ಬೆಳಗಾವಿ ಅಧಿವೇಶನದಲ್ಲಿ ಮಹದಾಯಿ ಚರ್ಚೆಯಾಗಲಿ

| Published : Dec 03 2023, 01:00 AM IST

ಸಾರಾಂಶ

ಬೆಳಗಾವಿಯಲ್ಲಿ ನಡೆಯವ ವಿಧಾನಸಭೆ ಅಧಿವೇಶನದಲ್ಲಿ ವಿಶೇಷವಾಗಿ ಮಹದಾಯಿ ಹಾಗೂ ಕಳಸಾ- ಬಂಡೂರಿ ಬಗ್ಗೆ 2 ದಿನ ಚರ್ಚೆ ಮಾಡಿ ಯೋಜನೆ ಜಾರಿಯಾಗುವ ರೀತಿ ಆಗಬೇಕೆಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಒತ್ತಾಯಿಸಿದರು.

ಮಾಜಿ ಸಚಿವ ಬಿ.ಆರ್‌. ಯಾವಗಲ್ಲ ಒತ್ತಾಯನರಗುಂದ:ಬೆಳಗಾವಿಯಲ್ಲಿ ನಡೆಯವ ವಿಧಾನಸಭೆ ಅಧಿವೇಶನದಲ್ಲಿ ವಿಶೇಷವಾಗಿ ಮಹದಾಯಿ ಹಾಗೂ ಕಳಸಾ- ಬಂಡೂರಿ ಬಗ್ಗೆ 2 ದಿನ ಚರ್ಚೆ ಮಾಡಿ ಯೋಜನೆ ಜಾರಿಯಾಗುವ ರೀತಿ ಆಗಬೇಕೆಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಬರಗಾಲ ಎದುರಿಸುತ್ತಿರುವ ಈ ನೆಲಕ್ಕೆ ಮಹದಾಯಿ ನೀರು ವರದಾನವಾಗಲಿದೆ. ಹಾಗಾಗಿ ಉಭಯ ಸದನದಲ್ಲಿ ಗಂಭೀರ ಚರ್ಚೆ ಮಾಡುವ ಮೂಲಕ ಮಹದಾಯಿ ನೀರು ಮಲಪ್ರಭೆಗೆ ಕರೆದು ತರುವ ಪ್ರಯತ್ನ ಆಗಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.

ಹಗುರ ಮಾತು ಸಲ್ಲದು: ನರಗುಂದ ಕ್ಷೇತ್ರದ ಬಿಜೆಪಿ ಶಾಸಕ ಸಿ.ಸಿ. ಪಾಟೀಲರು ಮಾಜಿ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಲ್ಲ. ಮೊದಲು ಸೌಜನ್ಯದಿಂದ ಮಾತನಾಬೇಕು ಎಂದು ಹೇಳಿದರು.

ಪಾಟೀಲರು ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಭಾರತದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ಸದ್ಯ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್‌ ಸರ್ಕಾರವಿದೆ, ಹಾಗಾಗಿ ನಾನು ತಾಲೂಕಿನ ಇಲಾಖೆಯ ಅಧಿಕಾರಿಗಳ ಜೊತೆ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ. ಕೆಲವು ಅಧಿಕಾರಿಗಳು ನನ್ನ ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವರು. ಇದನ್ನು ಕೇಳಲು ನೀವು ಯಾರು? ಎಂದು ಪ್ರಶ್ನೆ ಮಾಡಿದರು. ಪಟ್ಟಣದಲ್ಲಿರುವ ಎಂಜಿನಿಯರಿಂಗ್‌, ಜಿಟಿಸಿಟಿ ಕಾಲೇಜು ಮತ್ತು ಪುರಸಭೆ ಹೊಸ ಕಟ್ಟಡಗಳ ಕಾಮಗಾರಿ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಯಾವಗಲ್‌ ಸ್ಪಷ್ಟಪಡಿಸಿದರು.ಗುರುಪಾದಪ್ಪ ಕುರಹಟ್ಟಿ, ಯಲ್ಲಪ್ಪಗೌಡ ನಾಯ್ಕರ, ಪ್ರವೀಣ ಯಾವಗಲ್, ವಿವೇಕ ಯಾವಗಲ್, ರಾಜು ಕಲಾಲ, ದ್ಯಾಮಣ್ಣ ಸವದತ್ತಿ, ಕೃಷ್ಣಾ ಗೊಂಬಿ, ಶಿವನಗೌಡ ಹೆಬ್ಬಾಳ, ಆರ್.ಐ. ನದಾಫ್, ಈರಯ್ಯ ಮಠದ, ಜಗದೀಶ ಕಗದಾಳ, ಮಹಾಂತೇಶ ತಳವಾರ, ಡಿ.ಎಸ್. ನಾಗನೂರ, ಎಂ.ಬಿ. ಅರಹುಣಿಸಿ, ದ್ಯಾಮಣ್ಣ ಸವದತ್ತಿ, ಎಫ್.ವೈ. ದೊಡ್ಡಮನಿ ಸೇರಿದಂತೆ ಹಲವರು ಇದ್ದರು.