ದೇಶದಲ್ಲಿ ಐಕ್ಯತೆ, ಸಾಮರಸ್ಯತೆ ನೆಲೆಗೊಳ್ಳಲಿ

| Published : Aug 17 2024, 12:47 AM IST

ಸಾರಾಂಶ

ದೇಶದ ಐಕ್ಯತೆ, ಸಾಮರಸ್ಯತೆಗೆ ನಾವೆಲ್ಲರೂ ಪಣ ತೊಡಬೇಕಿದೆ. ಅಂದಾಗ ಸ್ವಾತಂತ್ರ್ಯೋತ್ಸವ ಆಚರಣೆಗೆ ಅರ್ಥ ಬರುತ್ತದೆ.

ರೋಣ: ದೇಶದಲ್ಲಿ ಐಕ್ಯತೆ, ಸಾಮರಸ್ಯತೆ ನೆಲೆಗೊಳ್ಳುವುದು ಅತೀ ಮುಖ್ಯ, ಈ ದಿಸೆಯಲ್ಲಿ ಹೆಚ್ಚಿನ ಜವಾಬ್ದಾರಿ ಯುವಕ, ಯುವತಿಯರ ಮೇಲಿದೆ ಎಂದು ಕೆಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ‌ ಹೇಳಿದರು.

ಅವರು ಗುರುವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಔಷದಿ ಮಹಾವಿದ್ಯಾಲಯ ಹಾಗೂ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇಶದ ಐಕ್ಯತೆ, ಸಾಮರಸ್ಯತೆಗೆ ನಾವೆಲ್ಲರೂ ಪಣ ತೊಡಬೇಕಿದೆ. ಅಂದಾಗ ಸ್ವಾತಂತ್ರ್ಯೋತ್ಸವ ಆಚರಣೆಗೆ ಅರ್ಥ ಬರುತ್ತದೆ. ಮಕ್ಕಳು ಸಮಾಜದಲ್ಲಿ ಯಾವ ರೀತಿ ಬೆಳೆಯಬೇಕು ಎಂಬುದನ್ನು ಪಾಲಕರು ಅರಿತು, ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಬೆಳೆಸಬೇಕು. ಇಲ್ಲದಿದ್ದರೆ ದೇಶವು ಗಂಡಾಂತರಕ್ಕೆ ತುತ್ತಾಗುವದು. ದೇಶ ಹಿತದೃಷ್ಟಿಯಿಂದ ಎಲ್ಲರಲ್ಲೂ ದೇಶ ಪ್ರೇಮ ಜಾಗೃತಗೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಕೆ.ಬಿ. ಧನ್ನೂರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮನೋಭಾವನೆ, ಏಕತೆ ಕುರಿತು ಜಾಗೃತಿ ಮೂಡಿಸುವದು ಅತೀ ಮುಖ್ಯವಾಗಿದೆ ಎಂದರು.

ಇದೇ ವೇಳೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕಾರ್ಯಕ್ರಮದಲ್ಲಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಬಸವರಾಜ ನವಲಗುಂದ, ಯೂಸೂಫ್‌ ಇಟಗಿ, ಅಕ್ಷಯ ಪಾಟೀಲ, ಶಶಿಕಲಾ ಪಾಟೀಲ, ಅಶ್ವಿನ.ಎ. ಪಾಟೀಲ, ಪ್ರಮೀಳಾ ತೋಟಗಂಟಿ, ವೈ.ಎನ್. ಪಾಪಣ್ಣವರ, ಡಾ.ಐ.ಬಿ. ಕೊಟ್ಟೂರಶೆಟ್ಟಿ, ಯು.ಎಲ್. ಪಾಟೀಲ,ಎಸ್‌.ವೈ. ಬಂಟನೂರ ಮುಂತಾದವರು ಉಪಸ್ಥಿತರಿದ್ದರು. ಪ್ರಾಚಾರ್ಯ ವಿ.ಬಿ. ವಾರದ ಸ್ವಾಗತಿಸಿದರು. ಜಿ.ಪಿ. ಪಾಟೀಲ ನಿರೂಪಿಸಿದರು. ಅಪರ್ನಾ ಫಾಗಿ ವಂದಿಸಿದರು.