ಡೋಣಿ ಹೂಳೆತ್ತಲು ಇಬ್ಬರು ಸಚಿವರು ಅನುದಾನ ನೀಡಲಿ

| Published : Oct 24 2024, 12:38 AM IST / Updated: Oct 24 2024, 12:39 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಡೋಣಿ ನದಿ ಹೂಳೆತ್ತುವುದು ಹಾಗೂ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿಗೀಡಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಡೋಣಿ ನದಿ ಹೂಳೆತ್ತುವುದು ಹಾಗೂ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿಗೀಡಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.

ಡೋಣಿ ನದಿ ಹೂಳೆತ್ತುವುದು ಅತ್ಯಂತ ಅಗತ್ಯವಾಗಿದೆ, ಹೂಳು ತುಂಬಿಕೊಂಡಿರುವುದರಿಂದ ನದಿಪಾತ್ರಕ್ಕೆ ಪದೇ ಪದೇ ಪ್ರವಾಹ ಬರುತ್ತಿದೆ, ಹೀಗಾಗಿ ಹೂಳೆತ್ತಿದರೆ ಎಲ್ಲಕ್ಕೂ ಪರಿಹಾರ ದೊರಕಲಿದೆ, ಇನ್ನಾದರೂ ಸರ್ಕಾರ ಗಂಭೀರವಾಗಿ ಈ ಕಾರ್ಯದ ಬಗ್ಗೆ ಚಿಂತಿಸಬೇಕು ಎಂದು ಒತ್ತಾಯಿಸಿದರು. ಡೋಣಿ ಹೂಳೆತ್ತಲು ರಾಜ್ಯ ಸರ್ಕಾರದ ವಿಜಯಪುರ ಜಿಲ್ಲೆಯ ಇಬ್ಬರು ಸಚಿವರು ರಾಜ್ಯ ಸರ್ಕಾರದಿಂದ ತಮ್ಮ ಪಾಲಿನ ಅನುದಾನ ನೀಡಿದರೆ ಕೇಂದ್ರ ಸರ್ಕಾರದಿಂದ ಬರುವ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೇ, ಈ ಭಾಗದ ರೈತರ ಭೂಮಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ, ಹಾಗೂ ಕೃಷಿ ಬೆಳೆಗಳಾದ ತೊಗರಿ, ಕಡಲೆ, ಗೋವಿನ ಜೋಳ ಮುಂತಾದ ಬೆಳೆಗಳು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಅವುಗಳಿಗೆ ಸೂಕ್ತ ಬೆಳೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಸಂಜಯಗೌಡ ಬಿ.ಪಾಟೀಲ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ, ಈರಣ್ಣ ರಾವೂರ, ಮಲ್ಲು ಕನ್ನೂರ, ಈರಣ್ಣ ಶಿರಮಗೊಂಡ, ಗುರಣ್ಣ ಜಂಗಮಶೆಟ್ಟಿ, ಗುರಣ್ಣ ಬೂದಿಹಾಳ, ಕಲ್ಮೇಶ ಹಿರೇಮಠ, ರಮೇಶ ಜುಮನಾಳ, ಆನಂದ ಸೋಮಕ್ಕನವರ, ಸಿದ್ದುಗೌಡ ಬಿರಾದಾರ, ವಿಠ್ಠಲ ರಾಮತೀರ್ಥ, ಎಂ.ಟಿ.ಪಾಟೀಲ, ಶ್ರೀಶೈಲ ಕೊಟ್ಯಾಳ, ಸಂಗಪ್ಪ ಕೊಟ್ಯಾಳ ಮುಂತಾದವರು ಇದ್ದರು.