ಮಹಿಳೆಯರು ಮತ್ತಷ್ಟು ಸಬಲರಾಗಲಿ : ಆವರಗೆರೆ ಚಂದ್ರು

| Published : Nov 26 2024, 12:51 AM IST

ಸಾರಾಂಶ

ದಾವಣಗೆರೆ: ಈಗಾಗಲೇ ಮಹಿಳೆಯರು ಸಬಲೀಕರಣದತ್ತ ದಾಪುಗಾಲು ಇಡುತ್ತಿದ್ದಾರೆ. ಇದು ಸಾಲದು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುವುದರ ಮೂಲಕ ಮತ್ತಷ್ಟು ಸಬಲರಾಗಬೇಕೆಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.

ದಾವಣಗೆರೆ: ಈಗಾಗಲೇ ಮಹಿಳೆಯರು ಸಬಲೀಕರಣದತ್ತ ದಾಪುಗಾಲು ಇಡುತ್ತಿದ್ದಾರೆ. ಇದು ಸಾಲದು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುವುದರ ಮೂಲಕ ಮತ್ತಷ್ಟು ಸಬಲರಾಗಬೇಕೆಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.ಇಲ್ಲಿನ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ಸೋಮವಾರ ಎನ್‌ಎಫ್‌ಐಡಬ್ಲ್ಯೂ ಮಹಿಳಾ ಒಕ್ಕೂಟದಿಂದ ನಡೆದ ಮಹಿಳೆಯರ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಇತ್ತೀಚೆಗೆ ಸಂಘ ಸಂಸ್ಥೆಗಳಿಂದ ಮತ್ತು ಬ್ಯಾಂಕುಗಳಿಂದ ಸಾಲ, ಸೌಲತ್ತು ಪಡೆಯುವುದರ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ ಇದು ಸಾಲದು ಸಮಾಜದ ವಿವಿಧ ಸ್ತರಗಳ ಕ್ಷೇತ್ರಗಳಲ್ಲಿ ಮಹಿಳೆಯರು ಸರಿಸಮನಾಗಿ ಭಾಗವಹಿಸಬೇಕು ಎಂದರು.ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್, ಜಿಲ್ಲಾ ಖಜಾಂಚಿ ಮಹಮ್ಮದ್ ರಫೀಕ್, ಟ್ರಸ್ಟ್ ಸಹ ಕಾರ್ಯದರ್ಶಿ ಮಹಮ್ಮದ್ ಭಾಷಾ ಜಗಲೂರು, ಮುಖಂಡರಾದ ಜಿ.ಯಲ್ಲಪ್ಪ ಮಾತನಾಡಿದರು.

ಎನ್‌ಎಫ್‌ಐಡಬ್ಲ್ಯೂ ರಾಜ್ಯ ಸಮಿತಿ ಸದಸ್ಯೆ ಹೊನ್ನಾಳಿ ಚನ್ನಮ್ಮ ಅಧ್ಯಕ್ಷತೆ ವಹಿಸಿದ್ದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಲ್ಲಮ್ಮ, ಜಿಲ್ಲಾ ಖಜಾಂಚಿ ಸರೋಜಾ, ರಾಜ್ಯಾಧ್ಯಕ್ಷೆ ಎ.ಜ್ಯೋತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಮ್ಮ, ಎಐವೈಎಫ್ ಮುಖಂಡರಾದ ಕೆರನಹಳ್ಳಿ ರಾಜು, ಎ.ತಿಪ್ಪೇಶ್, ದಾದಾಪೀರ್, ಸಿ.ರಮೇಶ್, ಮುಖಂಡರುಗಳಾದ ಹೊಸಳ್ಳಿ ಮಂಜುಳಾ, ಎಂ.ಆರ್.ಕುಸುಮ, ಕೆ.ಸಿ.ನಿರ್ಮಲ, ಗೀತಾ, ಸುಶೀಲ, ವಿಜಯಕುಮಾರಿ, ಹೊನ್ನಾಳಿ ರೇಣುಕಮ್ಮ ಇತರರು ಭಾಗವಹಿಸಿದ್ದರು.