ಹಿಡಿದಿರುವುದೇ ಡಿಸಿಸಿ ಬ್ಯಾಂಕ್‍ಗೆ ಮುಳುವಾಗಿದೆ ಎಂದರು.
ಕರ್ನಾಟಕ ರಾಜ್ಯ ಮಹಾಮಂಡಳಿ ನಿರ್ದೇಶಕ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಸಿಇಒ ಖಾನ್ ಪರ್ವೇಜ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮೇಗೌಡ, ಎಚ್.ಎಸ್.ಮೋಹನ್ ರೆಡ್ಡಿ, ಭಾಸ್ಕರ್ ರೆಡ್ಡಿ ಒಕ್ಕೂಟದ ನಿದೇರ್ಶಕರಾದ ಉತ್ತಿರೆಡ್ಡಿ, ಕೆ.ಪಿ.ಚೆನ್ನಬೈರೇಗೌಡ, ರವಣಮ್ಮ, ರಮಣಾರೆಡ್ಡಿ, ವೆಂಕಟರಮಣರೆಡ್ಡಿ, ಮಧುಸೂಧ£ರೆಡ್ಡಿ, ಪಿಎನ್.ವೇಣುಗೋಪಾಲ್, ಸಿ.ಶಿವಪ್ಪ, ನರಸಿಂಹಪ್ಪ ಇದ್ದರು.25ಬಿಜಿಪಿ-1: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದವತಿಯಿಂದ ಬಾಗೇಪಲ್ಲಿ ಪಟ್ಟಣದ ಹೊರವಲಯದ ಕೋಮಲ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ಎನ್.ಸುಬ್ಬಾರೆಡ್ಡಿ ಮಾತನಾಡಿದರು.