ಕನ್ನಡಪ್ರಭ ವಾರ್ತೆ ಮುಧೋಳ
ಸಾಹಿತ್ಯ ಸೃಷ್ಟಿಯತ್ತ ಪ್ರತಿಯೊಬ್ಬರೂ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತಿಗಳು ಸಮಾಜದಲ್ಲಿ ಜನ ಓದುವಂತಹ ಕೃತಿಗಳನ್ನು ರಚಿಸಬೇಕೆಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪೂರ ಹೇಳಿದರು. ನಗರದ ಡಾ.ಶಿವಾನಂದ ಕುಬಸದ ಅವರ ಪರ್ಣಕುಟಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಹಾಗೂ ಮುಧೋಳ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ, ಬಾಗಲಕೋಟೆ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೀಳಗಿ, ಬೀಳಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೀಳಗಿ, ಪ್ರಮೋದ ಶಂಕರ ತೆಗ್ಗಿ ಸೌಜನ್ಯ ತೆಗ್ಗಿ ಇವರ ಮದುವೆ ಸವಿನೆನಪಿನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ -2025ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ನಮ್ಮಲ್ಲರ ಮೇಲೆ ಬಹುದೊಡ್ಡ ಜವಾಬ್ದಾರಿಗಳಿವೆ. ಸಾಹಿತಿಗಳು ಸಮಕಾಲಿನ ಅರಿವು ಹೊಂದಬೇಕು. ಕಾವ್ಯಗಳ ಬರೆಯುವುದು ಬಹಳ ಕಷ್ಟದ ಕೆಲಸ, ನಾವು ಪ್ರಶಸ್ತಿಗಳ ಬೆನ್ನು ಹತ್ತದೇ ಅವು ತಾನಾಗಿಯೇ ಬರಬೇಕೆಂದು ಸಾಹಿತಿಗಳಿಗೆ ಕಿವಿಮಾತು ಹೇಳಿದರು.ಚಿಂತನಸಿರಿ ಅಧ್ಯಕ್ಷ ಡಾ.ಶಿವಾನಂದ ಕುಬಸದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ಸೇವೆಯ ಕಾರ್ಯ ನಿರಂತರವಾಗಿ ಮಾಡುತ್ತ ಬಂದಿದೆ. ಲೇಖರನ್ನು ಗುರ್ತಿಸಿ ದತ್ತಿ ಪ್ರಶಸ್ತಿಗಳನ್ನು ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದತ್ತಿ ದಾನಿಗಳ ಆಶಯದಂತೆ ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಲೇಖಕರಿಗೆ, ಕಲಾವಿದರಿಗೆ ಪ್ರೋತ್ಸಾಹಿಸುವುದರ ಜೊತೆಗೆ ಅವರನ್ನು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಸುಮಾರು 150 ಲೇಖಕರಿಗೆ ದತ್ತಿ ಪ್ರಶಸ್ತಿ ನೀಡುತ್ತ ಬಂದಿದೆ. ಹೊಸ ದತ್ತಿ ಸಂಗ್ರಹಿಸುವ ಕಾರ್ಯ ಕಸಾಪ ಮಾಡುತ್ತಿದೆ ಎಂದರು.ಜಿಲ್ಲಾ ತೋಟಗಾರಿಕೆ ವಿಶ್ವವಿದ್ಯಾಲಯ ಹಣಕಾಸು ನಿಯಂತ್ರಣಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅಭಿನಂದನಾ ನುಡಿಗಳನ್ನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಧೋಳ ತಾಲೂಕು ರನ್ನ ಪ್ರತಿಷ್ಠಾನ ಸದಸ್ಯ ಡಾ.ಕೆ. ಉದಪುಡಿ. ಜಿಲ್ಲಾ ವಾಣಿಜ್ಯ ತೆರಿಗೆ ಅಧಿಕಾರಿ ಗಿರೀಶ ಮಂಗಳೂರ, ವಕೀಲ ಪ್ರಕಾಶ ವಸ್ತದ, ಕಲಾದಗಿಯ ಹಿರಿಯ ಪತ್ರಕರ್ತ ರಾ.ಪುರೋಹಿತ, ಸರ್ಕಾರಿ ನೌಕರರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ನಿಡೋಣಿ, ತಾಲೂಕು ಶಶಿ ಟ್ರಸ್ಟ್ ಸಂಚಾಲಕ ಚಂದ್ರಶೇಖರ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಸಿ.ಎಸ್. ನಾಗನೂರ, ಮುಧೋಳ ತಾಲೂಕು ಕಸಾಪ ಅಧ್ಯಕ್ಷ ಆನಂದ ಪೂಜಾರಿ, ರಬಕವಿ-ಬನಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ, ಲೋಕಾಪುರ ಕಸಾಪ ವಲಯ ಘಟಕ ಅಧ್ಯಕ್ಷ ಎಸ್.ಎಂ. ರಾಮದುರ್ಗ, ಬೆಳಗಲಿ ಕಸಾಪ ವಲಯ ಘಟಕ ಅಧ್ಯಕ್ಷ ಮಹಾಂತೇಶ ಕುಂಬಾರ, ಗಲಗಲಿ ಕಸಾಪ ವಲಯ ಘಟಕ ಅಧ್ಯಕ್ಷ ಎಂ.ಪಿ. ಕಾಶಿ, ಬಿ.ಎಫ್. ಹೊರಕೇರಿ, ಬಿಆರ್‌ಪಿ ಸಂಗಮೇಶ ನೀಲಗುಂದ, ಎಂ.ಜಿ. ದಾಸರ, ಬಾಹುಬಲಿ ಬಿರಾದಾರ, ಡಾ.ಶಂಕರ ಬೈಚಬಾಳ, ಮಲ್ಲಿಕಾರ್ಜುನ ಹೆಗ್ಗಳಗಿ, ಜಗದೀಶ ಹಾದಿಮನಿ, ಸುರೇಶ ರಾಜಮಾನೆ, ವಿಷ್ಣು ವರ್ಚಗಲ್, ಜಿಲ್ಲಾ ಮಾದ್ಯಮ ಕಾರ್ಯದರ್ಶಿ ಸಲೀಮ್ ಕೊಪ್ಪದ, ಕಜಾಪ ಅಧ್ಯಕ್ಷ ರಮೇಶ ಅರಕೇರಿ, ರಾಣಿ ಬಡಗಿ, ವಿರೇಶ ಮಡಿವಾಳರ, ಬಾಪು ಖಾಡೆ, ಹಾಗೂ ಸಾಹಿತಿಗಳು, ಲೇಖಕರು ಇದ್ದರು.
