ಆರೋಗ್ಯಕರ ಸಮಾಜ ನಿರ್ಮಾಣಕವಾಗಲಿ: ರಾಜಾ ಕೃಷ್ಣಪ್ಪ ನಾಯಕ

| Published : Feb 13 2024, 12:49 AM IST

ಸಾರಾಂಶ

ಪ್ರಸ್ತುತ ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿದ್ದೇನೆ. ಇದರ ಜಾಗೃತಿ ಮೂಡಿಸಿ ಎಲ್ಲೆಡೆ ಮರಗಿಡ ಬೆಳೆಸಬೇಕಿದೆ.

ಕನ್ನಡಪ್ರಭ ವಾರ್ತೆ ಸುರಪುರ

ಜನಸೇವೆಗಳನ್ನು ಗುರುತಿಸಿ ಸಮಾಜದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿ ನೂತನವಾಗಿ ಆರಂಭಗೊಂಡ ಲಯನ್ಸ್ ಕ್ಲಬ್ ಸದಸ್ಯರ ಮೇಲಿದೆ. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಹೇಳಿದರು.

ನಗರದ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಲಯನ್ಸ್ ಕ್ಲಬ್ ಉದ್ಘಾಟನೆ ಮತ್ತು ರಕ್ತದಾನ ಶಿಬಿರ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಯನ್ಸ್ ಹೊಸ ಸಂಸ್ಥೆಯೂ ಸಮಾಜ ಸೇವೆ ಜಾರಿಗೊಳಿಸಬೇಕಿದೆ. ಸಮಾಜದಲ್ಲಿ ಶೋಷಿತಕ್ಕೆ ಒಳಗಾದವರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

ಕಡ್ಲಪ್ಪನವರ ನಿಷ್ಠಿಮಠದ ಪ್ರಭುಲಿಂಗ ಮಹಾಸ್ವಾಮೀಜಿ ಮಾತನಾಡಿ, ಪ್ರಸ್ತುತ ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿದ್ದೇನೆ. ಇದರ ಜಾಗೃತಿ ಮೂಡಿಸಿ ಎಲ್ಲೆಡೆ ಮರಗಿಡ ಬೆಳೆಸಬೇಕಿದೆ. ವಾಯುಮಾಲಿನ್ಯ ತಡೆಬೇಕು. ಸಮಾಜದ ಏಳ್ಗೆಗೆ ಮಾಡುವ ಕೆಲಸಗಳು ಮನಸ್ಸಿಗೆ ನೆಮ್ಮದಿ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ರಕ್ತವನ್ನು ಮಾನವರು ಕೊಡಬೇಕಿದೆ. ಉತ್ಪಾದನೆ ಮಾಡಲು ಸಾಧ್ಯವಿಲ್ಲ. ರಕ್ತ ನೀಡುವುದರಿಂದ ಮತ್ತೊಂದು ಜೀವ ಉಳಿಸಲು ಸಾಧ್ಯವಾಗುತ್ತದೆ. ರಕ್ತ ನೀಡಿದಾಗ ಜೀವನದಲ್ಲಿ ನಿಜವಾದ ಬದಲಾವಣೆ ಗಮನಿಸಬಹುದು. ಗಂಭೀರ ವೈದ್ಯಕೀಯ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರಿಗೆ ರಕ್ತ ವರ್ಗಾವಣೆ ಸಹಾಯ ಮಾಡುತ್ತದೆ. ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ತಿಳಿಸಿದರು.

ರಕ್ತದಾನ: ಸುರಪುರ ಲಯನ್ಸ್ ಕ್ಲಬ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 41 ಜನರು ರಕ್ತದಾನ ನೀಡಿದರು. ಸಂಗೀತ ಕಾರ್ಯಕ್ರಮವನ್ನು ಶಿವಶರಣಯ್ಯಸ್ವಾಮಿ ಬಳ್ಳುಂಡಗಿಮಠ, ಪ್ರಿಯಾಂಕ ವಿಶ್ವಕರ್ಮ, ಮೋಹನರಾವ ಮಾಳದಕರ್, ರಮೇಶ ಕುಲಕರ್ಣಿ, ರಾಜಶೇಖರ ಗೆಜ್ಜೆ, ಮನೋಜ್ ವಿಶ್ವಕರ್ಮ ಅವರು ನಡೆಸಿಕೊಟ್ಟರು.

ರಾಯಚೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ವೆಂಕಟೇಶ ನಾಯಕ್, ರೀಜಿನಲ್ ಚರ‍್ಮನ್ ಲಯನ್ ರಮೇಶ್ ರಾವ್, ಜಯಲಲಿತಾ ಪಾಟೀಲ್, ಲಯನ್ ಹರಿನಾರಾಯಣ ಭಟ್ಟಡ್‌, ಪಂಕಜ್ ಕುಮಾರ ಜೋಶಿ, ಸಿದ್ದಲಿಂಗಯ್ಯ ಸ್ವಾಮಿ, ಶರಣಬಸಪ್ಪ ಯಾಳವಾರ, ರಾಜಾ ಮುಕುಂದ ನಾಯಕ, ಅಭಿಷೇಕ್ ಝಂವಾರ, ಗೋವರ್ಧನ್ ಝಂವಾರ, ನರೇಶಕುಮಾರ ಜೈನ್, ಶ್ರೀಶೈಲ ಯಂಕಂಚಿ, ಮಂಜುನಾಥ ಗುಳಗಿ, ಪ್ರಕಾಶ ಸಜ್ಜನ್, ಕಿಶೋರಜೈನ್, ವೀರೇಶ ನಾಯಕ, ಡಾ. ಮಲ್ಲನಗೌಡ ಕನಕರೆಡ್ಡಿ, ಪವನಕುಮಾರ ಶರ್ಮಾ, ಪ್ರಭುದೇವ ಚನ್ನಪಟ್ಟಣ ಸೇರಿದಂತೆ ಇತರರಿದ್ದರು.