ಸಾರಾಂಶ
ಕನ್ನಡಪ್ರಭ ವಾರ್ತೆ ಮುಗಳಖೋಡರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಹೇಗೆ ಯಶಸ್ವಿಯಾಗಿವೆಯೋ ಹಾಗೆ ರಾಷ್ಟ್ರದಲ್ಲಿಯೂ 25 ಯೋಜನೆಗಳು ಜಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಬರಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಾನು ಕೂಡ ಗೆಲ್ಲಬೇಕಿದೆ. ಹೀಗಾಗಿ ನನಗೆ ನಿಮ್ಮ ಸೇವೆ ಮಾಡಲು ಇದೊಂದು ಅವಕಾಶ ಮಾಡಿಕೊಡಿ. ನಿಮ್ಮ ದನಿಯಾಗಿ ಕಾರ್ಯನಿರ್ವಹಿಸುವೆ ಎಂದು ಭರವಸೆ ನೀಡಿದರು.ತಂದೆ ಸತೀಶ ಜಾರಕಿಹೊಳಿ ಹಾಗೂ ಶಾಸಕ ಮಹೇಂದ್ರ ತಮ್ಮಣ್ಣವರ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನದಿಂದ ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ, ಬಿಜೆಪಿ ಪ್ರಧಾನಿ ಮೋದಿ ಅವರಂತೆ ಸುಳ್ಳು ಹೇಳಿ ದೇಶದ ಜನತೆಗೆ ಮೋಸ ಮಾಡಿದ ಸುಳ್ಳಿನ ಪಕ್ಷ ನಮ್ಮದಲ್ಲ. ನಿಮ್ಮೆಲ್ಲರಿಗೂ ಸಂತೋಷ, ಸಮೃದ್ಧಿ ನೀಡುವ ಪಕ್ಷ ಕಾಂಗ್ರೆಸ್. ರಾಷ್ಟ್ರದ ಅಭಿವೃದ್ಧಿಗೆ ನಿಮ್ಮ ಸೇವೆಗೆ ಸರ್ಕಾರ ಬರಬೇಕಾದರೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಹೆಚ್ಚಿನ ಅಂತರದಿಂದ ಆಯ್ಕೆ ಮಾಡಿ ಎಂದು ಕೋರಿದರು.ಈ ವೇಳೆ ಲಕ್ಷ್ಮಣ ಪನದಿ, ಸದಾಶಿವ ಪನದಿ, ಮಹಾದೇವ ಪನದಿ ಸೇರಿದಂತೆ ಹಲವು ಮುಖಂಡರನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಪಕ್ಷಕ್ಕೆ ಸ್ವಾಗತಿಸಿದರು. ಮುಖಂಡರಾದ ಅಶೋಕ ಕೊಪ್ಪದ, ಡಾ.ಸಿ.ಬಿ.ಕುಲಿಗೊಡ, ಚನ್ನಪ್ಪ ಯಡವಣ್ಣವರ, ಪುರಸಭೆ ಸದಸ್ಯರಾದ ಪರಗೌಡ ಖೆತಗೌಡರ, ರಮೇಶ ಯಡವಣ್ಣವರ, ರಾವಸಾಹೇಬ ಗೌಲೆತ್ತನವರ, ಗೋಪಾಲ ಯಡವಣ್ಣವರ, ಗಂಗಪ್ಪಾ ಗೋಕಾಕ, ಬನಪ್ಪ ಹುಲ್ಲೋಳ್ಳಿ, ಹಣಮಾಸಾಹೇಬ ನಾಯಿಕ, ಕರೆಪ್ಪ ಮಂಟೂರ, ಮುಪ್ಪಯ್ಯ ಹಿರೇಮಠ, ಸಿದ್ದಣ್ಣ ಹೊಸಪೇಟಿ, ಮಹಾಂತೇಶ ಕುರಾಡೆ,, ಜಿಲ್ಲಾ ಮಹಿಳಾ ಅಧ್ಯಕ್ಷೆ ನಿರ್ಮಲಾ ಪಾಟೀಲ, ಜಾಸ್ಮಿನ್ ಅಲಾಸೆ, ಪ್ರದೀಪ ಹಾಲಗುಣಿ, ಭೀಮು ಬದ್ನಿಕಾಯಿ, ಬಸವರಾಜ ಮುಗಳಿಹಾಳ, ಅರ್ಜುನ್ ನಾಯಕವಾಡಿ, ಧಶಗೀರ ಕಾಗವಾಡೆ ಇದ್ದರು.