ದತ್ತಿ ಪ್ರಶಸ್ತಿ ಪಡೆದ ಲೇಖಕರು: ವಿಜಯಪುರ ಜಿಲ್ಲೆ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ ದತ್ತಿ ಪ್ರಶಸ್ತಿ ಪಡೆದುಕೊಂಡ ಲೇಖಕರಾದ ರುದ್ರಮ್ಮ ಎಸ್. ಗಿಡ್ಡಪ್ಪಗೋಳ, ಹುಸೇನ ಎಂ. ಪತ್ತೇಖಾನ, ನಿಂಗಮ್ಮ ಭಾವಿಕಟ್ಟಿ, ಎಚ್.ಎಸ್. ಗೌಡರ, ಶೀಲಾ ಎಸ್. ಗೌಡರ, ರಜಾಕ್ ನದಾಫ್ ಅವರನ್ನು ಗೌರವಿಸಲಾಯಿತು.
ಬಾಗಲಕೋಟೆ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೀಳಗಿ ದತ್ತಿ ಪ್ರಶಸ್ತಿ ಪಡೆದುಕೊಂಡ ಲೇಖಕರಾದ ಜಯಶ್ರೀ ಭಂಡಾರಿ, ಡಾ.ಶ್ರೀದೇವಿ ಸುವರ್ಣಖಂಡಿ, ಡಾ.ಉಮೇಶ ತಿಮ್ಮಾಪೂರ, ಡಾ.ಯಶವಂತ ಕೊಕ್ಕನವರ, ಡಾ.ಪ್ರಕಾಶ ಖಾಡೆ, ಪ್ರೊ.ಎಂ.ಎಸ್. ಬದಾಮಿ, ರುದ್ರಗೌಡ ಪಾಟೀಲ ಅವರನ್ನು ಗೌರವಿಸಲಾಯಿತು. ಬೀಳಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೀಳಗಿ ದತ್ತಿ ಪ್ರಶಸ್ತಿ ಪಡೆದ ಲೇಖಕರಾದ ಡಾ.ಸಹಜಾನಂದ ಕೆಂಗಲಗುತ್ತಿ, ಪ್ರಮೋದ ಶಂಕರ ತೆಗ್ಗಿ ಸೌಜನ್ಯ ತೆಗ್ಗಿ ಅವರ ಮದುವೆ ಸವಿನೆನಪಿನ ದತ್ತಿ ಪ್ರಶಸ್ತಿ -ಕ್ರಿಯಾಶೀಲ ಲೇಖಕ ಪ್ರಶಸ್ತಿ ಪುರಸ್ಕೃತ ಡಾ.ಆರ್. ನಾಗರಾಜು, ಎಂ.ಡಿ.ಚಿತ್ತರಗಿ ಅವರನ್ನು ಗೌರವಿಸಲಾಯಿತು.₹25 ಸಾವಿರ ದತ್ತಿ ಸ್ಥಾಪನೆ: ಕಸಾಪ ತಾಲೂಕಾಧ್ಯಕ್ಷ ಆನಂದ ಪೂಜಾರಿ ಅವರ ತಂದೆ ಜೀರಗಾಳ ಗ್ರಾಮದ ದಿ.ಸತ್ಯಪ್ಪ ಪೂಜಾರಿ ಹಾಗೂ ಸರ್ಕಾರಿ ನೌಕರರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ನಿಡೋಣಿ ಅವರ ಮಾವ ಮರಿಕಟ್ಟಿ ಗ್ರಾಮದ ದಿ.ಗೋವಿಂದಪ್ಪ ತಿಮ್ಮಪ್ಪ ಸುರಮಂಜಿ ಇವರ ಸ್ಮರಣಾರ್ಥ ಕನ್ನಡ ಸಾಹಿತ್ಯ ಪರಿಷತ್ತಿಗೆ ತಲಾ ₹25 ಸಾವಿರ ಗಳಂತೆ ದತ್ತಿ ಸ್ಥಾಪನೆ ಮಾಡಲಾಯಿತು.
ನೂತನ ಪದಾಧಿಕಾರಿಗಳಿಗೆ ಸನ್ಮಾನ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಬಾಗೇನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪುರವಾರ, ಮುಧೋಳ ತಾಲೂಕು ನೂತನ ಅಧ್ಯಕ್ಷ ತುಕಾರಾಮ ಲಮಾಣಿ ಹಾಗೂ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಅಖಿಲ ಭಾರತಕ್ಕೆ 114ನೇ ರ್‍ಯಾಂಕ್ ಪಡೆದ ಸಂಜಯ ಬಗಲಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹಾಗೂ ಗಣ್ಯರುನ್ನು ಸನ್ಮಾನಿಸಿದರು.