ಸಾರಾಂಶ
Let there be a chance to achieve beyond disability: Basappa
ಯಾದಗಿರಿ: ಅಂಗವೈಕಲ್ಯತೆ ಮೀರಿ ಸಾಧನೆ ಗೈಯುವ ಛಲ ಹೊಂದಬೇಕು ಎಂದು ಮುಖ್ಯಗುರು ಬಸಪ್ಪ ಹೇಳಿದರು.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರು ಆಸಕ್ತಿ ಇರುವ ವಿಷಯದಲ್ಲಿ ತೊಡಗಿಕೊಂಡು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.ಶಿಕ್ಷಕ ನಿರಂಜನ್ ಮಾತನಾಡಿ, ವಿಶೇಷ ಚೇತನರು ಪ್ರಸ್ತುತ ಜಗತ್ತಿನಲ್ಲಿ ತಮ್ಮದೇ ಸಾಧನೆಗಳಿಂದ ಹೆಸರಾಗಿದ್ದಾರೆ. ಅವರನ್ನು ಮಾದರಿಯಾಗಿಸಿಕೊಂಡು ವೈಕಲ್ಯತೆಯನ್ನು ಬದಿಗಿಟ್ಟು ಸಾಧಕರಾಗಬೇಕು ಎಂದು ತಿಳಿಸಿದರು. ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಕಲಿಕೆ ಪೂರಕವಾಗಿರುವ ಬ್ಯಾಗ್, ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರವಿಕುಮಾರ್, ಅನಂತಮ್ಮ, ಸೌಮ್ಯ, ಶರಣಮ್ಮ ಇದ್ದರು.-----
ಫೋಟೊ: ಯಾದಗಿರಿ ಸಮೀಪದ ಎಲ್ಹೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.6ವೈಡಿಆರ್14