ಎಲ್ಲ ಜಯಂತಿಗಳನ್ನು ಒಂದೇ ವೇದಿಕೆಯಡಿ ಆಚರಿಸಲಿ

| Published : Apr 08 2024, 01:03 AM IST

ಸಾರಾಂಶ

ಐಎಎಸ್‌ ಅಧಿಕಾರಿಯಾಗಿದ್ದ ಕೆ.ಶಿವರಾಂ ಅವರಿಗೆ ಹಮ್ಮು ಬಿಮ್ಮುಇರಲಿಲ್ಲ, ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಿದ್ದರು.

ಹರಪನಹಳ್ಳಿ: ಸರ್ಕಾರವು ಜಯಂತಿಗಳನ್ನೇ ಜಾತ್ರೆ ರೂಪದಲ್ಲಿ ಆಚರಿಸಿ ಸಾಮರಸ್ಯ ಮೂಡಿಸುವ ಕೆಲಸವಾಗಬೇಕು ಎಂದು ನೀಲಗುಂದದ ಗುಡ್ಡದ ವೀರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳು ಹೇಳಿದರು.

ಅವರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕೆ.ಶಿವರಾಂ ಅಭಿಮಾನಿ ಬಳಗದ ವತಿಯಿಂದ ಈಚೆಗೆ ನಿಧನರಾದ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಅವರಿಗೆ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು.

ಐಎಎಸ್‌ ಅಧಿಕಾರಿಯಾಗಿದ್ದ ಕೆ.ಶಿವರಾಂ ಅವರಿಗೆ ಹಮ್ಮು ಬಿಮ್ಮುಇರಲಿಲ್ಲ, ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಿದ್ದರು. ಸಮಸ್ಯೆ, ದೂರುಗಳು ಬಂದಲ್ಲಿ ಸ್ಥಳಕ್ಕೆ ಹೋಗಿ ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಸದಾ ಕಾಲ ದಲಿತರ ಮಕ್ಕಳು, ಬಡವರ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಅವರಿಗೆ ಸರ್ಕಾರದ ಎಲ್ಲ ನೆರವುಗಳನ್ನು ದೊರಕುವಂತೆ ಮಾಡುತ್ತಿದ್ದರು. ಇದರ ಜೊತೆಗೆ ವೈಯಕ್ತಿಕವಾಗಿ ಸಹಾಯವನ್ನು ಮಾಡುತ್ತಿದ್ದರು ಎಂದು ಹೇಳಿದರು.

ಜೀವನದಲ್ಲಿ ಶ್ರೇಷ್ಠವಾದ ಶಿಸ್ತು ಸಂಸ್ಕಾರಯುತ ಬದಕನ್ನು ನಡೆಸಿ ಭಾರತದ ಇತಿಹಾಸದಲ್ಲೇ ಕನ್ನಡದಲ್ಲಿ ಐಎಎಸ್ ಪದವಿ ಪಾಸುಮಾಡಿ ಉತ್ತಮ ಅಧಿಕಾರಿಯಾಗಿ.ಚಲನ ಚಿತ್ರನಟರಾಗಿ ಸಮಾಜಸಂಘಟನೆಮಾಡಿ ಉಸಿರು ನಿಂತರೂ ಉತ್ತಮ ಹೆಸರು ಮಾಡಿರುವ ಕೆ.ಶಿವರಾಂ ಆದರ್ಶಗಳನ್ನು ತಾವೆಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಿ ಎಂದರು.

ಜಿಲ್ಲಾ ಚಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಬಣ್ಣದ ಮನೆ ಸೋಮಶೇಖರ್, ಶರಣ ಬಸವ ಬುದ್ದ ಭೀಮಜೀ ವಿದ್ಯಾಸಂಸ್ಥೆಯ ಸಂಸ್ಥಾಪಕ ಗುಂಡಗತ್ತಿ ಕೊಟ್ರಪ್ಪ, ಕಸಾಪ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿದರು.

ಅಂಬೇಡ್ಕರ್ ಸಮಾಜದ ತಾಲೂಕು ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ ಉಪನ್ಯಾಸಕ ಅಜ್ಜಯ್ಯ, ಮುಖ್ಯ ಶಿಕ್ಷಕರಾದ ಅರ್ಜುನಪರಸಪ್ಪ, ಸಹದೇವ ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಸಣ್ಣ ಅಜ್ಜಯ್ಯ, ಹಗರಿಬೊಮ್ಮನಹಳ್ಳಿ ಛಲವಾದಿ, ಮಹಾಸಭಾದ ಅಧ್ಯಕ್ಷ ಗಾಳಿ ಬಸವರಾಜ ಮಾತನಾಡಿದರು.

ನಿಸರ್ಗ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕಲ್ಯಾಣದವರ್, ಶಿಕ್ಷಕರಾದ ಬಸವರಾಜ, ಶರಣ ಬಸವ ಬುದ್ದ ಭೀಮಜೀ ವಿದ್ಯಾಸಂಸ್ಥೆಯ ಸಂಸ್ಥಾ ಪಕ ಕಾರ್ಯದರ್ಶಿ ಕೊಟ್ರಮ್ಮ, ಮುಖಂಡರಾದ ಮುತ್ತಿಗಿ ಮಲ್ಲಿಕಾರ್ಜುನ, ಮತ್ತಿಹಳ್ಳಿಕೆಂಚಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಮ್ಮ, ನಿಟ್ಟೂರುನಾಗರಾಜ, ಮರಿಯಮ್ಮನಹಳ್ಳಿ ಮಂಜಣ್ಣ ಸೇರಿದಂತೆ ಇತರರು ಇದ್ದರು.